ಮದುವೆ ಮನೆಗೆ ಬಂದು ಗ್ರಾಮದ ಮುಖ್ಯಸ್ಥರನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್ಸ್ಟರ್
ಅಮೃತಸರ : ಮದುವೆ ಮನೆಗೆ ಬಂದು ಗ್ರಾಮದ ಮುಖ್ಯಸ್ಥ ಜರ್ಮಲ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಗ್ಯಾಂಗ್ಸ್ಟರ್ ಹರ್ನೂರ್ ಸಿಂಗ್ನನ್ನು ಪೊಲೀಸರು ಎನ್ಕೌಂಟರ್‌ನಲ್ಲಿ ಹತ್ಯೆ ಮಾಡಿರುವ ಘಟನೆ ಪಂಜಾಬ್ನ ತರಣ್ ತರಣ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬೈಕ್ನಲ್ಲಿ ಹೋಗುತ್ತಿದ್ದಾಗ ಪೊಲೀಸರು ನಿಲ್ಲಿಸಲು ಸೂಚಿಸಿದ್ದರು, ಆದರೆ ಆತ ತಕ್ಷಣವೇ ಪೊಲೀಸರ ಮೇಲೆ ಗುಂಡು ಹಾರಿಸಲು ಶುರು ಮಾಡಿದ್ದ, ಒಂದು ಗುಂಡು ಪೊಲೀಸ್ ಅಧಿಕಾರಿಗೆ ತಗುಲಿತ್ತು.
ಆದರೆ ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದ ಪರಿಣಾಮ ಏನೂ ಆಗಲಿಲ್ಲ. ನಂತರ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದರು. ಈ ಸಮಯದಲ್ಲಿ ಹರ್ನೂರ್ ಸಿಂಗ್ ಗಾಯಗೊಂಡಿದ್ದ. ಆತನನ್ನು ಹತ್ತಿರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಷ್ಟರೊಳಗೆ ಆತ ಮೃತಪಟ್ಟಿದ್ದ.
ಹರ್ನೂರ್ ಸಿಂಗ್ ಗ್ಯಾಂಗ್ಸ್ಟರ್ ಅಫ್ರಿದಿ ಮತ್ತು ಪ್ರಭಾ ದಾಸುವಾಲ್ ಸಹಚರನಾಗಿದ್ದ, ವಾಲ್ಟೋಹಾದ ಮುಖ್ಯಸ್ಥ ಜರ್ಮಲ್ ಸಿಂಗ್ ಅವರ ಹತ್ಯೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದ. ಭಾನುವಾರ ಅಮೃತಸರದ ಮದುವೆ ಸ್ಥಳದಲ್ಲಿ ದುಷ್ಕರ್ಮಿಗಳ ಗುಂಪೊಂದು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದಾಸುವಾಲ್ ಮತ್ತು ಇತರ ಕೆಲವರು ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದರು.
For More Updates Join our WhatsApp Group :




