ಮಂಗಳೂರು: ಧರ್ಮಸ್ಥಳದ ಬುರುಡೆ ಮತ್ತು ಅಸ್ಥಿಪಂಜರ ಶೋಧ ಪ್ರಕರಣವು ನಿರೀಕ್ಷೆಯಂತೆ ಮುಗಿಯದಿದ್ದು, ಹೊಸ ಸ್ಫೋಟಕ ಬೆಳವಣಿಗೆಯೊಂದಿಗೆ ಮತ್ತೊಂದು ಅಧ್ಯಾಯ ಆರಂಭವಾಗಿದೆ. ಎಸ್ಐಟಿ ತಂಡ ಮತ್ತೆ ಬಂಗ್ಲೆಗುಡ್ಡದ ಕಾಡಿಗೆ ಬಂದು ಶವ ಶೋಧಕ್ಕೆ ಸೆಕೆಂಡ್ ಇನಿಂಗ್ಸ್ ಶುರುಮಾಡಿದ್ದು, ಅಲ್ಲಿ ಅಲ್ಪಸ್ವಲ್ಪ ಮೂಳೆಗಳು ಪತ್ತೆಯಾಗಿವೆ.
ಮೂಳೆ ಪತ್ತೆಯಾದ ಭಾಗದಿಂದ soil sample ತೆಗೆದುಕೊಂಡಿದ್ದು, ಅದರ ತಪಾಸಣೆಗೂ ಸೆಕೆಂಡ್ ಸೋಕೋ ತಂಡ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ಭೂಮಿಯ ಮೇಲ್ಭಾಗದಲ್ಲಿದ್ದ ಬಟ್ಟೆ ತುಂಡುಗಳು ಕೂಡ ಶೋಧಕಾರರಿಗೆ ದೊರೆತಿದ್ದು, ಇದರಿಂದ ಪ್ರಕರಣದ ಕುತೂಹಲ ಮತ್ತಷ್ಟು ತೀವ್ರವಾಗಿದೆ.
ವಿಠ್ಠಲ್ಗೌಡನ ಹೇಳಿಕೆ ಈ ಬೆಳವಣಿಗೆಯ ಮೇಲೆ ವಿಶೇಷ ಗಮನ ಸೆಳೆದಿದ್ದು, ಇದರಿಂದ ಸಂಶಯ ಮತ್ತು ಅನುಮಾನಗಳಿಗೆ ಹೊಸ ದಿಕ್ಕು ಸಿಕ್ಕಿದ್ದು, ನ್ಯಾಯಾಂಗ ಹಾಗೂ ಪೊಲೀಸ್ ತನಿಖೆಗೆ ಮಹತ್ವದ ತಳ್ಳುಕು ನೀಡಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
For More Updates Join our WhatsApp Group :
