ನವದೆಹಲಿ:ಭಾರತದ ಶಕ್ತಿ, ಸ್ಫೂರ್ತಿ ಮತ್ತು ದೃಢ ನಾಯಕತ್ವದ ಪ್ರತಿರೂಪರಾದ ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರ 108ನೇ ಜನ್ಮಜಯಂತಿಯನ್ನು ಇಂದು ದೇಶಾದ್ಯಂತ ಆಚರಿಸಲಾಗುತ್ತದೆ ಈ ಸಂದರ್ಭದಲ್ಲಿ ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ರವರು ನವದೆಹಲಿಯ ಶಕ್ತಿ ಸ್ಥಳದಲ್ಲಿ ಇಂದಿರಾ ಗಾಂಧಿಯ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಗೌರವ ಸಲ್ಲಿಸಿದರು.
“ರಾಷ್ಟ್ರದ ಪ್ರಗತಿ, ಏಕತೆ ಮತ್ತು ಸಾಮರ್ಥ್ಯವನ್ನು ಬಲಪಡಿಸಲು ಶ್ರೀಮತಿ ಇಂದಿರಾ ಗಾಂಧಿ ಯವರು ಮಾಡಿದ ಅಪರೂಪದ ಕೊಡುಗೆಗಳು ಇಂದಿಗೂ ನಮ್ಮ ರಾಷ್ಟ್ರಕ್ಕೆ ದಾರಿದೀಪವಾಗಿವೆ.ಅವರ ಅಚಲ ಸಂಕಲ್ಪ, ದೂರದೃಷ್ಟಿ ಮತ್ತು ರಾಷ್ಟ್ರಭಕ್ತಿಯು ಪ್ರತಿಯೊಬ್ಬ ಭಾರತೀಯನಿಗೂ ಶಾಶ್ವತ ಸ್ಫೂರ್ತಿ,”
ಇಂದಿರಾ ಗಾಂಧಿಯವರ ಆಡಳಿತದಲ್ಲಿ ದೇಶ ಕಂಡ ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನ ಅಭಿವೃದ್ಧಿಗಳನ್ನು ದೇಶವಾಸಿಗಳು ವಿಶೇಷವಾಗಿ ಸ್ಮರಿಸುತ್ತಿದ್ದಾರೆ. ರಾಷ್ಟ್ರೀಯ ಏಕತೆ ಮತ್ತು ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಅವರು ತೋರಿದ ದೃಢನಿಲುವು ಇಂದಿಗೂ ಪ್ರಸ್ತುತವಾಗಿದೆ ಎಂದರು.
For More Updates Join our WhatsApp Group :

