ಸರ್ಕಾರದ ಹೊಸ ರೂಲ್ಸ್ : ಟಾಯ್ಲೆಟ್ ಸೀಟ್ಗೆ 25 ರೂಪಾಯಿ ಶುಲ್ಕ ಫಿಕ್ಸ್

ಸರ್ಕಾರದ ಹೊಸ ರೂಲ್ಸ್ : ಟಾಯ್ಲೆಟ್ ಸೀಟ್ಗೆ 25 ರೂಪಾಯಿ ಶುಲ್ಕ ಫಿಕ್ಸ್

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶ ಸರ್ಕಾರವು ಇತ್ತೀಚೆಗೆ ಹೊರಡಿಸಿದ ಅಧಿಸೂಚನೆಯಲ್ಲಿ, ನಗರ ಪ್ರದೇಶಗಳಲ್ಲಿ ವಾಸಿಸುವವರ ಮನೆಗಳಲ್ಲಿ ನಿರ್ಮಿಸಲಾದ ಟಾಯ್ಲೆಟ್ ಸೀಟ್ಗೆ 25 ರೂಪಾಯಿ ಶುಲ್ಕವನ್ನು ಸಂಗ್ರಹಿಸುವುದಾಗಿ ಹೇಳಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ನಾಯಕರು ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ವರದಿಗಳ ಪ್ರಕಾರ, ರಾಜ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸುಖವಿಂದರ್ ಸಿಂಗ್ ಸುಖು ನೇತೃತ್ವದ ಸರ್ಕಾರವು ಇತ್ತೀಚೆಗೆ ಒಳಚರಂಡಿ ಮತ್ತು ನೀರಿನ ಬಿಲ್ ಕುರಿತು ಅಧಿಸೂಚನೆಯನ್ನು ಹೊರಡಿಸಿದೆ. ಒಳಚರಂಡಿ ಬಿಲ್ ಜೊತೆಗೆ ಈ ಹೆಚ್ಚುವರಿ ಟಾಯ್ಲೆಟ್ ಸೀಟ್ ಶುಲ್ಕವನ್ನು ಜಲಶಕ್ತಿ ಇಲಾಖೆಯ ಖಾತೆಗೆ ವರ್ಗಾಯಿಸಲಾಗುತ್ತದೆ.

ನೀರಿನ ಬಿಲ್ ನ ಶೇ.30ರಷ್ಟು ಒಳಚರಂಡಿ ಬಿಲ್ ಆಗಲಿದೆ ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಕ್ಟೋಬರ್ ಆರಂಭದಿಂದ, ಹಿಮಾಚಲ ಸರ್ಕಾರವು ಪ್ರತಿ ಸಂಪರ್ಕಕ್ಕೆ 100 ರೂಪಾಯಿಗಳ ನೀರಿನ ಬಿಲ್ ಅನ್ನು ಪ್ರತಿ ತಿಂಗಳು ನೀಡಲು ಪ್ರಾರಂಭಿಸಿದೆ. ಈ ಹಿಂದೆ ಯಾವುದೇ ಬಿಲ್ ನೀಡಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಶೆಹಜಾದ್ ಪೂನವಾಲ, ಇದು ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ಖಟಾಖತ್ ಮಾದರಿಯ ಉತ್ತುಂಗವಾಗಿದೆ, ಈಗ ಶೌಚಾಲಯಗಳು ಸಹ ಈ ಪಕ್ಷದ ಕೈಗೆ ಸಿಗುತ್ತಿಲ್ಲ. ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಡೀಸೆಲ್, ಹಾಲು, ನೀರು, ಬಸ್ ದರ, ಮತ್ತು ಸ್ಟಾಂಪ್ ಡ್ಯೂಟಿ, ಎಲ್ಲದಕ್ಕೂ ತೆರಿಗೆ ವಿಧಿಸಲಾಗಿದೆ ಎಂದು ಹೇಳಿದ್ದಾರೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಕ್ಸ್ನಲ್ಲಿ, ಪ್ರಧಾನಿ ಸ್ವಚ್ಛತಾವನ್ನು ಜನಾಂದೋಲನವಾಗಿ ನಿರ್ಮಿಸುತ್ತಿರುವಾಗ, ಇಲ್ಲಿ ಕಾಂಗ್ರೆಸ್ ಜನರ ಮೇಲೆ ಶೌಚಾಲಯಗಳಿಗೆ ತೆರಿಗೆ ವಿಧಿಸುತ್ತಿದ್ದಾರೆ. ಅವರ ಕಾಲದಲ್ಲಿ ಉತ್ತಮ ನೈರ್ಮಲ್ಯವನ್ನು ಒದಗಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *