ರಸ್ತೆಗಳಲ್ಲೇ ಕಸದ ರಾಶಿ – ಜನರ ಸಂಕಷ್ಟ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕಸದಸಮಸ್ಯೆ ತಲೆದೂರಿದೆ. ಹೀಗಾಗಿ ಬಿದ್ದ ರಾಶಿ ರಾಶಿ ಕಸವನ್ನು ಜನರೇ ಎತ್ತಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ನಗರದ ಹಲವೆಡೆ ರಸ್ತೆ ಬಳಿ ಬಿದ್ದ ಕಸವನ್ನು ಜನರೇ ಜೆಸಿಬಿ ಮತ್ತು ಲಾರಿ ಕರೆಸಿ ಕಸ ಎತ್ತಿಸಿ, ಅಧಿಕಾರಿಗಳಿಗೆ ಛೀಮಾರಿ ಹಾಕಿದ್ದಾರೆ. ಈ ಮಧ್ಯೆ ನಗರದಲ್ಲಿನ ಕಸವನ್ನು ಸಂಗ್ರಹ ಮಾಡಿ, ವಿಲೇವಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಿರುದ್ಧ ಉದ್ಯಮಿ ಕಿರಣ್ ಮಜುಂದಾರ್ ಶಾ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಬಿಎ ವಿರುದ್ಧ ಉದ್ಯಮಿ ಗರಂ
ಈ ಬಗ್ಗೆ ಎಕ್ಸ್ನಲ್ಲಿ ಕಸದ ವಿಡಿಯೋ ಮಾಡಿ ಪೋಸ್ಟ್ ಮಾಡಿ, ಟ್ವೀಟ್ ಮಾಡಿರುವ ಉದ್ಯಮಿ ಕಿರಣ್ ಮಜುಂದಾರ್ ಶಾ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೇಳಿಸಿಕೊಳ್ಳುತ್ತಿದೆಯಾ? ಇಲ್ಲಾ ನಟಿಸುತ್ತಿದೆಯಾ? ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಕಸದ ಸಮಸ್ಯೆಗೆ ಕಿರಣ್ ಮಜುಂದಾರ್ ಕಿಡಿಕಾರಿದ್ದರು.
ಅಧಿಕಾರಿಗಳಿಗೆ ಹಿಡಿಶಾಪ
ಅದೇ ರೀತಿ ಹಳೆ ಗುರಪ್ಪನಪಾಳ್ಯ ವೃತ್ತದಲ್ಲಿ ಸ್ಥಳೀಯ ನಿವಾಸಿಗಳು ರೊಚ್ಚಿಗೆದ್ದಿದ್ದರು. GBA ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ಬಿದ್ದು ನಾರುತ್ತಿರುವ ಕಸದ ರಾಶಿಯಿಂದ ಎದುರಾಗಿರುವ ಅನಾನುಕೂಲಗಳನ್ನು ಹೇಳುತ್ತಾ ಹಿಡಿಶಾಪ ಹಾಕಿದರು. ಕಸವನ್ನಾದರೂ ಎತ್ತಿ, ಇಲ್ಲವಾದರೆ ಮತ್ತೆ ಕಸ ಬೀಳದಂತೆ ಕ್ರಮಕೈಗೊಳ್ಳಿ ಎಂದು ಆಗ್ರಹಿಸಿದರು.
For More Updates Join our WhatsApp Group :




