ನೀವು ಪದವೀಧರರಾಗಿದ್ದು ಬ್ಯಾಂಕ್ನಲ್ಲಿ ಕೆಲಸ ಮಾಡೊ ಆಸೆ ಇದ್ರೆ ಇಲ್ಲಿದೆ ನಿಮಗೊಂದ ಅದ್ಭುತ ಅವಕಾಶ. ಅದೇನಂದ್ರೆ ಭಾರತ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವಂತಹ IDBI ಅಂದ್ರೆ Industrial Development Bank of India ದಲ್ಲಿ 2024–25 ನೇ ಸಾಲಿನ ಸೇಲ್ಸ್ & ಆಪರೇಷನ್ ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಖಾಲಿ ಇರುವಂತಹ 1000 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ. ಸಾಮಾನ್ಯ ವರ್ಗದವರಿಗೆ 448, ಎಸ್ಸಿಗೆ 127, ಎಸ್ಟಿಗೆ 94, ಆರ್ಥಿಕ ದುರ್ಬಲ ವರ್ಗದವರಿಗೆ 100 ಮತ್ತು ಇತರೆ ಹಿಂದುಳಿದ ವರ್ಗದವರಿಗೆ 231 ಹುದ್ದೆಗಳನ್ನು ವಿಂಗಡಿಸಲಾಗಿದೆ. ಕನಿಷ್ಠ 20 ವರ್ಷ ಹಾಗೂ ಗರಿಷ್ಠ 25 ವರ್ಷದ ಒಳಗಿರುವ ಪದವಿ ಮುಗಿಸಿರುವ ಅಭ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್ಸಿ, ಎಸ್ಟಿ ಹಾಗೂ ಅಂಗವಿಕಲ ಅಭ್ಯರ್ಥಿಗಳು 250 ರೂ ಮತ್ತು ಇನ್ನಿತರ ಎಲ್ಲಾ ವರ್ಗದವರು 1,050 ರೂ ಅರ್ಜಿ ಶುಲ್ಕ ಪಾವತಿಸಬೇಕು. ಎಕ್ಸಿಕ್ಯೂಟಿವ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 29,000ರೂ. ನಿಂದ 31,000ರೂ. ವರೆಗೆ ಇರಲಿದೆ. ಈ ಎಲ್ಲಾ ಅರ್ಹತಾ ಮಾನದಂಡಗಳನ್ನು ಹೊಂದಿರುವ ಅಭ್ಯರ್ಥಿಗಳು ನವೆಂಬರ್ 16 ರ ಒಳಗೆ ಅರ್ಜಿ ಸಲ್ಲಿಸೊದನ್ನ ಮರಿಬೇಡಿ.
ಅರ್ಜಿ ಲಿಂಕ್: www.idbibank.in