“ರಿಕವರಿ ಪರಿಗಣನೆ ಇಲ್ಲದೇ ಟನ್‌ಗೆ ₹3,300ಕ್ಕೆ ಸರಕಾರ ಸಂಧಾನ ಯಶಸ್ವಿ”.

 “ರಿಕವರಿ ಪರಿಗಣನೆ ಇಲ್ಲದೇ ಟನ್‌ಗೆ ₹3,300ಕ್ಕೆ ಸರಕಾರ ಸಂಧಾನ ಯಶಸ್ವಿ”.

ಬಾಗಲಕೋಟೆ: ಮುಧೋಳ ರೈತರ ಹೋರಾಟ ಕೊನೆಗೂ ಸುಖಾಂತ್ಯ ಕಂಡಿದೆ. ಪ್ರತಿಭಟನೆ, ಆಕ್ರೋಶ, ಕಿಚ್ಚಿನ ಬಳಿಕ ಶುಕ್ರವಾರ ಉಸ್ತುವಾರಿ ಸಚಿವ ಶಿವಾನಂದ ಪಾಟಿಲ್, ಡಿಸಿ ಮಧ್ಯಸ್ಥಿಕೆಯಲ್ಲಿ ಸಭೆ ನಡೆಯಿತು. ಈ ವೇಳೆ ಕಬ್ಬಿನ ರಿಕವರಿ ರೇಟ್​ ಪರಿಗಣಿಸದೆ, ಪ್ರತಿ ಟನ್​ಗೆ 3,300 ರೂಪಾಯಿ ನೀಡಬೇಕೆಂಬ ರೈತರ ಬೇಡಿಕೆಗೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಕೊಂಡರು. ಹಾಗೆ, ಬಾಕಿ ಹಣ ಪಾವತಿಗೂ 4 ಸಕ್ಕರೆ ಕಾರ್ಖಾನೆಗಳು ಸಮ್ಮತಿ ನೀಡಿದವು.

ಪ್ರತಿ ಟನ್​​ ಕಬ್ಬಿಗೆ ಫ್ಯಾಕ್ಟರಿಯವರು 3,250 ರೂಪಾಯಿ ನೀಡಲಿ. ನಂತರ ಸರ್ಕಾರ 50 ರೂಪಾಯಿ ಕೊಡಲಿ ಎಂದು ರೈತರು ಪಟ್ಟು ಹಿಡಿದಿದ್ದರು. ಆದರೆ, ಇದಕ್ಕೆ ಸಕ್ಕರೆ ಕಾರ್ಖಾನೆಗಳು ಒಪ್ಪಲಿಲ್ಲ. ಹೀಗಾಗಿ ಮೊದಲ ಕಂತಿನಲ್ಲಿ ಫ್ಯಾಕ್ಟರಿಯವರು 3,200 ರೂಪಾಯಿ ನೀಡಲಿದ್ದು, ಆ ಬಳಿಕ 50 ರೂಪಾಯಿ ಹಾಗೂ ಸರ್ಕಾರದ 50 ರೂಪಾಯಿ ಸಿಗಲಿದೆ. ಹೀಗಾಗಿ ಅಲ್ಪ ಸಮಾಧಾನದಲ್ಲೇ ರೈತರು ಇದಕ್ಕೆ ಒಪ್ಪಿ, ಹೋರಾಟ ಕೈಬಿಟ್ಟಿದ್ದಾರೆ.

ಸರಕಾರ ರಿಕವರಿ ಆಧಾರದ ಮೇಲೆ ಘೋಷಿಸಿದ ಬೆಲೆ ಒಪ್ಪದ ರೈತರು ಮೊದಲು ಟನ್ ಗೆ 3,500 ರೂ. ಬೇಕೆಂದು ಪಟ್ಟು ಹಿಡಿದಿದ್ದರು. ನಂತರ ಅದು ಮೇಲಿಂದ ಮೇಲೆ ಸಭೆ ಬಳಿಕ ಸರಕಾರ ಘೋಷಿಸಿದ 3,300 ರೂ.ಗೆ ಬಂದು ತಲುಪಿತು. ಆದರೆ ರೈತರು ಇದರಲ್ಲಿ ರಿಕವರಿ, ಎಫ್​ಆರ್​​ಪಿ ಪರಿಗಣಿಸುವಂತಿಲ್ಲ ಎಂದು ಷರತ್ತು ಹಾಕಿದ್ದರು. 3,300 ರೂ. ಕೊಡಿ ಆದರೆ, ಮೊದಲ ಕಂತು 3250 ರೂ. ಕೊಡಿ ನಂತರ ಸರಕಾರ ಎರಡನೇ ಕಂತು 50 ರೂ. ಕೊಡಲಿ. ಒಟ್ಟು ಏಕರೂಪ ಬೆಲೆ 3,300 ರೂ. ಎಂದಿದ್ದರು. ಆದರೆ ಕಾರ್ಖಾನೆ ಮಾಲೀಕರು ಮೊದಲ ಕಂತು 3,300 ರೂ, ನಂತರ ಕಾರ್ಖಾನೆ ಹಾಗೂ ಸರಕಾರ ಸೇರಿ 100 ರೂ. ಕೊಡುವುದಾಗಿ ಪಟ್ಟು ಹಿಡಿದಿದ್ದರು. ಇದಕ್ಕೆ ಒಪ್ಪದ ಹಿನ್ನೆಲೆ ಕಳೆದ ನಾಲ್ಕೈದು ದಿನದಿಂದ ಹಗ್ಗಜಗ್ಗಾಟ ಜೋರಾಗಿತ್ತು. ಮೇಲಿಂದ ಮೇಲೆ‌ ನಡೆದ ಸಭೆಗಳು ವಿಫಲವಾಗಿದ್ದವು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *