ಹೈದ್ರಾಬಾದ್: ದೀಪಾವಳಿ ಹಬ್ಬದ ಪ್ರಯುಕ್ತ ಬೈಕ್ ನಲ್ಲಿ ಪಟಾಕಿ ಖರೀದಿಸಿ ಕೊಂಡೊಯ್ಯೋರ ಸಂಖ್ಯೆಯೇ ಹೆಚ್ಚು. ನೀವು ಹೀಗೆ ಕೊಂಡೊಯ್ಯೋ ಮುನ್ನ ಎಚ್ಚರಿಕೆ ವಹಿಸಿ.
ಹೈದರಾಬಾದಿನ ಏಲೂರಿನಲ್ಲಿ ಬೈಕ್ ನಲ್ಲಿ ಸವಾರ ಹಾಗೂ ಮತ್ತೋರ್ವ ಹಿಂಬದಿಯಲ್ಲಿ ಪಟಾಕಿಯನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು.
ಈ ವೇಳೆಯಲ್ಲಿ ಗುಂಡಿಯೊಂದರಲ್ಲಿ ಬೈಕ್ ಇಳಿದಿದ್ದೇ ತಡ ಕೈಯಲ್ಲಿದ್ದಂತ ಪಟಾಕಿ ಕೆಳಗೆ ಬಿದ್ದಿದೆ. ಆ ಬಳಿಕ ಪಟಾಕಿ ಸ್ಪೋಟಗೊಂಡು ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಎಲೂರು ಪಟ್ಟಣದಲ್ಲಿ ಪಟಾಕಿ ಸ್ಫೋಟದಲ್ಲಿ ಒಬ್ಬ ವ್ಯಕ್ತಿ ಸಜೀವ ದಹನವಾಗಿದ್ದು, ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನದಲ್ಲಿ ಪಟಾಕಿ ಸಾಗಿಸುತ್ತಿದ್ದಾಗ ಗಂಗಮ್ಮ ದೇವಸ್ಥಾನದ ಬಳಿ ರಸ್ತೆ ಗುಂಡಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಈರುಳ್ಳಿ ಬಾಂಬ್ ಗಳಿದ್ದ ಚೀಲ ನೆಲದ ಮೇಲೆ ಬಿದ್ದಿದೆ. ಪಟಾಕಿಗಳು ಸ್ಫೋಟಗೊಂಡು ಬೈಕ್ ಸವಾರ ಸಾವನ್ನಪ್ಪಿದ್ದಾನೆ.
ಈ ಎಲ್ಲಾ ದೃಶ್ಯಾವಳಿಯು ಸಮೀಪದಲ್ಲೇ ಇದ್ದಂತ ಮನೆಯೊಂದರ ಸಿಸಿಟಿವಿಯಲ್ಲಿ ದಾಖಲಾಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೀಡಿಯೋ ನೋಡಿದಂತ ಜನರು ಬೆಚ್ಚಿ ಬಿದ್ದಿದ್ದಾರೆ.