ಹಸಿರು ಹೈಡ್ರೋಜನ್ ಬೆಲೆ ₹279ಕ್ಕೆ ಇಳಿಕೆ.

ಹಸಿರು ಹೈಡ್ರೋಜನ್ ಬೆಲೆ ₹279ಕ್ಕೆ ಇಳಿಕೆ.

ಮುಂಬೈ ಹವಾಮಾನ ಸಪ್ತಾಹದಲ್ಲಿ ಪ್ರಲ್ಹಾದ್ ಜೋಶಿ ಘೋಷಣೆ.

ಮುಂಬೈ : ಭಾರತದಲ್ಲಿ ಹಸಿರು ಹೈಡ್ರೋಜನ್ ಬೆಲೆ ಐತಿಹಾಸಿಕ ಮಟ್ಟಕ್ಕೆ ಇಳಿಕೆ ಕಂಡಿದೆ. 279 ರೂ. ದರದೊಂದಿಗೆ ಭಾರತ ಹಸಿರು ಹೈಡ್ರೋಜನ್ ಕ್ಷೇತ್ರದಲ್ಲಿ ಹೊಸ ಜಾಗತಿಕ ಮಾನದಂಡ ಸ್ಥಾಪಿಸಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಘೋಷಿಸಿದ್ದಾರೆ.

ಮುಂಬೈಯಲ್ಲಿ ಇಂದು ಆಯೋಜಿಸಿದ್ದ “ಹವಾಮಾನ ಸಪ್ತಾಹ 2026” ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ ಅಡಿಯಲ್ಲಿ ಹಸಿರು ಹೈಡ್ರೋಜನ್ ಬೆಲೆ ಪ್ರತಿ ಕೆಜಿಗೆ 279 ರೂ. ಕನಿಷ್ಠ ಮಟ್ಟಕ್ಕೆ ಇಳಿದಿದೆ ಎಂದಿದ್ದಾರೆ.

ಸೂರ್ಯಘರ್ ಯೋಜನೆಯಡಿ ಭಾರತ ಪ್ರಸ್ತುತ 30 ಲಕ್ಷ ಮನೆಗಳಿಗೆ ಸೌರ ವಿದ್ಯುತ್ ಕಲ್ಪಿಸುವ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದೆ. ಮನೆಗಳಿಗೆ ಸೌರ ಮೇಲ್ಛಾವಣಿ ಮೂಲಕ ಉಚಿತ ವಿದ್ಯುತ್ ಕಲ್ಪಿಸಿದೆ. ಜಾಗತಿಕ ಹವಾಮಾನ ಸುಸ್ಥಿರತೆಯಲ್ಲಿ ಭಾರತ ಪ್ರಬಲ ಇಂಜಿನ್ ಆಗಿ ಕಾರ್ಯ ಸಾಧಿಸುತ್ತಿದ್ದು, ‘ಪಿಎಂ ಸೂರ್ಯಘರ್’ ಮತ್ತು ‘ಪಿಎಂ ಕುಸುಮ್’ ನಮ್ಮ ಸೌರ ಶಕ್ತಿಯ ಡಬಲ್ ಇಂಜಿನ್ ಆಗಿವೆ ಎಂದು ಪ್ರತಿಪಾದಿಸಿದರು.

ಪಿಎಂ ಕುಸುಮ್ ಮತ್ತು ಪಿಎಂ ಸೂರ್ಯಘರ್ ಅಳವಡಿಕೆ ಮೂಲಕ, ರೈತರು ಮತ್ತು ಸಾಮಾನ್ಯ ಕುಟುಂಬಗಳು ಸಹ ದೇಶದ ಶುದ್ಧ ಇಂಧನ ಪರಿವರ್ತನೆ ಪ್ರಯಾಣದಲ್ಲಿ ಸಕ್ರಿಯರಾಗುತ್ತಿದ್ದಾರೆಂದು ಪ್ರಲ್ಹಾದ್ ಜೋಶಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಭಾರತ ಇಂದು ಹವಾಮಾನದ ಕುರಿತಾದ ಜಾಗತಿಕ ಸಪ್ತಾಹ, ಸಮಾವೇಶ ಆಯೋಜಿಸುವ ಮಟ್ಟಕ್ಕೆ ಬೆಳೆದಿದೆ. ಮುಂಬೈಯಲ್ಲಿ ಆಯೋಜಿಸಿರುವ ಇದು ಮೊದಲ ಜಾಗತಿಕ ದಕ್ಷಿಣ ಸಮಾವೇಶವಾಗಿದೆ. ಇದಕ್ಕಾಗಿ ಮಹಾರಾಾಷ್ಟ್ರ ತಂಡವನ್ನು ಅಭಿನಂದಿಸುತ್ತೇನೆ. ಕರ್ನಾಟಕ ಮತ್ತು ಮಹಾರಾಷ್ಟ್ರ ವಿಶೇಷವಾಗಿ ಆರ್ಥಿಕತೆಯ ಚಾಲಕವಾಗಿವೆ. ಆರ್ಥಿಕತೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ದೇಶವೇ ಅನುಸರಿಸುತ್ತದೆ. ಮುಂಬೈ ನಮ್ಮ ಆರ್ಥಿಕ ಚಟುವಟಿಕೆಯ ಪ್ರಮುಖ ಕೇಂದ್ರವಾಗಿದೆ ಎಂದು ಹೇಳಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *