ಗಣೇಶನ ಹಬ್ಬ ಸಮೀಪಿಸುತ್ತಿದೆ. ಗಣೇಶನ ಹಬ್ಬದಲ್ಲಿ ಒಂದು ಸಿಹಿ ತಿಂಡಿ ಎಲ್ಲರ ಮನೆಯಲ್ಲೂ ಮಾಡಿಯೇ ಮಾಡುತ್ತಾರೆ. ಅದ್ರಲ್ಲೂ ಗಣೇಶನಿಗೆ ಪ್ರಿಯವಾದ ಮೋದಕ ಮಾಡಿರುತ್ತಾರೆ. ಮೋದಕವನ್ನು ಹಲವು ರೀತಿಯಲ್ಲಿ ಮಾಡಬಹುದು. ಅದ್ರಲ್ಲಿ ರವೆಯಿಂದ ಮಾಡುವ ಮೋದಕ ಬಹಳ ರುಚಿಯಾಗಿರುತ್ತೆ.
ಗಣೇಶ ಚತುರ್ಥಿಯಂದು ಗಣೇಶನಿಗೆ ನೈವೇದ್ಯ ಮಾಡಲು ಮೋದಕ ಮಾಡಿಯೇ ಮಾಡುತ್ತಾರೆ. ಗಣಪತಿಯ ಆರಾಧನೆಗೆ ಮುಖ್ಯವಾಗಿ ಲಂಬೋದರನಿಗೆ ಮೋದಕ ಬೇಕೇ ಬೇಕು. ಮೋದಕ ನೈವೇದ್ಯದಿಂದ ಗಣೇಶ ಪ್ರಸನ್ನನಾಗುತ್ತಾನೆ ಎಂಬ ನಂಬಿಕೆಯೂ ಇದೆ. ಈ ಮೋದಕದ ರುಚಿಗೆ ಮನಸೋಲದವರೇ ಇಲ್ಲ. ಮೋದಕ ಮಾಡಿ ಗಣೇಶನಿಗೆ ಅರ್ಪಿಸಿ ಬಳಿಕ ಎಲ್ಲರು ಸವಿಯುತ್ತಾರೆ. ಹಸಿ ಹಾಲಿನಿಂದ ಹೀಗೆ ಬೆಣ್ಣೆ ತೆಗೆದರೆ ಸೂಪರ್ ರುಚಿಯಾಗಿರುತ್ತೆ ಗಣೇಶನ ಹಬ್ಬದಂದು ಸಿಹಿ ಕಡಬು ಹಾಗೂ ಮೋದಕ ಮಾಡುವುದು ಸಂಪ್ರದಾಯವಾಗಿದೆ.
ಹೀಗಾಗಿ ಮೋದಕ ಮಾಡಲು ಗೃಹಿಣಿಯರು ಮುಂದಾಗುವುದು ನೋಡಬಹುದು. ಹಾಗಾದ್ರೆ ಗಣೇಶನಿಗೆ ಪ್ರಿಯವಾದ ಮೋದಕ ಮಾಡುವುದು ಹೇಗೆ? ಮೋದಕ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮೋದಕ ಮಾಡಲು ಬೇಕಾಗುವ ಪದಾರ್ಥಗಳು
ಮೈದಾಹಿಟ್ಟು – 250 ಗ್ರಾಮ್
ಚಿರೋಟಿ ರವೆ – 2 ಸ್ಪೂನ್
ಬೆಲ್ಲ – 200 ಗ್ರಾಮ್
ಕೊಬ್ಬರಿ ತುರಿ – 100 ಗ್ರಾಮ್
ಹುರಿಕಡಲೆ – 100 ಗ್ರಾಮ್
ಏಲಕ್ಕಿ – 5 ಎಣ್ಣೆ
ಮೋದಕ ಮಾಡುವುದು ಹೇಗೆ? ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಚಿರೋಟಿ ರವೆ, ಎಣ್ಣೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ಹಿಟ್ಟು ಮಾಡಿಕೊಳ್ಳಿ. ಚಪಾತಿ ಹಿಟ್ಟಿನ ಹದವಾಗಿ ಈ ಹಿಟ್ಟು ರೆಡಿ ಮಾಡಿಕೊಂಡು ಬದಿಗೆ ಇಟ್ಟುಕೊಳ್ಳಿ. ಈಗ ಮೋದಕ ಮಾಡಲು ಹೂರ್ಣ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹುರಿಗಡಲೆ ಹಾಕಿ, ಏಲಕ್ಕಿ ಹಾಕಿ ಚೆನ್ನಾಗಿ ಪೌಡರ್ ಮಾಡಿಕೊಳ್ಳಿ. ನುಣ್ಣಗೆ ಪೌಡರ್ ಆಗುವಂತೆ ರುಬ್ಬಿದ ಬಳಿಕ ಇದಕ್ಕೆ ಬೆಲ್ಲ, ಒಣ ಕೊಬ್ಬರಿ ಹಾಕಿ ಒಂದು ಸುತ್ತು ರುಬ್ಬಿಕೊಳ್ಳಿ. ತರಿತರಿಯಾಗಿದ್ದರೆ ಸಾಕಾಗುತ್ತದೆ.
ಇಷ್ಟಾದರೆ ಹೂರ್ಣ ರೆಡಿಯಾಗುತ್ತದೆ. ಆಗಸ್ಟ್ 29: ಶುಭ ಗುರುವಾರ, ಈ ದಿನ ರಾಶಿಫಲ ನಿಮ್ಮ ರಾಶಿಗೆ ಹೇಗಿದೆ? ಈಗ ಮೋದಕ ಮಾಡಲು ಮುಂದಾಗಿ, ಒಂದು ನಿಂಬೆ ಗಾತ್ರದಲ್ಲಿ ಕಲಸಿಟ್ಟ ಹಿಟ್ಟು ತೆಗೆದುಕೊಂಡು ಲಟ್ಟಿಣಿಗೆಯಲ್ಲಿ ಸ್ವಲ್ಪ ಲಟ್ಟಿಸಿಕೊಳ್ಳಿ. ನಂತರ ಮಧ್ಯದಲ್ಲಿ ಹೂರ್ಣವನ್ನು ಇಟ್ಟು ಪ್ಯಾಕ್ ಮಾಡಿಕೊಳ್ಳಿ. ಇದಕ್ಕೆ ತುದಿಯಲ್ಲಿ ನೀರು ಚಿಮುಕಿಸಿದರೆ ಹಿಟ್ಟು ಒಡೆಯುವುದಿಲ್ಲ ಗಟ್ಟಿಯಾಗಿ ಅಂಟಿಕೊಳ್ಳುತ್ತದೆ. ಇಲ್ಲದಿದ್ದರೆ ಕರಿಯುವಾಗ ಹೂರ್ಣ ಹೊರಗೆ ಬರಬಹುದು.
ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಕಾಯಲು ಬಿಡಿ. ಎಣ್ಣೆ ಕಾದ ಬಳಿಕ ಒಂದೊAದೇ ಮೋದಕವನ್ನು ಎಣ್ಣೆಯೊಳಗೆ ಬಿಟ್ಟುಕೊಳ್ಳಿ. ಮಧ್ಯಮ ಉರಿಯಲ್ಲಿ ಮೋದಕ ಕರಿಯಬೇಕು. ಒಳಗಿರುವ ಹೂರ್ಣ ಸಹ ಎಣ್ಣೆಯಲ್ಲಿ ಚೆನ್ನಾಗಿ ಬೇಯಬೇಕಾಗುತ್ತದೆ. ಆಗಾಗ ಮೋದಕವನ್ನು ತಿರುಗಿಸುತ್ತಾ ಇರಿ. ಮೋದಕ ಗೋಲ್ಡನ್ ಕಲರ್‌ಗೆ ಬರುವವರೆಗೂ ಕರಿದುಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಮೋದಕ ರೆಡಿಯಾಗುತ್ತದೆ.
ಈ ಮೋದಕವನ್ನು ಪೂಜೆ ವೇಳೆ ಗಣೇಶನ ಮುಂದೆ ಇಟ್ಟು ನೈವೇದ್ಯ ಮಾಡಬಹುದು. ಜೊತೆಗೆ ಊಟದ ಜೊತೆ ಸವಿಯಲು ನೀಡಬಹುದು. ಇದನ್ನು ಸ್ಟೀಲ್ ಡಬ್ಬದಲ್ಲಿ ಹಾಕಿ ಇಟ್ಟರೆ 20ಕ್ಕೂ ಹೆಚ್ಚು ದಿನ ಇಟ್ಟು ಸವಿಯಬಹುದು. ಆದ್ರೆ ಈಗ ಮೋದಕ ಅಂಗಡಿ, ಬೇಕರಿಗಳಲ್ಲೂ ಸಿಗುತ್ತದೆ. ದರವೂ ತುಸು ಹೆಚ್ಚಾಗಿರುತ್ತೆ, ಆದ್ರೆ ಮನೆಯಲ್ಲೇ ಮಾಡಿದ ಮೋದಕ ನೈವೇದ್ಯಕ್ಕೆ ಸೂಕ್ತ ಹಾಗೆ ಸವಿಯಲು ಹೆಚ್ಚು ರುಚಿ ನೀಡಲಿದೆ.