ಮಧುಗಿರಿಯಲ್ಲಿ 74.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ GTTCಕಾಲೇಜು.

ಮಧುಗಿರಿಯಲ್ಲಿ 74.5 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ GTTCಕಾಲೇಜು.

74.5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಸಿದ್ಧತೆ.

ಮಧುಗಿರಿ: ಯುವಕರಿಗೆ ಉದ್ಯೋಗ ಸೃಷ್ಟಿಸುವುದು ನನ್ನ ಮತ್ತೊಂದು ಗುರಿ ಎಂದು ಕೆ ಎನ್ ರಾಜಣ್ಣ ಮಾತನಾಡಿದ್ದಾರೆ. ಮಧುಗಿರಿಯ ದೊಡ್ಡಿರಿ ಹೋಬಳಿ ಕಾಣದ ಪಂಚಾಯಿತಿ ವ್ಯಾಪ್ತಿಯ 5 ಕೋಟಿ ವೆಚ್ಚದ ರಸ್ತೆ ಲೋಕಾರ್ಪಣೆ ಹಾಗೂ ಸವಲತ್ತು ವಿತರಣೆ ಮಾಡಿದ ಕೆ ಎನ್ ರಾಜಣ್ಣ ದೊಡ್ಡೇರಿ ಹೋಬಳಿಯಲ್ಲಿ ಕೋಟಿ ರೂಗಳ ವೆಚ್ಚದ ಹಲವು ಕಾಮಗಾರಿಗೆ ಚಾಲನೆ ನೀಡಿ ದೊಡ್ಡೇರಿ ಹೋಬಳಿಯ ಕವಣದಾಲ ಗ್ರಾಮ ಪಂಚಾಯಿತಿ ಕಟ್ಟಡ ನವೀಕರಣ ಮತ್ತು 5 ಕೋಟಿ ವೆಚ್ಚದ ನೂತನ ರಸ್ತೆ ಲೋಕಾರ್ಪಣೆ ಮಾಡಿದರು.

ವಿಶೇಷ ಚೇತನರಿಗೆ ನಾನಾ ಸವಲತ್ತುಗಳ ವಿತರಣೆ ಮಾಡಿಕವಣದಲ ಪಂಚಾಯಿತಿ ವ್ಯಾಪ್ತಿಯ ರೈತರಿಗೆ 8 ಕೋಟಿ 30 ಲಕ್ಷ ರೂಗಳ ಸಾಲ ವಿತರಣೆ ಮಾಡಿರುವುದಾಗಿ ದಾಖಲೆ ತೋರಿಸಿದ್ರು.

ಮಧುಗಿರಿ ತಾಲೂಕಿನಲ್ಲಿ ಕವಣದಾಲ ಪಂಚಾಯತಿ ಮಾದರಿ ಎಂದು ಹೊಗಳಿದ ರಾಜಣ್ಣ ತಾಲೂಕಿನಲ್ಲಿ ಉದ್ಯೋಗ ಸೃಷ್ಟಿಗೆ ಜಿಟಿಟಿಸಿ ಕಾಲೇಜಿನ ಲೋಕಾರ್ಪಣೆಗೆ ತಯಾರಿ ನಡೆಸುತ್ತಿದ್ದೇವೆ ಹಾಗೂ 74 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಜಿಟಿಟಿಸಿ ಕಾಲೇಜಿಗೆ ಸುಮಾರು 9.5 ಎಕರೆ ಪ್ರದೇಶದಲ್ಲಿ ತಲೆಯೆತ್ತಲ್ಲಿರುವ ಕಾಲೇಜು ಎಲ್ಲರಿಗೂ ಆಶಾದಾಯಕವಾಗಲಿದೆ ಎಂದು ಹೇಳಿದರು. ಮಾದರಿ ಪಂಚಾಯಿತಿ ಎಂದು ಅಭಿವೃದ್ಧಿ ಅಧಿಕಾರಿ ವಿಜಯ್ ಕುಮಾರ್ ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಂಚಾಯತಿ ಅಧ್ಯಕ್ಷೆ ದಿವ್ಯ, ಇಇ ಹನುಮಂತರಾವ್, ಇಒ ಲಕ್ಷ್ಮಣ್, ಎಡಿಓ ದಯಾನಂದ್, ಬಿ ನಾಗೇಶ್ ಬಾಬು, ತುಂಗೋಟಿ ರಾಮಣ್ಣ, ಮತ್ತಿತರರು, ಮುಖಂಡರು ಉಪಸ್ಥಿತರಿದ್ದರು.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *