NSG ಮಾಜಿ ಕಮಾಂಡೋ ಈಗ ಡ್ರಗ್ ಕಿಂಗ್​ಪಿನ್.

NSG ಮಾಜಿ ಕಮಾಂಡೋ ಈಗ ಡ್ರಗ್ ಕಿಂಗ್​ಪಿನ್

ರಾಜಸ್ಥಾನ: ಮುಂಬೈನಲ್ಲಿ  2008ರ ನವೆಂಬರ್ 26ರಂದು  ನಡೆದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯ ಭಾಗವಾಗಿದ್ದ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ)ಯ ಮಾಜಿ ಕಮಾಂಡೋ ಬಜರಂಗ್ ಸಿಂಗ್ ಈಗ ಡ್ರಗ್ ಕಿಂಗ್​ಪಿನ್  ಎಂಬ ಕುಖ್ಯಾತಿ ಪಡೆದಿದ್ದಾರೆ. ಅವರನ್ನು ಗಾಂಜಾ ಕಳ್ಳಸಾಗಣೆ ಗ್ಯಾಂಗ್‌ನ ಕಿಂಗ್‌ಪಿನ್ ಎಂಬ ಆರೋಪ ಹೊರಿಸಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎನ್ನುವ ಮಾತಿಗೆ ಇವರೇ ಸಾಕ್ಷಿ.

ಬುಧವಾರ ತಡರಾತ್ರಿ ಚುರುವಿನ ರತನ್‌ಗಢದಲ್ಲಿ ಬಜರಂಗ್ ಸಿಂಗ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ವಿಕಾಸ್ ಕುಮಾರ್ ತಿಳಿಸಿದ್ದಾರೆ. ತೆಲಂಗಾಣ ಮತ್ತು ಒಡಿಶಾದಿಂದ ರಾಜಸ್ಥಾನಕ್ಕೆ ಗಾಂಜಾ ಕಳ್ಳಸಾಗಣೆ ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆಂದು ಆರೋಪಿಸಲಾಗಿದೆ ಮತ್ತು ಅವರಿಂದ 200ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸ್ಥಳೀಯ ಚುನಾವಣೆಗಳಲ್ಲಿ ಸ್ಪಧಿಸಿದ್ದರು, ಆದರೆ ಸೋತರು, ರಾಕೀಯದಲ್ಲಿದ್ದಾಗ ಕ್ರಿಮಿನಲ್ಸ್​ಗಳ ಸಂಪರ್ಕಕ್ಕೆ ಬಂದಿದ್ದರು.

ಮಾದಕವಸ್ತು ಕಳ್ಳಸಾಗಣೆ ಗ್ಯಾಂಗ್‌ನ ಕಿಂಗ್‌ಪಿನ್ ರಾಜಸ್ಥಾನದ ಸಿಕಾರ್ ಜಿಲ್ಲೆಯ ನಿವಾಸಿ. ಅವರನ್ನು ಹಿಡಿದುಕೊಟ್ಟವರಿಗೆ 25,000 ರೂ. ಬಹುಮಾನ ನೀಡುವುದಾಗಿ ಐಜಿ ಹೇಳಿದ್ದರು. ರಾಜಸ್ಥಾನ ಎಟಿಎಸ್ ಮತ್ತು ಮಾದಕವಸ್ತು ವಿರೋಧಿ ಕಾರ್ಯಪಡೆ (ಎಎನ್‌ಟಿಎಫ್) ಆಪರೇಷನ್ ಗಾಂಜನೇಯವನ್ನು ಯಶಸ್ವಿಯಾಗಿ ನಡೆಸಿತು, ಇದರ ಪರಿಣಾಮವಾಗಿ ಬಜರಂಗ್ ಸಿಂಗ್ ಬಂಧಿಸಲಾಗಿದೆ.

ಭಜರಂಗ್ ಸಿಂಗ್ ಅವರನ್ನು ಬಂಧಿಸಲು ಎರಡು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಾಯಿತು ಮತ್ತು ಅವರು ಯಾವಾಗಲೂ ವಿಶ್ವಾಸಾರ್ಹ ಒರಿಯಾ ಅಡುಗೆಯವರೊಂದಿಗೆ ಪ್ರಯಾಣಿಸುತ್ತಿದ್ದರು ಎಂಬ ಸುಳಿವಿನ ಮೇಲೆ ಅವರನ್ನು ಪತ್ತೆ ಮಾಡಲಾಗಿದೆ.

ಈ ಬಂಧನದಿಂದ ಒಡಿಶಾ ಮತ್ತು ತೆಲಂಗಾಣದಿಂದ ರಾಜಸ್ಥಾನದಿಂದ ಹೋಗುವ ದೊಡ್ಡ ಪ್ರಮಾಣದ ಅಕ್ರಮ ಮಾದಕವಸ್ತು ಸಾಗಣೆಯನ್ನು ತಡೆದಂತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಬಜರಂಗ್ ಸಿಂಗ್ 10 ನೇ ತರಗತಿ ಮುಗಿಸಿದ ನಂತರ ಎನ್​​ಎಸ್​ಜಿಗೆ ಸೇರಿದ್ದು, ಅವರು 2008 ರಲ್ಲಿ 26/11 ಮುಂಬೈ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸಿದ ಕಮಾಂಡೋ ತಂಡದ ಭಾಗವಾಗಿದ್ದರು. 2021 ರಲ್ಲಿ ನಿವೃತ್ತಿ ಹೊಂದಿ ರಾಜಕೀಯದಲ್ಲಿ ವಿಫಲವಾದ ನಂತರ, ಮಾದಕವಸ್ತು ಕಳ್ಳಸಾಗಣೆಯಲ್ಲಿ ತೊಡಗಿಸಿಕೊಂಡರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *