2036ರ ಒಲಿಂಪಿಕ್ಸ್ಗೆ ಸರ್ಕಾರ ಸಿದ್ಧತೆ; 3000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ..!

2036ರ ಒಲಿಂಪಿಕ್ಸ್ಗೆ ಸರ್ಕಾರ ಸಿದ್ಧತೆ; 3000 ಕ್ರೀಡಾಪಟುಗಳಿಗೆ ತಿಂಗಳಿಗೆ 50,000 ರೂ..!

2028ರ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಯುಎಸ್ಎನ ಲಾಸ್ ಏಂಜಲೀಸ್ ಆತಿಥ್ಯ ವಹಿಸಲಿದೆ. ಹಾಗೆಯೇ 2032ರ ಒಲಿಂಪಿಕ್ಸ್ ಆಸ್ಟ್ರೇಲಿಯಾದ ಬ್ರಿಸ್ಬೇನ್ನಲ್ಲಿ ನಡೆಯಲಿದೆ. ಈ ಎರಡು ಒಲಿಂಪಿಕ್ಸ್ಗಳ ಬಳಿಕ ಭಾರತದಲ್ಲಿ ಜಾಗತಿಕ ಕ್ರೀಡಾಕೂಟ ಆಯೋಜಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸುತ್ತಿದೆ. ಇದರ ಮೊದಲ ಹೆಜ್ಜೆಯಾಗಿ ಈಗಾಗಲೇ ಭಾರತ ಒಲಿಂಪಿಕ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಿದೆ.

ಅಕ್ಟೋಬರ್ 15, 2023… ಜಿಯೋ ವರ್ಲ್ಡ್ ಸೆಂಟರ್ನಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಅಧಿವೇಶನದಲ್ಲಿ ಮಾತನಾಡಿದ್ದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2036 ರಲ್ಲಿ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧವಾಗಿದ್ದು, ಅಂತಹ ಯಾವುದೇ ಅವಕಾಶವನ್ನು ಕೈ ಬಿಡುವುದಿಲ್ಲ ಎಂದು ಉಚ್ಛರಿಸಿದ್ದರು. ಅಲ್ಲದೆ ಮುಂಬರುವ ಒಲಿಂಪಿಕ್ಸ್ ಆತಿಥ್ಯಕ್ಕಾಗಿ ಭಾರತ ಬಿಡ್ಡಿಂಗ್ ನಡೆಸುವುದನ್ನು ಇದೇ ವೇಳೆ ಪ್ರಧಾನಿ ಖಚಿತ ಪಡಿಸಿದ್ದರು. ಇದಾದ ಬಳಿಕ ನವೆಂಬರ್ 2024 ರಲ್ಲಿ ಭಾರತೀಯ ಒಲಿಂಪಿಕ್ ಸಂಸ್ಥೆಯು ಅಂತಾರಾಷ್ಟ್ರೀಯ ಒಲಿಂಪಿಕ್ ಅಸೋಸಿಯೇಷನ್ನ ಆತಿಥೇಯ ಆಯೋಗಕ್ಕೆ ಆಶಯ ಪತ್ರವನ್ನು ಕಳುಹಿಸಿ, 2036 ರ ಜಾಗತಿಕ ಕ್ರೀಡಾಕೂಟದ ಆತಿಥ್ಯಕ್ಕೆ ಔಪಚಾರಿಕ ಬಿಡ್ ಸಲ್ಲಿಸಿತು.

ಇದೀಗ 2036ರ ಒಲಿಂಪಿಕ್ಸ್ಗಾಗಿ ಭಾರತ ಸಕಲ ರೀತಿಯಲ್ಲೂ ಸನ್ನದ್ಧರನ್ನಾಗಬೇಕು ಎಂಬ ಆಶಯವನ್ನು ಕೇಂದ್ರ ಸರ್ಕಾರ ಮುಂದಿಟ್ಟಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ 3 ಸಾವಿರ ಕ್ರೀಡಾಪಟುಗಳಿಗೆ ಮಾಸಿಕ 50,000 ರೂ.ಗಳ ಸಹಾಯ ಧನ ನೀಡುವುದಾಗಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ.

21ನೇ ವಿಶ್ವ ಪೊಲೀಸ್ ಮತ್ತು ಅಗ್ನಿಶಾಮಕ ಕ್ರೀಡಾಕೂಟ 2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಿತ್ ಶಾ, ಗೆಲುವು ಮತ್ತು ಸೋಲು ಆಟದ ಒಂದು ಭಾಗ. ಆದರೆ ನಾವು ಗೆಲ್ಲುವನ್ನು ಗುರಿಯನ್ನು ಹೊಂದಿರಬೇಕು. ಗೆಲುವಿಗಾಗಿ ಯೋಜಿಸುವುದು ಪ್ರತಿಯೊಬ್ಬರ ಸ್ವಭಾವದಲ್ಲಿ ಅಂತರ್ಗತವಾಗಿರಬೇಕು. ಅಲ್ಲದೆ ಗೆಲುವು ಅಭ್ಯಾಸವಾಗಬೇಕು. ಗೆಲ್ಲುವ ಅಭ್ಯಾಸವನ್ನು ಬೆಳೆಸಿಕೊಳ್ಳುವ ವ್ಯಕ್ತಿಗಳು ನಿರಂತರವಾಗಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದರು.

Leave a Reply

Your email address will not be published. Required fields are marked *