ಲೋಕಾಯುಕ್ತಕ್ಕೆ ದೂರು ಸಲ್ಲಿಕೆ; ಸಚಿವರ ಪಾತ್ರದ ಬಗ್ಗೆ ತನಿಖೆ ಅಗತ್ಯ.
ಬೆಂಗಳೂರು : ಲಂಚ ಪಡೆವಾಗ ಅಬಕಾರಿ ಡಿಸಿ ಜಗದೀಶ್ ನಾಯಕ ಬಂಧನ ಪ್ರಕರಣ ಸಂಬಂಧ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರಗೂ ಸಂಕಷ್ಟ ಸಾಧ್ಯತೆ ಇದೆ. ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವಿರುದ್ಧ ಲೋಕಾಯುಕ್ತ ಸಂಸ್ಥೆಗೆ ಲಕ್ಷ್ಮೀನಾರಾಯಣ ಎಂಬವರು ದೂರು ನೀಡಿದ್ದು, ಪ್ರಕರಣದಲ್ಲಿ ಸಚಿವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅಬಕಾರಿ ಡಿಸಿ ಜಗದೀಶ್ ಮಾತಾಡಿದ್ದ ಆಡಿಯೋವನ್ನು ಸಹ ಲಕ್ಷ್ಮೀ ನಾರಾಯಣ ಬಿಡುಗಡೆ ಮಾಡಿದ್ದರು. ಹೀಗಾಗಿ ಸಚಿವರ ಪಾತ್ರದ ಬಗ್ಗೆ ತನಿಖೆ ನಡೆಸುವಂತೆಯೂ ದೂರಲ್ಲಿ ಆಗ್ರಹಿಸಲಾಗಿದೆ.
For More Updates Join our WhatsApp Group :




