ನೆಲಮಂಗಲ: ಸಿನೆಮಾ ನಟನ ಹೆಸರು ಬಳಸಿಕೊಂಡು ಸೈಟ್ ಕೊಡಿಸುವುದಾಗಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ ವಂಚಿಸಿರುವಂತಹ ಘಟನೆ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ. ನಟ ದುನಿಯಾ ವಿಜಯ್ ಹೆಸರು ಬಳಸಿಕೊಂಡು ಸುಕನ್ಯಾ ಮತ್ತು ನರಸಿಂಹ ಎಂಬುವವರು ವಂಚಿಸಿರುವುದಾಗಿ ಮಹಿಳೆ ಗಂಗಮ್ಮ ಅವರು ಆರೋಪಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮಾಯಕರಿಗೆ ಉಂಡೆ ನಾಮ
ನರಸಿಂಹ ಲಕ್ಷ್ಮೀ ಪ್ರಸಾದ್ ಫೈನಾನ್ಸ್ ನಡೆಸುತ್ತಿದ್ದರು. ತಮ್ಮ ವ್ಯವಹಾರಕ್ಕೆ ಸಿನೆಮಾ ನಟನ ಹೆಸರು ಬಳಸಿಕೊಂಡಿದ್ದರು. ರಿಯಲ್ ಎಸ್ಟೇಟ್ ಉದ್ಯಮಿಯಾಗಲು ಹೊರಟವರು ಅಮಾಯಕರಿಗೆ ಉಂಡೆ ನಾಮ ಹಾಕಿದ್ದಾರೆ. ಇವರ ಮಾತನ್ನು ನಂಬಿ ಸಾಕಷ್ಟು ಜನರು ಹಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂ ವಂಚನೆ ಮಾಡಿದವರ ವಿರುದ್ದ ಸದ್ಯ ಎಫ್ಐಆರ್ ದಾಖಲಾಗಿದೆ.
ನಟ ದುನಿಯಾ ವಿಜಿ ಜೊತೆ ಫೊಟೊತೆಗೆಸಿಕೊಂಡವರ ಹೆಸರು ನರಸಿಂಹ. ಇವರು ಸೋಲದೇವನಹಳ್ಳಿ ಪೊಲೀಸ್ ಠಾಣಾವ್ಯಾಪ್ತಿಯ ಚಿಕ್ಕಸಂದ್ರದ ನಿವಾಸಿಯಾಗಿದ್ದು, ತನ್ನ ಪತ್ನಿ ಸುಕನ್ಯಾ ಜೊತೆ ಲಕ್ಷ್ಮೀ ಫೈನಾನ್ ನಡೆಸುತ್ತಿದ್ದರು. ಗಂಗಮ್ಮ ಎಂಬುವವರು ಹಣ ಉಳಿತಾಯ ಮಾಡುವ ಸಲುವಾಗಿ ಮಹಿಳೆಯರನ್ನು ಒಟ್ಟುಗೂಡಿಸಿ ತಿಂಗಳಿಗೆ 300 ರೂ ಹಣ ಕಟ್ಟುವ ವ್ಯವಹಾರ ಮಾಡಿಕೊಂಡಿದ್ದರು. ಈ ಮಹಿಳಾ ಗ್ಯಾಂಗ್ಗೆಸೈಟ್ ಮೇಲೆ ಹಣ ಇನ್ವೆಸ್ಟ ಮಾಡುವಂತೆ ಸುಕನ್ಯಾ ಪುಸಲಾಯಿಸಿದ್ದರು.
ದುನಿಯಾ ವಿಜಯರೊಂದಿಗೆ ನರಸಿಂಹ
ಇತ್ತ ನರಸಿಂಹ ನನಗೆ ದುನಿಯಾವಿಜಿ ತುಂಬಾ ಆಪ್ತರು ಅಂತೆಲ್ಲಾ ಕಥೆ ಕಟ್ಟಿ ಫೋಟೋ ತೋರಿಸಿದ್ದರು. ಇದನ್ನ ನಂಬಿದ ಕೆಲವರು ದೊಡ್ಡ ವ್ಯಕ್ತಿ ಇರಬೇಕು ಅಂತ ಹೇಳಿ ದೊಡ್ಡಬಳ್ಳಾಪುರದಲ್ಲಿ ಲೇಔಟ್ ಮಾಡಲಾಗಿದೆ ಅಂತ ಹೇಳಿ ಹಣ ಪಡೆದಿದ್ದರು. ಸದ್ಯ 5 ರಿಂದ 6 ಜನರಿಗೆ ಮೋಸ ಮಾಡಲಾಗಿದೆ.
ಒಟ್ಟಿನಲ್ಲಿ ಸಿನಿಮಾ ನಟನ ಹೆಸರು ಹೇಳಿಕೊಂಡು ಕೋಟ್ಯಂತರ ರೂ ಮೋಸ ಮಾಡಿರುವ ದಂಪತಿ ವಿರುದ್ದ ಸೋಲದೇವನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
For More Updates Join our WhatsApp Group :
