ದಕ್ಷಿಣ ಭಾರತದ ರಾಜ್ಯಗಳಲ್ಲಿ ಸೈಕ್ಲೋನಿಕ್ ಚಂಡಮಾರುತದ ಬೆದರಿಕೆ ಉಂಟಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ‘ಫಂಗಲ್’ ಚಂಡಮಾರುತದ ಅಪಾಯ ಹೆಚ್ಚುತ್ತಿದೆ. ಸೈಕ್ಲೋನಿಕ್ ಚಂಡಮಾರುತದ ಪ್ರಭಾವದಿಂದ ಅನೇಕ ವಿಮಾನಗಳು ರದ್ದುಗೊಂಡಿವೆ. ಚೆನೈನಲ್ಲಿ ಇಂಡಿಗೊ ವಿಮಾನಗಳ ಹಾರಾಟವನ್ನು ರದ್ದು ಮಾಡಲಾಗಿದೆ. ಪುದುಚೇರಿ, ಕಾಂಚಿಪುರOನಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಶಿಸಲಾಗಿದ್ದು, ಮೀನುಗಾರರಿಗೆ ‘ಫಂಗಲ್’ ಚಂಡಮಾರುತದ ಅಪಾಯದಿಂದಾಗಿ ಸಮುದ್ರಗಳಿಗೆ ಇಳಿಯದಂತೆ ಚೆನ್ನೈನ ಪ್ರಾದೇಶಿಕ ಮಾಪನಶಾಸ್ತ್ರ ಕೇಂದ್ರವು ಎಚ್ಚರಿಸಿದೆ. ಇದರ ಪ್ರಭಾವದಿಂದಾಗಿ ಹಲವು ಪ್ರದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಬಹುದೆOದು ಹೇಳಲಾಗಿದೆ. ಹವಾಮಾನ ತಜ್ಞರ ಪ್ರಕಾರ, ಈ ಚಂಡಮಾರುತದಿOದ ಹಾನಿಗೊಳಗಾಗುವ ಸಾಧ್ಯತೆ ಇರುವಂತ ಪ್ರದೇಶಗಳಲ್ಲಿ ಹೆಚ್ಚಿನ ಎಚ್ಚರಿಕೆಯ ಅಗತ್ಯವಿದೆ. ಮುಂದಿನ ಕೆಲವು ದಿನಗಳಲ್ಲಿ ಚಂಡಮಾರುತದ ವೇಗ ಮತ್ತು ದಿಕ್ಕಿನಲ್ಲಿ ಬದಲಾವಣೆಯಾಗಬಹುದು ಎಂದು ಅಲ್ಲಿನ ತಜ್ಞರ ಅಭಿಪ್ರಾಯವಾಗಿದೆ. ಚೆನ್ನೈ ನಾಡಿನಾಂದ್ಯOತ ರೆಡ್ ಅಲರ್ಟ್ ಘೋಷಿಸಲಾಗಿದೆ.
