ಮಂಗಳೂರು : ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ವಿಚಾರವಾಗಿ ಸುಳ್ಳು ಮಾಹಿತಿ ನೀಡಿದ್ದ ವಕೀಲ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಧರ್ಮಸ್ಥಳ ನಿವಾಸಿ ರಘುರಾಮ ಶೆಟ್ಟಿ ನೀಡಿದ ದೂರು ಆಧರಿಸಿ ಎಫ್ಐಆರ್ ದಾಖಲಾಗಿದೆ. ಧರ್ಮಸ್ಥಳದಲ್ಲಿ ಯಥೇಚ್ಛವಾಗಿ ಹೆಣ ಹೂತಿದ್ದಾಗಿ ವಕೀಲ ಮಂಜುನಾಥ್ ಜುಲೈ 30 ರಂದು ಮಾಧ್ಯಮ ಪ್ರಕಟಣೆ ಹೊರಡಿಸಿದ್ದರು.
ವಕೀಲ ಮಂಜುನಾಥ್ ಹೇಳಿದ್ದೇನು?
ಪಾಯಿಂಟ್ ನಂಬರ್ 1ರಲ್ಲಿ 2 ಹೆಣ, ಪಾಯಿಂಟ್ ನಂ 2, 3ರಲ್ಲಿ ತಲಾ 2 ಹೆಣ, ಪಾಯಿಂಟ್ ನಂಬರ್ 4 ಮತ್ತು 5ರಲ್ಲಿ ತಲಾ 6 ಹೆಣ, ಪಾಯಿಂಟ್ ನಂಬರ್ 6, 7ರಲ್ಲಿ ತಲಾ 8 ಹೆಣ, ಪಾಯಿಂಟ್ ನಂಬರ್ 9ರಲ್ಲಿ 6-7 ಹೆಣ, ಪಾಯಿಂಟ್ ನಂಬರ್ 10ರಲ್ಲಿ 3, 11ರಲ್ಲಿ 9 ಹೆಣ,. ಪಾಯಿಂಟ್ ನಂಬರ್ 12ರಲ್ಲಿ 4-5 ಹೆಣ ಪಾಯಿಂಟ್ ನಂ 13ರಲ್ಲಿ ಯಥೇಚ್ಛವಾಗಿ ಹೆಣ ಹೂತಿದ್ದಾಗಿ ವಕೀಲ ಮಂಜುನಾಥ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದನು. ಈ ಸಂಬಂಧ ರಘುರಾಮ ಶೆಟ್ಟಿ ಅವರು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಆಧರಿಸಿ, ಬಿಎನ್ಎಸ್ ಕಾಯ್ದೆ 353(1)ಬಿ, 353(2)ರ ಅಡಿ ಎಫ್ಐಆರ್ ದಾಖಲಾಗಿದೆ.
ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ಅನಾಮಿಕನ ವಿಚಾರಣೆ
ಉತ್ಖನನ ಕಾರ್ಯ ಸದ್ಯಕ್ಕೆ ಸ್ಥಗಿತಗೊಂಡಿದೆ. ಶೋಧ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಆದರೆ, ಎಸ್ಐಟಿ ತನಿಖೆ ನಿಂತಿಲ್ಲ. ಅನಾಮಿಕ ದೂರುದಾರನನ್ನು ಬೆಳ್ತಂಗಡಿ ಎಸ್ಐಟಿ ಕಚೇರಿಯಲ್ಲಿ ತೀವ್ರ ವಿಚಾರಣೆಗೊಳಪಡಿಸಲಾಗಿದೆ. ಮತ್ತೊಬ್ಬ ದೂರುದಾರ ಜಯಂತ್ ಕೂಡಾ ಎಸ್ಐಟಿ ಕಚೇರಿಗೆ ಬಂದಿದ್ದಾರೆ.
For More Updates Join our WhatsApp Group :