ಸ್ವತಂತ್ರ, ಸ್ವಾಯತ್ತ, ಸಾಂವಿಧಾನಿಕ ಸಂಸ್ಥೆಯಾಗಿರುವ ದೇಶದ ಚುನಾವಣಾ ಆಯೋಗ ಪ್ರಜಾಪ್ರಭುತ್ವವನ್ನು ದೃಢಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು ಅದನ್ನು ದುರ್ಬಳಕೆ ಮಾಡಿಕೊಳ್ಳುವ ಯಾವುದೇ ಪ್ರಯತ್ನಗಳ ವಿರುದ್ಧ ಜನತೆಯೇ ಜಾಗೃತಿ ವಹಿಸಬೇಕಾಗಿದೆ. ಅಂಥ ಒಂದು ಪ್ರಯತ್ನ ಬೆಂಗಳೂರಿನಲ್ಲಿ ಆರಂಭವಾಗಿರುವುದು ಪ್ರಜಾಪ್ರಭುತ್ವವನ್ನು ರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಸ್ವಾಗತಾರ್ಹ ಪ್ರಯತ್ನವಾಗಿದೆ.
ಜನಾದೇಶವನ್ನು ಎಷ್ಟು ಬಗೆಯಲ್ಲಿ ತಿರುಚಿ ಒಂದು ಪಕ್ಷಕ್ಕೆ ಅನುಕೂಲ ಮಾಡಿಕೊಡಬಹುದು ಎಂಬುದನ್ನು ಚುನಾವಣಾ ಆಯೋಗವೇ ಒದಗಿಸಿದ ದತ್ತಾಂಶ (ಮತಪಟ್ಟಿ) ಆಧರಿಸಿ ನಡೆಸಿದ ವಿಶ್ಲೇಷಣೆ ರಾಜಕೀಯ ಪಕ್ಷಗಳಲ್ಲಿ ಸಂಚಲನ ಮೂಡಿಸಿದೆ. ಚುನಾವಣೆ ಅಕ್ರಮದಲ್ಲಿ ಹೊಸ ಆವಿಷ್ಕಾರದಂತೆ ಕಂಡು ಬಂದ ಮತ ಕಳವಿನ ಪರಿಕಲ್ಪನೆ ಹೇಗೆಲ್ಲ ಅನುಷ್ಠಾನಕ್ಕೆ ಬಂದು ಸರ್ಕಾರದ ರಚನೆಯಲ್ಲಿ ಪಾತ್ರವಹಿಸುತ್ತಿದೆ ಎಂಬುದನ್ನು ಲೋಕಸಭೆಯ ವಿರೋಧ ನಾಯಕ ರಾಹುಲ್ ಗಾಂಧಿ ಮತ ವಿಶ್ಲೇಷಣೆಯ ಮೂಲಕ ಸಾರ್ವಜನಿಕಗೊಳಿಸಿ ಚುನಾವಣೆ ಆಯೋಗದ ಹೊಣೆಗಾರಿಕೆಯನ್ನು ಎಚ್ಚರಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗ ಬಿಜೆಪಿಗೆ ನೆರವಾಗಿ ಮೋದಿ ಅವರನ್ನು ಪ್ರಧಾನಿ ಮಾಡಲು ಮತಗಳ್ಳತನ ಮಾಡಲು ಆಸ್ಪದ ನೀಡಿ ಸಂವಿಧಾನಕ್ಕೆ ಅಪಚಾರವೆಸಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮತ ಕದ್ದು ಪ್ರಧಾನಿಯಾಗಿದ್ದಾರೆ. ಇಪ್ಪತ್ತೆöÊದು ಕ್ಷೇತ್ರಗಳಲ್ಲಿ ಬಿಜೆಪಿ ೩೫ ಸಾವಿರ ಮತಗಳ ಒಳಗೆ ಗೆದ್ದಿದೆ. ಅಲ್ಲೆಲ್ಲ ಅಕ್ರಮಗಳಾಗಿರುವ ಸಾಧ್ಯತೆ ನಿಚ್ಚಳವಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಮತಗಳ್ಳತನದ ವಿರುದ್ದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ `ನಮ್ಮ ಮತ ನಮ್ಮ ಹಕ್ಕು, ಸಂವಿಧಾನ ಉಳಿಸಿ’ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆಯಲ್ಲಿ ವ್ಯಾಪಕವಾಗಿ ಅಕ್ರಮಕ್ಕೆ ಆಸ್ಪದ ಕಲ್ಪಿಸಿದೆ. ಕೇವಲ ೨೫ ಹೆಚ್ಚುವರಿ ಸೀಟುಗಳಲ್ಲಿ ಮೋದಿ ಪ್ರಧಾನಿ ಆಗಿದ್ದಾರೆ. ಇಪ್ಪತ್ತೆöÊದು ಕ್ಷೇತ್ರಗಳಲ್ಲಿ ಅವರು ಕೇವಲ ಮೂವತ್ತು ಸಾವಿರ ಮತಗಳ ಅಂತರದಿAದ ಗೆದ್ದಿದ್ದಾರೆ. ಮತಕಳವಿನಿಂದ ಈ ಗೆಲವು ಆಗಿದೆ. ಇದಕ್ಕೆ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಒಂದು ವಿಧಾನಸಭೆ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಸಾಕ್ಷ ಸಿಕ್ಕಿದೆ ಎಂಬ ವಿವರಗಳನ್ನು ಪ್ರಕಟಿಸಿದ್ದಾರೆ.
ಚುನಾವಣಾ ಆಯೋಗ ನೀಡಿದ ಮತಪಟ್ಟಿಯನ್ನು ಆಧರಿಸಿ ಮತದಾರಪಟ್ಟಿಯಲ್ಲಿ ಎಂಥ ಲೋಪವಾಗಿದೆ ಎಂಬುದಕ್ಕೆ ಒಂದೇ ಮನೆಯ ವಿಳಾಸದಲ್ಲಿ ಎಂಬತ್ತು ಮತದಾರರು ನೋಂದಣಿಯಾಗಿರುವುದನ್ನು ಒಂದು ನಿದರ್ಶನವಾಗಿ ನೀಡಿದ್ದ ರಾಹುಲ್ ಗಾಂಧಿ ಅವರ ಆರೋಪದ ಸತ್ಯಾಸತ್ಯತೆಗೆ ರಾಷ್ಟಿçÃಯ ಸುದ್ದಿ ವಾಹಿನಿಯೊಂದು ಪ್ರತ್ಯಕ್ಷ ಸಮೀಕ್ಷೆ ನಡೆಸಿದ್ದು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಖಚಿತಪಡಿಸಿರುವುದು ಈ ವಿವಾದವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಒತ್ತಾಸೆಯಾಗಿದೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಆಗಿರುವ ಮತಗಳ್ಳತನವನ್ನು ಈಗ ದಾಖಲೆ ಸಮೇತ ಬಹಿರಂಗ ಮಾಡಿದ್ದೇವೆ. ಈ ಕಾರ್ಯ ಮಾಡಲು ನಮಗೆ ಆರು ತಿಂಗಳು ಸಮಯ ಹಿಡಿಯಿತು. ಚುನಾವಣಾ ಆಯೋಗ ವಿದ್ಯುನ್ಮಾನ ಮಾಹಿತಿ ಹಾಗೂ ಮತಗಟ್ಟೆಯ ವೀಡಿಯೊ ರೆಕಾರ್ಡಿಂಗ್ ಗಳನ್ನು ನೀಡಿದರೆ ಇಡೀ ದೇಶದಲ್ಲಿ ಆಗಿರುವ ಮತಗಳ್ಳತನವನ್ನು ನಾವು ಸಾಬೀತು ಪಡಿಸುತ್ತೇವೆ’ ಎಂದು ರಾಹುಲ್ ಗಾಂಧಿಯವರು ನೀಡಿದ ಸವಾಲಿಗೆ ಚುನಾವಣಾ ಆಯೋಗ ಸಮಜಾಯಿಶಿ ನೀಡಬೇಕಾಗುತ್ತದೆ.
ಚುನಾವಣಾ ಆಯೋಗ ಹಿಂದಿನ ೧೦ ವರ್ಷಗಳ ಎಲೆಕ್ಟಾçನಿಕ್ ರೂಪದ ಮತಪಟ್ಟಿಯನ್ನು ಕೊಡಬೇಕು. ಮತಗಟ್ಟೆಯ ವಿಡಿಯೋ ರೆಕಾರ್ಡಿಂಗ್ ನೀಡಬೇಕು. ಅದನ್ನು ಕೊಡದೇ ಇದ್ದರೆ ಅವರು ಅಪರಾಧ ಮುಚ್ಚಿಡುತ್ತಿದ್ದಾರೆ ಎಂದು ಅರ್ಥವಾಗುತ್ತದೆ’ ಎಂಬ ಹೇಳಿಕೆಗೆ ಚುನಾವಣಾ ಆಯೋಗ ಸೂಕ್ತ ಉತ್ತರ ನೀಡಬೇಕಾಗುತ್ತದೆ.
ಚುನಾವಣಾ ಆಯೋಗ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಅನುಕೂಲವಾಗುವಂತೆ ವರ್ತಿಸುತ್ತಿದೆ. ಮತಕಳವಿಗೆ ಆಸ್ಪದ ನೀಡಿರುವುದು ಅದರ ಒಂದು ಭಾಗ ಎನ್ನುವುದನ್ನು ರಾಹುಲ್ ಗಾಂಧಿಯವರು ಎತ್ತಿ ತೋರಿಸುತ್ತಿದ್ದಂತೆ ಅವರ ಆರೋಪಗಳಿಗೆ ಪುರಾವೆ ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ನಾಯಕರು ಪ್ರತಿ ಹೇಳಿಕೆಗಳನ್ನು ನೀಡುತ್ತಾ ಚುನಾವಣಾ ಆಯೋಗದ ಕಾರ್ಯವಿಧಾನವನ್ನು ಸಮರ್ಥಿಸಿಕೊಳ್ಳುತ್ತಿರುವುದನ್ನು ಸಾರ್ವಜನಿಕರು ಗಮನಿಸಬೇಕಾಗಿದೆ.
`ಬಿಜೆಪಿ ಈ ಹಿಂದೆ ಕರ್ನಾಟಕದಲ್ಲಿ ಹಣ ಕೊಟ್ಟು (ಆಪರೇಷನ್ ಕುತಂತ್ರದ ಮೂಲಕ) ಸರ್ಕಾರವನ್ನೇ ಕಳ್ಳತನ ಮಾಡಿತ್ತು’ ಎಂದಿರುವ ರಾಹುಲ್ ಗಾಂಧಿಯವರು, `ಮತಗಳ್ಳತನದ ವಿರುದ್ದ ತಮ್ಮದು ಒಂಟಿ ದನಿಯಲ್ಲ, ಇಡೀ ದೇಶದ ಎಲ್ಲ ವಿರೋಧ ಪಕ್ಷಗಳು ನಮ್ಮ ಜತೆ ನಿಂತಿವೆ. ಮತಗಳ್ಳತನಕ್ಕೆ ನಮ್ಮ ಬಳಿ ಸಾಕ್ಷ÷್ಯ ಇದೆ. ಚುನಾವಣಾ ಆಯೋಗ ನಮಗೆ ಎಲ್ಲ ಮಾಹಿತಿ ಕೊಡಲಿ. ಎಲ್ಲೆಲ್ಲಿ ಮತಗಳ್ಳತನವಾಗಿದೆ ಎಂಬುದನ್ನು ಬಯಲು ಮಾಡುತ್ತೇವೆ’ ಎಂದು ಸವಾಲು ಹಾಕಿದ್ದಕ್ಕೆ ಬಿಜೆಪಿ ನಾಯಕರು ಅಸಂಬದ್ಧವಾಗಿ ಟೀಕಿಸುವ ನೀಡುವ ಮೂಲಕ ಆ ಆರೋಪಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
ದೇಶದ ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ತನ್ನ ಸ್ವತಂತ್ರ, ಸ್ವಾಯತ್ತ ಸ್ವರೂಪವನ್ನು ಉಳಿಸಿಕೊಂಡು ಪಾರದರ್ಶಕವಾಗಿ, ನ್ಯಾಯಬದ್ಧವಾಗಿ ಜನತೆಯ ಮತಾಧಿಕಾರವನ್ನು ರಕ್ಷಿಸುವ ಕೆಲಸ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ದೃಢವಾಗುತ್ತದೆ, ಬಲಗೊಳ್ಳುತ್ತದೆ. ಚುನಾವಣಾ ಆಯೋಗದ ಸ್ವಾಯತ್ತತೆಯನ್ನು ದುರ್ಬಲಗೊಳಿಸಿ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಅನುಕೂಲವಾಗುವಂತೆ ವರ್ತಿಸುವುದಕ್ಕೆ ಆಸ್ಪದ ಕಲ್ಪಿಸಿದರೆ ಅದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ದುರ್ಬಲವಾಗಲಿದೆ ಎಂಬುದನ್ನು ರಾಜ್ಯದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಅರ್ಥಮಾಡಿಕೊಳ್ಳಬೇಕಿದೆ. ಚುನಾವಣಾ ಆಯೋಗ ಸೇರಿದಂತೆ ಸಾಂವಿಧಾನಿಕ ಸ್ವರೂಪ ಇರುವ ಎಲ್ಲ ಸಂಸ್ಥೆಗಳು ದುರ್ಬಲವಾಗದಂತೆ ನೋಡಿಕೊಳ್ಳುವ ಎಚ್ಚರಿಕೆಯನ್ನು ಎಲ್ಲ ರಾಜಕೀಯ ಪಕ್ಷಗಳು ವಹಿಸುವುದು ಅವಶ್ಯಕವಾಗಿದೆ.
For More Updates Join our WhatsApp Group :