ಬೆಂಗಳೂರು: ಇದೆ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಗತಕಾಲದ ಅಪರೂಪದ ಕಾರುಗಳ ಜಗತ್ತು ನಗರದ ಪ್ಯಾಲೇಸ್ ಮೈದಾನದ ತ್ರಿಪುರವಾಸಿನ ಗೇಟ್ ನಲ್ಲಿ ಇಂದಿನಿAದ ಆರಂಭವಾದ ಆಟೋ ಷೋ ನಲ್ಲಿ ಅನಾವರಣಗೊಂಡಿದೆ. ಕಾಲದ ಜೊತೆಗಿನ ಅದ್ಬುತ ಪಯಣವನ್ನು ಸಿಲಿಕಾನ್ ಸಿಟಿಯ ಜನರ ಮುಂದೆ ತಂದು ನಿಲ್ಲಿಸದೆ.
ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು “ಪಯಣ” ವಸ್ತು ಸಂಗ್ರಹಾಲಯ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಸಾರ್ವಜನಿಕರ ವೀಕ್ಷಣೆಗೆ ತರೆದಿಟ್ಟಿದೆ. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಿ.ವೀರೇಂದ್ರ ಹೆಗ್ಗಡೆ ಪಯಣ ಸಂಸ್ಥೆಗೆ ಮಾರ್ಗದರ್ಶಕರಾಗಿದ್ದಾರೆ. ವಿಂಟೇಜ್ ಕಾರುಗಳು ಮತ್ತು ಛಾಯಾಗ್ರಹಣದಲ್ಲಿನ ಹೆಗ್ಗಡೆಯವರ ಆಸಕ್ತಿ ಈ ಸಂಗ್ರಹವನ್ನು ಹುಟ್ಟುಹಾಕಿದೆ.
ಇಲ್ಲಿ ಪ್ರದರ್ಶನಕ್ಕಿರುವ ಪ್ರತಿಯೊಂದು ಕಾರು ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ಕೇವಲ ಕಾರುಗಳ ಇತಿಹಾಸ ಮಾತ್ರವಲ್ಲದೆ ನಾವೀನ್ಯತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ತರೆದಿಟ್ಟಿದೆ. ವಾಹನ ವಿನ್ಯಾಸದ ವಿಕಾಸ ಮತ್ತು ಉದ್ಯಮವನ್ನು ರೂಪಿಸಿದ ಪ್ರಮುಖ ಕ್ಷಣಗಳನ್ನು ನೋಡಿ ಅರ್ಥಮಾಡಿಕೊಳ್ಳಬಹುದಾಗಿದೆ.
ಶ್ರೀರಂಗಪಟ್ಟಣದ ಬಳಿಯಿರುವ ಪಯಣ ಸಂಸ್ಥೆಯು ವಿಂಟೇಜ್ ಆಟೋಮೊಬೈಲ್‌ಗಳ ಸೌಂದರ್ಯ ಮತ್ತು ಇಂಜಿನಿಯರಿAಗ್ ಅದ್ಭುತಗಳನ್ನು ತೋರ್ಪಡಿಸುವ ಇತಿಹಾಸದ ದಾರಿದೀಪವಾಗಿ ನಿಂತಿದೆ. ನಮ್ಮ ಮ್ಯೂಸಿಯಂ ಸಂಗ್ರಹಕ್ಕಿAತ ಹೆಚ್ಚಾಗಿ ಶೈಕ್ಷಣಿಕ ಪ್ರವಾಸದಂತೆ ಗೋಚರಿಸುತ್ತದೆ. ಮೋಟಾರಿಂಗ್‌ನ ಸುವರ್ಣ ಯುಗಕ್ಕೆ ಮರು ಜೀವವನ್ನು ನೀಡಿದೆ. ಇಲ್ಲಿನ ಪ್ರತಿಯೊಂದು ಕಾರು ಒಂದು ಕಥೆಯನ್ನು ಹೇಳುತ್ತದೆ. ಪ್ರತಿ ಪ್ರದರ್ಶನವು ಆಟೋಮೋಟಿವ್ ಶ್ರೇಷ್ಠತೆಯ ಒಂದು ಅಧ್ಯಾಯವನ್ನು ತೆರೆದಿಡುತ್ತದೆ. ಈ ಟೈಮ್‌ಲೆಸ್ ಕ್ಲಾಸಿಕ್‌ಗಳ ಪರಂಪರೆಯನ್ನು ಅನ್ವೇಷಿಸಲು, ಕಲಿಯಲು ಮತ್ತು ಸ್ಫೂರ್ತಿ ಪಡೆಯಲು ಬೆಂಗಳೂರಿನಲ್ಲಿ ಸಹ ಪ್ರದರ್ಶನವನ್ನು ಏರ್ಪಡಿಸಲಾಗಿದೆ “ಪಯಣ” ಮ್ಯೂಸಿಯಂ ನ ಮ್ಯಾನೇಜರ್ ವಿವೇಕ್ ತಿಳಿಸಿದ್ದಾರೆ.
ಪಯಣ ಮ್ಯೂಸಿಯಂ ವಿಂಟೇಜ್ ಕಾರುಗಳ ಬಹುದೊಡ್ಡ ಸಂಗ್ರಹವನ್ನು ಹೊಂದಿದೆ, ಇದು ಮಂಗಳೂರಿನ ಬಳಿಯ ಧರ್ಮಸ್ಥಳದಲ್ಲಿರುವ ಮಂಜುಷಾ ಮ್ಯೂಸಿಯಂನ ವಿಸ್ತರಣೆಯಾಗಿದೆ. ಸ್ಟಾಂಡರ್ಡ್ ೨೦೦೦, ಕಾಂಟೆಸ್ಸಾ, ಅಂಬಾಸಿಡರ್, ಮಾರುತಿ ಝೆನ್, ಫಿಯೆಟ್ ಪಾಲಿಯೋ, ರೀವಾ, ಮಟಿಜ್, ಡಾಲ್ಫಿನ್, ಮಾರಿಸ್ ಮೊದಲಾದ ಕಾರುಗಳು ನಮ್ಮ ಸಂಗ್ರದಲ್ಲಿವೆ ಎಂದಿದ್ದಾರೆ. ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಸಂಬಧಿಸಿದ ತಂತ್ರಜ್ಞಾನಗಳು ಮತ್ತು ನಾವೀನ್ಯತೆಗಳಿಗೆ ಸಂಬAಧಿಸಿದ ಆಟೋಮೋಟಿವ್ ಮತ್ತು ಇವಿಯ ಪ್ರಗತಿಯನ್ನು ಪ್ರದರ್ಶಿಸಲು ಪರಿಪೂರ್ಣ ವೇದಿಕೆಯನ್ನು ನಮ್ಮ ಆಟೋ ಷೋ ನೀಡಿದೆ. ಪಯಣ ವಸ್ತುಸಂಗ್ರಹಾಲಯ ೨೩ ಎಕರೆಗಳಲ್ಲಿ ಹರಡಿದ್ದು ಅಲ್ಲಿ ವಿನೂತನ ೬೯ ವಾಹನಗಳನ್ನು ಸಂಹ್ರಹಿಸಿದೆ. ೧೯೨೫ ರಿಂದ ವಿಂಟೇಜ್ ಕಾರುಗಳಿಂದ ಹಿಡಿದು ಹೊಸ ಮಾದರಿ ಕಾರುಗಳು ವೀಕ್ಷಣೆಗೆ ಇವೆ. ಅಲ್ಲಿನ ಕೆಲ ಕಾರುಗಳನ್ನು ತಂದು ಸಿಲಿಕಾನ್ ಸಿಟಿಯ ಜನರ ವೀಕ್ಷಣೆಗೆ ವೇದಿಕೆ ಕಲ್ಪಿಸಲು ಸಂತಸ ತಂದಿದೆ ಎಂದು ಆಟೋ ಷೋ ನ ಮಾರ್ಕೆಟಿಂಗ್ ಅಂಡ್ ಸೇಲ್ಸ್ ಡೈರಕ್ಟರ್ ನರೇಶ್ ಪ್ರಗತಿ ಟಿವಿಗೆ ತಿಳಿಸಿದ್ದಾರೆ.