ಗೃಹಲಕ್ಷ್ಮಿ ಯೋಜನೆ: ಈ ಮಹಿಳೆಯರು ಅರ್ಜಿ ಹಾಕುದ್ರು ಹಣ ಸಿಗಲ್ಲ: ಕೊನೆ ಕ್ಷಣದಲ್ಲಿ ಬದಲಾವಣೆ…!

ಕಾಂಗ್ರೆಸ್ ಸರ್ಕಾರ ಮನೆಯ ಹೆಣ್ಣುಮಕ್ಕಳಿಗೆ, ಮನೆಯನ್ನು ನಡೆಸುವ ಗೃಹಿಣಿಗಾಗಿ ತಂದಿರುವ ಯೋಜನೆ ಗೃಹಲಕ್ಷ್ಮಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಮನೆಯ ಯಜಮಾನಿ ಆಗಿ ಮನೆ ನಡೆಸುತ್ತಿರುವ ಮನೆಯ ಯಜಮಾನಿ ಆಗಿರುವ ಗೃಹಿಣಿಯ ಬ್ಯಾಂಕ್ ಖಾತೆಗೆ ತಿಂಗಳಿಗೆ 2000 ಸಹಾಯ ಹಣವನ್ನು ಕೊಡುವುದಾಗಿ ಸರ್ಕಾರ ಭರವಸೆ ನೀಡಿತ್ತು.

ಗೃಹಲಕ್ಷ್ಮಿ

ಆದರೆ ಈ ಯೋಜನೆಯ ಬಗ್ಗೆ ಸಾಕಷ್ಟು ಗೊಂದಲಗಳು ಸಹ ಶುರುವಾಗಿದ್ದವು, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಹ ತಡವಾಗಿತ್ತು. ಯಾವ ಮಹಿಳೆಗೆ ಈ ಯೋಜನೆಯ ಸೌಲಭ್ಯ ಸಿಗುತ್ತದೆ, ಮನೆಯಲ್ಲಿ ಅತ್ತೆ ಸೊಸೆ ಇಬ್ಬರು ಇದ್ದರೆ, ಮನೆಯ ಯಜಮಾನಿ ಎಂದು ಯಾರನ್ನು ಆಯ್ಕೆ ಮಾಡುವುದು? ಎಪಿಎಲ್, ಬಿಪಿಎಲ್ ರೇಷನ್ ಕಾರ್ಡ್ ಹೀಗೆ ಬಹಳಷ್ಟು ಗೊಂದಲ ಇತ್ತು.

ಹಾಗೆಯೇ ಮನೆಯ ಗೃಹಲಕ್ಷ್ಮಿಯರಿಗೆ ಈ ಯೋಜನೆಯ ಪ್ರಯೋಜನ ಸಿಗಬೇಕು, ಅವರಿಗೆ ಹೋಗುವ ಹಣವನ್ನು ಬೇರೆ ಯಾರು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಸರ್ಕಾರ ಇಷ್ಟು ದಿವಸ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು, ನಿನ್ನೆ ಗೃಹಲಕ್ಷ್ಮಿ ಯೋಜನೆಯು ಲಾಂಚ್ ಆಗಿದೆ.

ಈ ಯೋಜನೆಗೆ ಒಂದು ಆಪ್ ಕೂಡ ಲಾಂಚ್ ಮಾಡಲಾಗಿದೆ. ವಿಧಾನಸೌಧದ ಬ್ಯಾಕ್ವೆಟ್ ನಲ್ಲಿ ನಿನ್ನೆ ಸಂಜೆ ನಡೆದ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ. ಆದರೆ ಈಗ ಗೃಹಲಕ್ಷ್ಮಿ ಯೋಜನೆಯ ಕುರಿತ ಹಾಗೆ ಕೆಲವು ಬದಲಾವಣೆ ಮಾಡಲಾಗಿದ್ದು, ಹೊಸ ನಿಗಮಗಳನ್ನು ತರಲಾಗಿದೆ.

ಅರ್ಜಿ ಹಾಕುವ ಹೆಣ್ಣುಮಕ್ಕಳಿಗೆ ಕೆಲವು ಅರ್ಹತೆಗಳು ಇದ್ದು, ಅವುಗಳು ಸರಿ ಬಂದರೆ ಮಾತ್ರ ನೀವು ಅರ್ಜಿ ಸಲ್ಲಿಸಬಹುದು. ಅರ್ಹತೆಗೆ ಬರದ ಹೆಣ್ಣುಮಕ್ಳಳಿಗೆ ಗೃಹಲಕ್ಷ್ಮಿ ಯೋಜನೆಯ ಪ್ರಯೋಜ ಸಿಗುವುದಿಲ್ಲ. ಹಾಗಿದ್ದರೆ ಸರ್ಕಾರ ಹೆಣ್ಣುಮಕ್ಕಳಿಗೆ ನೀಡಿರುವ ಅರ್ಹತೆಗಳು ಏನೇನು ಎಂದು ತಿಳಿಸುತ್ತೇವೆ ನೋಡಿ.

*ಕುಟುಂಬದ ರೇಷನ್ ಕಾರ್ಡ್ ನಲ್ಲಿ ಮನೆಯ ಮುಖ್ಯಸ್ಥೆ ಎಂದು ಇರುವ ಮಹಿಳೆಗೆ ಮಾತ್ರ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುವ ಅರ್ಹತೆ ಇರುತ್ತದೆ.

*ರೇಷನ್ ಕಾರ್ಡ್ ನಲ್ಲಿ ಮಹಿಳೆಯನ್ನು ಮನೆಯ ಮುಖ್ಯಸ್ಥೆ ಎಂದು ಹಾಕಿಲ್ಲವಾದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ.

*ಒಂದು ವೇಳೆ ಇದು ಆಗಿಲ್ಲದೆ ಹೋದರೆ. ಮೊದಲು ರೇಷನ್ ನಲ್ಲಿ ಬದಲಾವಣೆ ಮಾಡಿ, ಹೆಣ್ಣುಮಕ್ಕಳೇ ಮನೆಯ ಯಜಮಾನಿ ಎಂದು ಮಾಡಿದ ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

*ಇದಕ್ಕಾಗಿ ಆಹಾರ ಇಲಾಖೆಗೆ ಅರ್ಜಿ ನೀಡಿ ನಂತರ ಮಹಿಳೆಯರು ಅರ್ಜಿ ಸಲ್ಲಿಸಬಹುದು.

*ಒಂದು ವೇಳೆ ಮಹಿಳೆಗೆ ಅಥವಾ ಆಕೆಯ ಪತಿಯ ಹತ್ತಿರ GST ನಂಬರ್ ಇದ್ದರೆ ಅವರು ಗೃಹಲಕ್ಷ್ಮಿ ಯೋಜನೆಯ ಪ್ರಯೋಜನ ಪಡೆಯುವುದಿಲ್ಲ.ಇದಿಷ್ಟು ಸರ್ಕಾರದ ಹೊಸ ನಿಯಮ ಆಗಿದ್ದು, ಈ ಎಲ್ಲಾ ಅರ್ಹತೆಯನ್ನು ನೀವು ಹೊಂದಿದ್ದರೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಮೂಲಕ ನಿಮಗೆ 2000 ಸಿಗುತ್ತದೆ.

Facebook: https://www.facebook.com/PragathiTV/

Pragati TV Social Connect for more latest u

Leave a Reply

Your email address will not be published. Required fields are marked *