ಕ್ಯಾನ್ಸರ್ ಬಗ್ಗೆ ಕೇಳಿದರೆ ಜನರು ಹೆದರುತ್ತಾರೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಗೆ ಸಂಬಂಧಿಸಿದ ಪ್ರಕರಣಗಳು ತುಂಬಾ ಹೆಚ್ಚುತ್ತಿವೆ. ಮಾತ್ರವಲ್ಲ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಕಂಡುಬರುತ್ತಿದ್ದು, ಅನೇಕರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರಂಭಿಕ ಹಂತಗಳಲ್ಲಿ ರೋಗಲಕ್ಷಣಗಳ ಆಧಾರದ ಮೇಲೆ ಪತ್ತೆಹಚ್ಚಬಹುದಾಗಿದ್ದರೂ ಕೂಡ ಆದರೆ ನಿರ್ಲಕ್ಷ್ಯ ಮತ್ತು ಸರಿಯಾದ ತಪಾಸಣೆ ಮಾಡದಿರುವುದು ಮತ್ತಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಆದರೆ ಈ ರೀತಿ ಕಂಡುಬರುವ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು, ಆರೋಗ್ಯ ತಜ್ಞರಾದ ಲೀಮಾ ಮಹಾಜನ್ ಅವರು ಕೆಲವು ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದು ಅವು ಯಾವುವು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹಿಂದೆಲ್ಲಾ ಬಿಪಿ, ಶುಗರ್ ಎಂದರೆ ಜನ ಹೆದರುತ್ತಿದ್ದರು. ಆದರೆ ಈಗ, ಹೆಚ್ಚು ಹೆಚ್ಚು ಜನರಲ್ಲಿ ಈ ಕಾಯಿಲೆಗಳು ಕಂಡುಬರುತ್ತಿದ್ದು ಜನ ಒಗ್ಗಿಕೊಂಡು ಬಿಟ್ಟಿದ್ದಾರೆ. ಈ ರೀತಿಯ ಕಾಯಿಲೆಗಳಿಗೆ ಹೆದರುವುದೇ ಇಲ್ಲವೆಂದಲ್ಲ ಆದರೆ ದೀರ್ಘಕಾಲದ ಕಾಯಿಲೆಗಳಿಗೆ ಅಂಜುವಷ್ಟು ಇವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಈ ದೊಡ್ಡ ದೊಡ್ಡ ಕಾಯಿಲೆಗಳು ಒಮ್ಮೆ ಬಂದರೆ ಅವು ಸುಲಭವಾಗಿ ಹೋಗುವುದಿಲ್ಲ. ಅವುಗಳನ್ನು ನಿಯಂತ್ರಿಸುವುದನ್ನು ಬಿಟ್ಟು ಬೇರೆ ದಾರಿಯೂ ಇರುವುದಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ದಿನದಿಂದ ದಿನಕ್ಕೆ ಕ್ಯಾನ್ಸರ್ (Cancer) ರೋಗಿಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು ಹೆಚ್ಚಿನ ಜನರನ್ನು ಬಾಧಿಸುತ್ತಿದೆ. ಒಂದು ಕಾಲದಲ್ಲಿ ಬಹಳ ವಿರಳವಾಗಿದ್ದ ಈ ರೋಗವು ಈಗ ಕುಟುಂಬದಲ್ಲಿ ಒಬ್ಬರಲ್ಲಿ ಕಂಡುಬರುತ್ತಿದೆ. ಅದರಲ್ಲಿಯೂ ಮಹಿಳೆಯರಲ್ಲಿ ಕಂಡು ಬರುವ ಸ್ತನ ಕ್ಯಾನ್ಸರ್ ಗಂಭೀರ ಸಮಸ್ಯೆಗಳನ್ನು ಉಂಟುಮಾಡುತ್ತಿದೆ. ಈ ರೋಗಗಳ ಕೆಲವು ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಇದರ ನಿರ್ಲಕ್ಷ್ಯವು ರೋಗ ಬೆಳವಣಿಗೆಯಾಗಲು ಅನುವು ಮಾಡಿಕೊಡುತ್ತದೆ. ಈ ವಿಷಯವಾಗಿ ಪೌಷ್ಟಿಕತಜ್ಞೆ ಲೀಮಾ ಮಹಾಜನ್ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, ಸ್ತನ ಕ್ಯಾನ್ಸರ್ ಅನ್ನು ಔಷಧಿಗಳಿಂದ ಮಾತ್ರವಲ್ಲದೆ ಕೆಲವು ರೀತಿಯ ಆಹಾರದಿಂದಲೂ ಕಡಿಮೆ ಮಾಡಬಹುದು ಎಂದಿದ್ದಾರೆ. ಹಾಗಾದರೆ ಆ ಆಹಾರಗಳು ಯಾವವು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ದಾಳಿಂಬೆ
ನಿಮಗೆ ತಿಳಿದಿರಬಹುದು ದಾಳಿಂಬೆ ಹಣ್ಣು ಅನೇಕ ರೀತಿಯ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ. ಇದು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದ್ದು ಜೀವಸತ್ವ ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ದಾಳಿಂಬೆ ಬೀಜಗಳು ರಕ್ತಹೀನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುವುದರ ಜೊತೆಗೆ ಹೃದಯದ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇನ್ನು ದಾಳಿಂಬೆ ಬೀಜಗಳು ಸಹ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಬಹಳ ಉಪಯುಕ್ತವಾಗಿವೆ. ಅವು ಮಧುಮೇಹವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತವೆ. ಅವುಗಳಲ್ಲಿರುವ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುತ್ತವೆ. ಅದರಲ್ಲಿಯೂ ವಿಶೇಷವಾಗಿ ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ. ಅದಕ್ಕಾಗಿಯೇ ಮಹಿಳೆಯರು ಈ ದಾಳಿಂಬೆ ಹಣ್ಣನ್ನು ನಿಯಮಿತವಾಗಿ ಸೇವನೆ ಮಾಡಬೇಕು ಎಂದು ಪೌಷ್ಟಿಕತಜ್ಞೆ ಲೀಮಾ ಮಹಾಜನ್ ಹೇಳುತ್ತಾರೆ.
ಸೋಯಾ ಉತ್ಪನ್ನಗಳು
ಸಾಮಾನ್ಯವಾಗಿ ಸೋಯಾ ಉತ್ಪನ್ನಗಳು ಅಂದರೆ ಸೋಯಾ ಹಾಲಿನ ತೋಫು, ಸೋಯಾ ಬೀಜಗಳು ಮತ್ತು ಸೋಯಾ ಸಾಸ್‌ಗಳು ಸ್ತನ ಕ್ಯಾನ್ಸರ್ ಕೋಶಗಳು ಬೆಳೆಯುವುದನ್ನು ತಡೆಯುತ್ತವೆ. ಏಕೆಂದರೆ ಸೋಯಾಬೀನ್‌ನಿಂದ ತಯಾರಿಸಿದ ಉತ್ಪನ್ನಗಳಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತದೆ ಮಾತ್ರವಲ್ಲ, ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿರುತ್ತದೆ. ಇವು ಹೃದಯ ಸಂಬಂಧಿ ಕಾಯಿಲೆಗಳಿಂದ ರಕ್ಷಿಸಲು ಸಹ ಸಹಾಯ ಮಾಡುತ್ತವೆ. ಸೋಯಾದಲ್ಲಿರುವ ಐಸೊಫ್ಲೇವೋನ್‌ಗಳು ಈಸ್ಟ್ರೊಜೆನ್ ಹಾರ್ಮೋನುಗಳ ಸರಿಯಾಗಿ ಬಿಡುಗಡೆಯಾಗಲು ಸಹಾಯ ಮಾಡುತ್ತವೆ. ಇದು ಹಾರ್ಮೋನ್ ಸಂಬಂಧಿತ ಸಮಸ್ಯೆಗಳನ್ನು ತಡೆಯುತ್ತದೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುವಲ್ಲಿ ಅವು ಪ್ರಮುಖ ಪಾತ್ರ ವಹಿಸುತ್ತವೆ.
ಕೆಲವು ತರಕಾರಿಗಳು
ಕೆಲವು ರೀತಿಯ ತರಕಾರಿಗಳು ಕ್ಯಾನ್ಸರ್ ಕೋಶಗಳನ್ನು ತಡೆಗಟ್ಟುವಲ್ಲಿ ಬಹಳ ಮುಖ್ಯವಾಗಿವೆ. ಅವುಗಳಲ್ಲಿ ಬ್ರೊಕೊಲಿ, ಹೂಕೋಸು ಮತ್ತು ಎಲೆಕೋಸು ಸೇರಿವೆ. ಅವು ಸಲ್ಫೊರಾಫೇನ್ ಅನ್ನು ಹೊಂದಿರುತ್ತವೆ, ಇದು ಯಕೃತ್ತನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ ಮತ್ತು ಈಸ್ಟ್ರೊಜೆನ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅದೇ ರೀತಿ ಅವು ಕ್ಯಾನ್ಸರ್ ಗೆಡ್ಡೆಗಳ ಬೆಳವಣಿಗೆಯನ್ನು ತಡೆಯುತ್ತವೆ. ಇನ್ನು ಬ್ರೊಕೊಲಿಯಲ್ಲಿ ವಿಟಮಿನ್ ಸಿ ಮತ್ತು ಕೆ ಇರುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು ತೂಕ ನಷ್ಟದ ವರೆಗೆ ಎಲ್ಲದಕ್ಕೂ ಸಹಾಯ ಮಾಡುತ್ತದೆ. ಮಾತ್ರವಲ್ಲ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುವಲ್ಲಿ ಸಲ್ಫೊರಾಫೇನ್ ಪ್ರಮುಖ ಪಾತ್ರ ವಹಿಸುತ್ತದೆ. ಅಷ್ಟೇ ಅಲ್ಲ, ಇದು ಹೃದಯದ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ ಮತ್ತು ಮಧುಮೇಹವನ್ನು ನಿಯಂತ್ರಿಸಲು ವಿಶೇಷವಾಗಿ ಉಪಯುಕ್ತವಾಗಿದೆ. ಇದು ಹಾರ್ಮೋನ್ ಅಸಮತೋಲನ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ನೆಲ್ಲಿಕಾಯಿ ಅಥವಾ ಪೇರಳೆ
ಕ್ಯಾನ್ಸರ್ ಕೋಶಗಳು ಬೆಳೆಯದಂತೆ ತಡೆಯಲು, ಆಹಾರದಲ್ಲಿ ಸೇರಿಸಬೇಕಾದ ಕೆಲವು ಆಹಾರಗಳಲ್ಲಿ ನೆಲ್ಲಿಕಾಯಿ ಮತ್ತು ಪೇರಳೆಯೂ ಒಂದು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ನೆಲ್ಲಿಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಇವು ದೇಹವನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತವೆ, ದೇಹದಿಂದ ಸಂಗ್ರಹವಾದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ. ಇನ್ನು ಪೇರಳೆಯೂ ಕೂಡ ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಗಮನಾರ್ಹವಾಗಿ ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ, ಈ ಎರಡನ್ನೂ ನಿಯಮಿತವಾಗಿ ಆಹಾರದಲ್ಲಿ ಸೇರಿಸುವುದು ಬಹಳ ಪ್ರಯೋಜನಕಾರಿ.
ಅಗಸೆ ಬೀಜಗಳು
ಕ್ಯಾನ್ಸರ್ ತಡೆಗಟ್ಟಲು ಸೇವಿಸಬೇಕಾದ ಮತ್ತೊಂದು ಅಗತ್ಯ ಆಹಾರವೆಂದರೆ ಅದು ಅಗಸೆ ಬೀಜ. ಇದು ಲಿಗ್ನಾನ್‌ಗಳಲ್ಲಿ ಸಮೃದ್ಧವಾಗಿವೆ, ಇವುಗಳನ್ನು ಫೈಟೊಈಸ್ಟ್ರೊಜೆನ್‌ಗಳು ಎಂದೂ ಕರೆಯುತ್ತಾರೆ. ಅವು ಈಸ್ಟ್ರೊಜೆನ್ ಹಾರ್ಮೋನುಗಳು ಅತಿಯಾದ ಬಿಡುಗಡೆ ಮಾಡದೆಯೇ ಸಮತೋಲನಗೊಳಿಸಲು ಸಹಾಯ ಮಾಡುತ್ತವೆ. ಮಾತ್ರವಲ್ಲ, ಅವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತವೆ. ಹಾಗಾಗಿ ಅಗಸೆ ಬೀಜಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಸೇವಿಸುವುದು ಬಹಳ ಒಳ್ಳೆಯದು. ಪರ್ಯಾಯವಾಗಿ, ಅವುಗಳನ್ನು ಮೊಸರು, ಸಲಾಡ್‌ಗಳು ಅಥವಾ ಸ್ಮೂಥಿಗಳಿಗೆ ಸೇರಿಸಬಹುದು. ಅಗಸೆ ಬೀಜಗಳ ಜೊತೆಗೆ, ಆಲಿವ್ ಎಣ್ಣೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಪಾಲಿಫಿನಾಲ್‌ಗಳು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತದೆ. ಅವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಸಹ ತಡೆಯುತ್ತವೆ. ಇತರ ಅಡುಗೆ ಎಣ್ಣೆಗಳ ಬದಲಿಗೆ ಆಲಿವ್ ಎಣ್ಣೆಯನ್ನು ಬಳಸುವುದು ಸೂಕ್ತ.
For More Updates Join our WhatsApp Group :
