ಸ್ವರ್ಣವಳ್ಳಿ ಶ್ರೀಗಳ ಕರೆ; ನದಿ ಪೂಜೆ ಮೂಲಕ ಯೋಜನೆಗೆ ವಿರೋಧ.
ಶಿರಸಿ : ಉತ್ತರ ಕನ್ನಡ ಜಿಲ್ಲೆಗೆ ಸದ್ಯ ನದಿ ತಿರುವು ಯೋಜನೆಯ ಭೂತ ಕಾಡುತ್ತಿದೆ. ಇಲ್ಲಿ ಹರಿಯುವ ವಿವಿಧ ನದಿ ಹಾಗೂ ಹಳ್ಳಗಳಿಗೆ ಡ್ಯಾಮ್ ಕಟ್ಟಿ, ಉತ್ತರ ಕರ್ನಾಟಕದ ಕಡೆಗೆ ನೀರು ತೆಗೆದುಕೊಂಡು ಹೋಗುವ ಯೋಜನೆ ಇದಾಗಿದೆ. ಇದಕ್ಕೆ ಸಾವಿರಾರು ಕೋಟಿ ರೂಪಾಯಿ ಸುರಿಯಲು ಸರ್ಕಾರ ಮುಂದಾಗಿದೆ. ಇದರಿಂದ ಪಶ್ಚಿಮಘಟ್ಟದ ನಾಶ ಖಚಿತ ಎಂಬ ಅಭಿಪ್ರಾಯ ತಜ್ಞರದ್ದು. ಆದಾಗ್ಯೂ ನಾವು ಯೋಜನೆ ಮಾಡಿಯೇ ತಿರುತ್ತೇವೆ ಎಂಬ ಹುಂಬುತನ ರಾಜಕಾಣಿಗಳದ್ದು. ಜನವರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಈ ಯೋಜನೆ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲಾಯಿತು. 25 ಸಾವಿರಕ್ಕೂ ಅಧಿಕ ಜನರು ಸೇರಿ ಈ ಯೋಜನೆಯನ್ನು ವಿರೋಧಿಸಿದರು. ಈಗ ‘ಗಂಗಾರತಿ’ ಮೂಲಕ ಯೋಜನೆಯ ವಿರುದ್ಧ ಪ್ರತಿಭಟನೆ ಮಾಡಲು ಕರೆ ನೀಡಲಾಗಿದೆ.
ಶಿರಸಿಯ ಮುರೆಗಾರ್ ಜಲಪಾತಕ್ಕೆ (ಪಟ್ಟಣದ ಹಳ್ಳ) ಡ್ಯಾಂ ನಿರ್ಮಾಣ ಮಾಡುವ ಯೋಜನೆಯನ್ನು ಸರ್ಕಾರ ಹೊಂದಿದೆ. ಇದು ಬೇಡ್ತಿ–ಶರಾವತಿ ನದಿ ತಿರುವು ಯೋಜನೆಯ ಭಾಗವಾಗಿದೆ. ಈ ಯೋಜನೆಗಳ ವಿರುದ್ಧ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿಶಿಷ್ಟ ಕರೆ ನೀಡಿದ್ದಾರೆ. ಅದುವೇ ನದಿ ಪೂಜೆ ಗಂಗಾರತಿ.
ಮುರೆಗಾರ್ ಜಲಪಾತದಲ್ಲಿ ಫೆಬ್ರವರಿ 23ರ ಸಂಜೆ ನದಿ ಪೂಜೆ ಗಂಗಾರತಿ ಮಾಡಲಾಯಿತು. ಗಂಗಾ ನದಿ ತೀರದಲ್ಲಿ ನಡೆಯುವಂತೆ ಇಲ್ಲಿಯ ನದಿಗಳ ನೀರಿಗೂ ಪೂಜೆ ನಡೆದವು. ಈ ರೀತಿ ಮಾಡುವುದರ ಹಿಂದಿನ ಕಾರಣವನ್ನು ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಅವರು ವಿವರಿಸಿದರು.
For More Updates Join our WhatsApp Group :




