ಕಾಡಹಂದಿ ಬೇಟೆಗಾರರನ್ನು ಮಾಲು ಸಮೇತ ಬಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ.

ಕಾಡಹಂದಿ ಬೇಟೆಗಾರರನ್ನು ಮಾಲು ಸಮೇತ ಬಂದಿಸಿದ ಅರಣ್ಯ ಇಲಾಖೆ ಸಿಬ್ಬಂದಿ.

ತುಮಕೂರು: ಶಿರಾ ತಾಲೂಕು ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮದಲ್ಲಿ ವಿದ್ಯುತ್ ತಂತಿ ಪ್ರವಹಿಸಿ ಕಾಡು ಹಂದಿಗಳನ್ನು ಬೇಟೆಯಾಡುತ್ತಿದ್ದ ತಂಡವನ್ನು ಅರಣ್ಯ ಇಲಾಖೆ ಸಿಬ್ಬಂದಿ, ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬುಕ್ಕಾಪಟ್ಟಣ ಚಿಂಕಾರ ವನ್ಯಜೀವಿಧಾಮ ವ್ಯಾಪ್ತಿಗೆ ಸೇರುವ ಜನಕಲ್ ಗ್ರಾಮದಲ್ಲಿ ಕಾಡು ಹಂದಿಗಳಿಗೆ ವಿದ್ಯುತ್ ತಂತಿ ಪ್ರವಹಿಸಿ ಕೊಂದು ಮಾಂಸವನ್ನು ಮಾರಾಟ ಮಾಡುತ್ತಿದ್ದ ತಂಡವನ್ನು ತಿಪಟೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಭರತ್ ತಳವಾರ್ ರವರ ಮಾರ್ಗದರ್ಶನದಲ್ಲಿ ಬುಕ್ಕಾಪಟ್ಟಣ ಅರಣ್ಯ ವಲಯದ ವಲಯ ಅರಣ್ಯ ಅಧಿಕಾರಿಗಳಾದ ಚಂದನ್ ಆರ್ ರವರ ನೇತೃತ್ವದಲ್ಲಿ ಬಂಧಿಸಲಾಗಿದೆ ಬಂದಿತರನ್ನು ತಿಮ್ಮ ಅಲಿಯಾಸ್ ಸೋಮಶೇಖರ್ ಭೂತರಾಜು ಶ್ರೀನಿವಾಸ್ ಶ್ರೀನಿವಾಸಪ್ಪ ಹಾಗೂ ಕುಮಾರ್ ಎಂದು ಗುರುತಿಸಲಾಗಿದ್ದು ಬಂದಿತರಿಂದ ಎರಡು ಕಾಡು ಹಂದಿ ಮಾಂಸ ಕೃತ್ಯಕ್ಕೆ ಬಳಸಲಾಗಿದ್ದ ವಿದ್ಯುತ್ ತಂತಿಗಳು ಚೂರಿ ಚಾಕು ಮೊಬೈಲ್ ಮರದ ತುಂಡುಗಳನ್ನು ಹಾಗೂ ಐದು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಕಾರ್ಯಚರಣೆಯಲ್ಲಿ ಬುಕ್ಕಾಪಟ್ಟಣ ಉಪವಲಯ ಅರಣ್ಯ ಅಧಿಕಾರಿ ಕಿರಣ್ ಟಿ, ಅರಣ್ಯ ಪಾಲಕರಾದ ರೇವಣಸಿದ್ದಪ್ಪ ಎಸ್ ಕಾಳಗಿ, ಸುರೇಶ್, ವಾಹನ ಚಾಲಕರಾದ ಹರೀಶ್ ಹಾಗೂ ಸಿಬ್ಬಂದಿ ಹರೀಶ್ ಪ್ರಭಾಕರ್ ನಾಗರಾಜು ರಾಮಣ್ಣ ಭಾಗವಹಿಸಿದ್ದರು ಬಂದಿತರ ಮೇಲೆ ವನ್ಯಜೀವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *