ಹಿರಿಯ ನಾಗರಿಕರಿಗೆ ಶೇ. 8.5ರವರೆಗೆ FDಬಡ್ಡಿ – ವಿವಿಧ ಬ್ಯಾಂಕುಗಳ ಇತ್ತೀಚಿನ ದರಗಳ ಲಿಸ್ಟ್.

ಹಿರಿಯ ನಾಗರಿಕರಿಗೆ ಶೇ. 8.5ರವರೆಗೆ FDಬಡ್ಡಿ – ವಿವಿಧ ಬ್ಯಾಂಕುಗಳ ಇತ್ತೀಚಿನ ದರಗಳ ಲಿಸ್ಟ್.

ಬೆಂಗಳೂರು: ಫಿಕ್ಸೆಡ್ ಡೆಪಾಸಿಟ್ (FD) ಈಗಲೂ ಭಾರತದಲ್ಲಿ ಜನಪ್ರಿಯ ಹೂಡಿಕೆ ಆಯ್ಕೆಯಾಗಿದೆ. ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಡುವ ಎಫ್ಡಿಗೆ ವಾಣಿಜ್ಯ, ಸ್ಮಾಲ್ ಫೈನಾನ್ಸ್ ಮತ್ತು ಸಹಕಾರಿ ಬ್ಯಾಂಕುಗಳು ಆಕರ್ಷಕ ಬಡ್ಡಿದರಗಳನ್ನು ನೀಡುತ್ತಿವೆ. ಸಾಮಾನ್ಯ ಹೂಡಿಕೆದಾರರಿಗಿಂತ ಹಿರಿಯ ನಾಗರಿಕರಿಗೆ (60 ವರ್ಷ ಮೇಲ್ಪಟ್ಟವರಿಗೆ) 0.50% ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ. 80 ವರ್ಷ ಮೇಲ್ಪಟ್ಟ ಸೂಪರ್ ಸೀನಿಯರ್‌ಗಳಿಗೆ ಕೆಲವು ಬ್ಯಾಂಕುಗಳು ಇನ್ನೂ ಹೆಚ್ಚಿನ ಬಡ್ಡಿ ಆಫರ್ ಮಾಡುತ್ತಿವೆ.

ಸ್ಮಾಲ್ ಫೈನಾನ್ಸ್ ಬ್ಯಾಂಕುಗಳ ಎಫ್ಡಿ ದರಗಳು (ಸೆಪ್ಟೆಂಬರ್ 2025)

* ಉತ್ಕರ್ಷ್ SFB: ಶೇ. 8.50 (2-3 ವರ್ಷ)

* ಸ್ಲೈಸ್ SFB: ಶೇ. 8.50 (18 ತಿಂಗಳು)

* ಸೂರ್ಯೋದಯ್ SFB: ಶೇ. 8.40 (5 ವರ್ಷ)

* ಜನ SFB:ಶೇ. 8.25 (3 ವರ್ಷ)

* ಉಜ್ಜೀವನ್ SFB: ಶೇ. 7.95 (2 ವರ್ಷ)

* ESAF, ಈಕ್ವಿಟಾಸ್, AU, ಯೂನಿಟಿ SFBಗಳು: ಶೇ. 7.25 – 8.0

ಖಾಸಗಿ ವಾಣಿಜ್ಯ ಬ್ಯಾಂಕುಗಳು

* ಯೆಸ್ ಬ್ಯಾಂಕ್: ಶೇ. 7.75

* ಆರ್ಬಿಎಲ್ ಬ್ಯಾಂಕ್: ಶೇ. 7.70

* ಬಂಧನ್ ಬ್ಯಾಂಕ್:ಶೇ. 7.70

* ಐಡಿಎಫ್ಸಿ & ಇಂಡಸ್ಇಂಡ್ ಬ್ಯಾಂಕ್: ಶೇ. 7.50

* ಎಕ್ಸಿಸ್, ಎಚ್ಡಿಎಫ್ಸಿ, ಐಸಿಐಸಿಐ, ಕೋಟಕ್: ಶೇ. 7.10 – 7.50

ಸರ್ಕಾರಿ ಬ್ಯಾಂಕುಗಳು:

* SBI, ಬ್ಯಾಂಕ್ ಆಫ್ ಬರೋಡಾ, PNB, ಯೂನಿಯನ್ ಬ್ಯಾಂಕ್: ಶೇ. 7.10

* ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಶೇ. 7.50

* ಇಂಡಿಯನ್ ಬ್ಯಾಂಕ್, IOB, ಪಂಜಾಬ್ & ಸಿಂದ್, BOM: ಶೇ. 7.20 – 7.25

* ಕೆನರಾ ಬ್ಯಾಂಕ್:ಶೇ. 7.0

ಸೂಪರ್ ಸೀನಿಯರ್‌ಗಳಿಗೆ ಹೆಚ್ಚುವರಿ ಲಾಭ

80 ವರ್ಷಕ್ಕಿಂತ ಮೇಲ್ಪಟ್ಟ ಹೂಡಿಕೆದಾರರಿಗೆ PNB, ಆರ್ಬಿಎಲ್, ಇಂಡಿಯನ್ ಬ್ಯಾಂಕ್ ಮುಂತಾದವು 0.25% ಹೆಚ್ಚುವರಿ ಬಡ್ಡಿ ನೀಡುತ್ತವೆ.

ಟಿಪ್: ಹೆಚ್ಚಿನ ಬಡ್ಡಿ ಬಯಸುವ ಹಿರಿಯರು ಸ್ಮಾಲ್ ಫೈನಾನ್ಸ್ ಬ್ಯಾಂಕುಗಳಲ್ಲಿ ಎಫ್ಡಿ ಪರಿಗಣಿಸಬಹುದು. ಆದರೆ ಹೂಡಿಕೆ ಮಾಡುವ ಮುನ್ನ ಆರ್‌ಬಿಐ ನಿಯಂತ್ರಣ ಮತ್ತು ಬ್ಯಾಂಕಿನ ಕ್ರೆಡಿಟ್ ರೇಟಿಂಗ್ ಪರಿಶೀಲನೆ ಅಗತ್ಯ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *