ಗಾಜಿಯಾಬಾದ್ : ಡೆಲಿವರಿ ಬಾಯ್ ಬಟ್ಟೆ ತೊಟ್ಟು ಇಬ್ಬರು ಆಭರಣದ ಅಂಗಡಿ ದರೋಡೆ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಘಟನೆ ನಡೆದಿದೆ. ಆಭರಣದ ಅಂಗಡಿಗೆ ನುಗ್ಗಿ ಕೇವಲ ಆರು ನಿಮಿಷಗಳಲ್ಲಿ 30 ಲಕ್ಷಕ್ಕೂ ಅಧಿಕ ಮೌಲ್ಯದ ಆಭರಣವನ್ನು ಕದ್ದಿದ್ದಾರೆ.

20 ಕೆಜಿ ಬೆಳ್ಳಿ ಹಾಗೂ 125 ಗ್ರಾಂ ಚಿನ್ನವನ್ನು ದೋಚಿದ್ದಾರೆ. ದರೋಡೆಕೋರರು ಒಳಗೆ ನುಗ್ಗಿ, ತಮ್ಮ ಶಸ್ತ್ರಾಸ್ತ್ರಗಳನ್ನು ತೋರಿಸಿ, ಸಿಬ್ಬಂದಿಯ ಬಾಯಿ ಮುಚ್ಚಿಸಿ ಚೀಲದಲ್ಲಿ ಆಭರಣಗಳನ್ನು ತುಂಬಿಕೊಂಡು ಪರಾರಿಯಾಗಿದ್ದಾರೆ. ಘಟನೆಯ ನಂತರ, ಪೊಲೀಸರು ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ ಮಾಡಿದ್ದಾರೆ ಮತ್ತು ಅಂಗಡಿ ಮತ್ತು ಹತ್ತಿರದ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದಾರೆ.