ತುಮಕೂರು: ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಇಂದುಿನಿಂದ ಎರಡು ದಿನಗಳ ಕಾಲ ತುಮಕೂರು ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ವಿನಾಯಕಿ ಪರಿಶೀಲನೆ ಹಾಗೂ ದೂರು ಪರಿಹಾರ ಕಾರ್ಯ ಪ್ರಾರಂಭಿಸಿದ್ದಾರೆ. ಕೊರಟಗೆರೆ, ತುಮಕೂರು, ಕುಣಿಗಲ್ ಮತ್ತು ಗುಬ್ಬಿ ತಾಲೂಕುಗಳಿಂದ ಬಂದ ಒಟ್ಟು 258 ದೂರುಗಳನ್ನು ಅವರು ಪರಿಶೀಲಿಸಲಿದ್ದಾರೆ.
ಉಪಲೋಕಾಯುಕ್ತರು ಗುರುವಾರ ರಾತ್ರಿ ತುಮಕೂರಿಗೆ ಆಗಮಿಸಿದ್ದು, ಇಂದು ಬೆಳಗ್ಗೆ ನಗರದಲ್ಲಿ ಸಿಟಿ ರೌಂಡ್ ನಡೆಸಿದರು.
ಇಂದು ನಡೆದ ಪ್ರಮುಖ ಪರಿಶೀಲನೆಗಳು
- ಬೆಳಗ್ಗಿನ ಜಾವ ಅಂತರಸನಹಳ್ಳಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಭೇಟಿ
- ನಂತರ ತುಮಕೂರು ಏಷ್ಯಾದ ಅತಿ ದೊಡ್ಡ ಬಸ್ ಸ್ಟ್ಯಾಂಡ್ (KSRTC) ಗೆ ಭೇಟಿ
- ಬಸ್ ಸ್ಟ್ಯಾಂಡ್ನಲ್ಲಿರುವ ಅಂಗಡಿಗಳಲ್ಲಿ ಮಾರಾಟವಾಗುತ್ತಿದ್ದ ಪದಾರ್ಥಗಳ ಗುಣಮಟ್ಟದ ಪರಿಶೀಲನೆ
- ಬಸ್ ಸ್ಟ್ಯಾಂಡ್ನಲ್ಲಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ
- ಖಾಸಗಿ ಬಸ್ ನಿಲ್ದಾಣ ಪರಿಶೀಲನೆ
- ಅಲ್ಲಿ ಇಂದೇ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಉಪಲೋಕಾಯುಕ್ತರ ಈ ತಪಾಸಣಾ ಅಭಿಯಾನವು ಜಿಲ್ಲೆಯಲ್ಲಿ ಆಡಳಿತದ ಪಾರದರ್ಶಕತೆ ಮತ್ತು ಸಾರ್ವಜನಿಕ ಸೇವೆಗಳ ಗುಣಮಟ್ಟ ಸುಧಾರಣೆಯ ಕಡೆ ಗಮನ ಸೆಳೆದಿದೆ.
For More Updates Join our WhatsApp Group :
