ಹಾಸನ: ಹಾಸನದ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಸಂಭವಿಸಿದ್ದ ಭೀಕರ ಟ್ರಕ್ ಅಪಘಾತ ಹತ್ತು ಜನರನ್ನು ಬಲಿ ಪಡೆದ ಘಟನೆಯ ಕಹಿ ನೆನಪು ಮಾಸುವ ಮುನ್ನವೇ ಮತ್ತೊಂದು ಅನಾಹುತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ನಗರದ ಕೆಆರ್ ಪುರಂನಲ್ಲಿ ಗೂಡ್ಸ್ ವಾಹನ ಚಾಲಕನೋರ್ವ, ಮದ್ಯಪಾನದ ಅಮಲಿನಲ್ಲಿ ವಾಹನ ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿಹೊಡೆಸಿ, ಬೈಕ್ ಸವಾರರು ಕೆಳಗೆ ಬಿದ್ದರೂ ಲೆಕ್ಕಿಸದೇ ಪರಾರಿಯಾಗಲು ಯತ್ನಿಸಿದ್ದಾನೆ.
ಅಶೋಕ ಲೇಲ್ಯಾಂಡ್ ಗೂಡ್ಸ್ ಚಾಲಕನನ್ನು ಯುವಕರು ಬೆನ್ನಟ್ಟಿ ಹಿಡಿದಿದ್ದು, ಸ್ಥಳೀಯರು ಧರ್ಮದೇಟು ಹಾಕಿದ್ದಾರೆ. ಹಾಸನ ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮರಾದ ದೃಶ್ಯ ಈಗ ವೈರಲ್ ಆಗುತ್ತಿದೆ.
For More Updates Join our WhatsApp Group :



