ಆಗುಂಬೆ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದಲ್ಲಿ ವಂಚನೆ? ತನಿಖೆಗೆ ಸಚಿವರ ಆದೇಶ.

ಆಗುಂಬೆ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದಲ್ಲಿ ವಂಚನೆ? ತನಿಖೆಗೆ ಸಚಿವರ ಆದೇಶ.

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆಗುಂಬೆ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದ ವಿರುದ್ಧ ಗಂಭೀರ ಅಕ್ರಮ ಹಾಗೂ ವಂಚನೆ ಆರೋಪ ಕೇಳಿಬಂದಿದೆ. ಈ ಕುರಿತು  ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ತಕ್ಷಣ ಕ್ರಮ ಕೈಗೊಂಡಿದ್ದು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡವನ್ನು ರಚಿಸಿ 10 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.

ಏನು ಆರೋಪ?

* ಜನ ಸಂಗ್ರಾಮ ಪರಿಷತ್ ಅಧ್ಯಕ್ಷ  ಅಖಿಲೇಶ್ ಚಿಪ್ಲಿ ದೂರು ಸಲ್ಲಿಸಿದ್ದಾರೆ.

* ಸಂಶೋಧನೆ ಹೆಸರಿನಲ್ಲಿ ಅಕ್ರಮ ಜಮೀನು ಖರೀದಿ ವನ್ಯಜೀವಿ ಕಾಯಿದೆ ಉಲ್ಲಂಘನೆ ನಡೆದಿದೆ ಎನ್ನಲಾಗಿದೆ.

* ವರ್ಷಪೂರ್ತಿ ಛಾಯಾಗ್ರಹಣ, ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ.

* ಪರಿಶಿಷ್ಟ ಸಮುದಾಯದ ಜನರ ಶೋಷಣೆ ಕುರಿತು ಸಹ ದೂರು ದಾಖಲಾಗಿದೆ.

ಕಾಳಿಂಗ ಸರ್ಪಗಳ ವಿಡಿಯೋಫೋಟೋ ಮಾರಾಟ ಆರೋಪ

* ಕಾಳಿಂಗ ಸರ್ಪ ಹಾಗೂ ಅದರ ಮರಿಗಳ ವಿಡಿಯೋಗಳು ಅಂತರಾಷ್ಟ್ರೀಯ ವನ್ಯಜೀವಿ ಡಾಕ್ಯುಮೆಂಟರಿಗಳಲ್ಲಿ ಬಳಕೆಯಾಗುತ್ತಿವೆ.

* ಈ ಚಿತ್ರೀಕರಣದ ತುಣುಕುಗಳಿಗೆ ಭಾರಿ ಬೇಡಿಕೆ ಇರುವುದರಿಂದ, ಸಂಶೋಧನೆ ಹೆಸರಿನಲ್ಲಿ ಹಣದ ಆಸೆಗೆ ವಂಚನೆ ನಡೆಯುತ್ತಿದೆ ಎನ್ನುವ ಆರೋಪ ಬಂದಿದೆ.

* ಎಆರ್ಆರ್ಎಸ್ ಸಿಬ್ಬಂದಿ ಕಾಳಿಂಗ ಸರ್ಪಗಳನ್ನು ಅಕ್ರಮವಾಗಿ ಹಿಡಿದು, ಛಾಯಾಗ್ರಾಹಕರಿಗೆ ಪಾವತಿಗೆ ಶೂಟಿಂಗ್ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸರ್ಕಾರದ ಕ್ರಮ”: ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅರಣ್ಯ ಭೂಮಿ ಒತ್ತುವರಿ, ಕಟ್ಟಡ ನಿರ್ಮಾಣ, ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ.ಸಚಿವ ಈಶ್ವರ ಖಂಡ್ರೆ, ಉನ್ನತ ಮಟ್ಟದ ಪಾರದರ್ಶಕ ತನಿಖೆ ನಡೆಸುವಂತೆ ಸೂಚನೆ ನೀಡಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *