ಪಟಾಕಿ ಸಂಗ್ರಹ ಶೆಡ್ಗೆ ಬೆಂಕಿ: 150 ಜನರಿಗೆ ಗಾಯ, 8 ಮಂದಿ ಸ್ಥಿತಿ ಗಂಭೀರ..!

ಪಟಾಕಿ ಸಂಗ್ರಹ ಶೆಡ್ಗೆ ಬೆಂಕಿ: 150 ಜನರಿಗೆ ಗಾಯ, 8 ಮಂದಿ ಸ್ಥಿತಿ ಗಂಭೀರ..!

ಕೇರಳ: ಪಟಾಕಿ ಅಪಘಾತ ಸಂಭವಿಸಿದ ಹಿನ್ನೆಲೆ ಬರೊಬ್ಬರಿ 150 ಜನರಿಗೆ ಗಾಯ ಗೊಂಡಿದ್ದು, 8 ಮಂದಿ ಗಂಭೀರ ಗಾಯಗೊಂಡ ಘಟನೆ ಕಾಸರಗೂಡು ಜಿಲ್ಲೆಯಲ್ಲಿ ನಡೆದಿದೆ.

ಇಲ್ಲಿನ ಅಂಜಿತಂಬಲಂನ ವಿರೇಕಾವುನಲ್ಲಿ ತೆಯ್ಯಂ ಉತ್ಸವದ ಆಚರಣೆಯಲ್ಲಿ ದೇವಸ್ಥಾನ ಒಂದರ ಬಳಿ ತಡರಾತ್ರಿ 12.30ರ ಸುಮಾರು ಸಂಭವಿಸಿದೆ.

ಪಟಾಕಿ ಸಿಡಿಸುವ ವೇಳೆ ಪಕ್ಕದಲ್ಲಿದ್ದ ಶೆಡ್ವೊಂದಕ್ಕೆ ಬೆಂಕಿ ತಗುಲಿದೆ. ಶೆಡ್ನಲ್ಲಿ ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಂಗ್ರಹಿಸಲಾಗಿತ್ತು. ಹೀಗಾಗಿ, ಶೆಡ್ನಿಂದ ದೊಡ್ಡ ಮಟ್ಟದಲ್ಲಿ ಹೊಗೆ ಬಂದಿದೆ. ಇದನ್ನರಿತ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನರು ಓಡಲಾರಂಭಿಸಿದ್ದು, ಏಕಾಏಕಿ ಪಟಾಕಿ ಸಿಡಿದು ಬೆಂಕಿ ಹೊತ್ತಿ ಉರಿದಿದೆ. ಶೆಡ್ ಪಕ್ಕದಲ್ಲಿದ್ದರಿಗೆ ಬೆಂಕಿ ಕಿಡಿಗಳು ಬಿದ್ದು ಗಾಯಗಳಾಗಿವೆ ಎಂದು ವರದಿಯಾಗಿದೆ. ಅಲ್ಲದೆ, ಇದಕ್ಕೆ ಪೂರಕ ಎಂಬತೆ ದುರಂತ ಕ್ಷಣಗಳು ವಿಡಿಯೋಗಳಲ್ಲಿ ಕೂಡ ಸರೆಯಾಗಿದೆ.

ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಎಲ್ಲರೂ ಹಬ್ಬದಲ್ಲಿ ಉತ್ಸವದಲ್ಲಿ ಮಿಂದಿದದ್ದೆವು, ಏಕಾಏಕಿ ದೊಡ್ಡ ಶಬ್ಧ ಬಂತು. ಶೆಡ್ನಿಂದ ಹೊಗೆ ಜತೆಗೆ ಬೆಂಕಿ ಬರಲಾಂರಭಿಸಿತು. ಇದರಿಂದ ಭಯದಿಂದ ಯುವಕರು, ಮಹಿಳೆಯರು, ಮಕ್ಕಳು ಸೇರಿದಂತೆ ವೃದ್ಧರು ಒಬ್ಬರ ಮೈಮೇಲೆ ಒಬ್ಬರು ಬೀಳುವಂತೆ ಕಿರುಚುತ್ತಾ ಓಡಿ ಹೊರ ಬಂದೆವು. ಈ ಸಂದಂರ್ಭದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯ ಆಗಿದೆ. 8 ರಿಂದ 9 ಜನಕ್ಕೆ ದೊಡ್ಡ ಮಟ್ಟದಲ್ಲಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಗಾಯಳುಗಳನ್ನು ಕೂಡಲೇ ಕಾಸರಗೋಡು, ಮಂಗಳೂರು ಸೇರಿದಂತೆ ಸುತ್ತಮುತ್ತಲಿನ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡವರ ಕೆಲವರ ದೇಹ ಶೇ.80 ರಷ್ಟು ಸುಟ್ಟಿದೆ ಎಂದು ಅಲ್ಲಿನ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ಅಪಾಘತಕ್ಕೆ ಕಾರಣವೇನು ಎಂಬುವುದು ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದ್ದು, ಸ್ಥಳದಿಂದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಮೇಲ್ನೋಟಕ್ಕೆ ನೋಡುವುದಾರೆ ಪಟಾಕಿ ಸಂಗ್ರಹ ಮಾಡುವ ಶೆಡ್ ಪಟಾಕಿ ಸಿಡಿಸಿದ ಸ್ಥಳದಿಂದ ಪಕ್ಕದಲ್ಲಿಯೇ ಇದೆ. ಇವರು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ತಗೆದುಕೊಂಡಿಲ್ಲ, ಪಟಾಕಿ ಸಂಗ್ರಹಿಸಲು ಪರವಾನಿಗೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *