ಬೆಂಗಳೂರು : ಪೊಲೀಸರ ವಿರುದ್ಧದ ಸಿಟ್ಟಿಗೆ ಮಗ ಕಾಣೆಯಾಗಿದ್ದಾನೆ ಎಂಬ ಸುಳ್ಳು ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ತಾಯಿಗೆ ಕರ್ನಾಟಕ ಹೈಕೋರ್ಟ್ ಚುರುಕು ತೀರ್ಪು ನೀಡಿದ್ದು, ₹2 ಲಕ್ಷ ದಂಡ ವಿಧಿಸಿದೆ. ಎರಡು ವಾರಗಳಲ್ಲಿ ದಂಡ ಮೊತ್ತವನ್ನು ಪಾವತಿಸದಿದ್ದರೆ, ನ್ಯಾಯಾಂಗ ನಿಂದನೆ ಪ್ರಕರಣ ಹಾಕಲಾಗುತ್ತದೆ ಎಂದು ಎಚ್ಚರಿಸಲಾಗಿದೆ.
ಘಟನೆ ಹೀಗಿತ್ತು:
ಬೆಂಗಳೂರು ಇಂದಿರಾನಗರ ನಿವಾಸಿ ಮಹೇಶ್ವರಿ ಎಂಬವರು ತಮ್ಮ ಮಗ ಕೃಪಲಾನಿ ಕಾಣೆಯಾಗಿದ್ದಾನೆಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಾಯಿ ದೂರಿನಲ್ಲಿ, “ಕೃಪಲಾನಿ ಪೊಲೀಸ್ ಠಾಣೆಗೆ ಹೋದವರು ವಾಪಸ್ ಬಂದಿಲ್ಲ,” ಎಂದು ಆರೋಪಿಸಿದ್ದರು.
ಆದರೆ ವಿಚಾರಣೆಯಲ್ಲಿ ಬೇರೇನು ಬೆಳಕಿಗೆ ಬಂದಿದ್ದು ಪೊಲೀಸರಿಗೂ ನ್ಯಾಯಾಲಯಕ್ಕೂ ಶಾಕ್ ನೀಡುವಂತಹದ್ದಾಗಿದೆ.
ಸಿಡಿಆರ್ ಮೂಲಕ ಸುಳ್ಳು ಬಯಲಾಗಿದೆ:
ಪೊಲೀಸರು ಸಿಡಿಆರ್ (Call Detail Record) ಪರಿಶೀಲನೆ ನಡೆಸಿದಾಗ, ಕೃಪಲಾನಿ ತಮ್ಮ ತಾಯಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂಬುದು ಸ್ಪಷ್ಟವಾಯಿತು. ಅಲ್ಲದೇ ಅವರು ಚೆನ್ನೈನ ಮ್ಯಾರಿಯಾಟ್ ಹೋಟೆಲ್ನಲ್ಲಿದ್ದರು ಎಂಬುದೂ ಪತ್ತೆಯಾಯಿತು.
ಈ ಮಾಹಿತಿಯ ಆಧಾರದ ಮೇಲೆ, ಪೊಲೀಸರು ಅವರನ್ನು ಚೆನ್ನೈನಲ್ಲಿ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿದರು.
ಇನ್ಸ್ಪೆಕ್ಟರ್ ವಿರುದ್ಧದ ದ್ವೇಷವೇ ಕಾರಣ?
ಈ ಪ್ರಕರಣದ ಹಿಂದೆಗಿನ ಕಾರಣವೇನೆಂದರೆ — ಪಕ್ಕದ ಮನೆಯವರು ಗಲಾಟೆ ಮಾಡುತ್ತಾರೆ, ಗಾಂಜಾ ಮಾರುತ್ತಾರೆ ಎಂಬ ಆರೋಪವನ್ನು ಕೃಪಲಾನಿ ಇಂದಿರಾನಗರ ಪೊಲೀಸರಿಗೆ ನೀಡಿದ್ದರು. ಪ್ರಕರಣ ಎನ್‌ಸಿಆರ್ ಆಗಿ ದಾಖಲಾಗಿ ತನಿಖೆ ನಡೆದಿತ್ತು. ನಂತರ ಕೃಪಲಾನಿ ಇನ್ಸ್ಪೆಕ್ಟರ್ ವಿರುದ್ಧ ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಇದರ ಬೆನ್ನಲ್ಲೇ ತಾಯಿ ಮಹೇಶ್ವರಿ, ಆ ಇನ್ಸ್ಪೆಕ್ಟರ್ ವಿರುದ್ಧ ಸಿಟ್ಟಿನ ಪ್ರತೀಕಾರವಾಗಿ ಸುಳ್ಳು ‘ಹೆಬಿಯಸ್ ಕಾರ್ಪಸ್‘ ಅರ್ಜಿ ಸಲ್ಲಿಸಿದ್ದದ್ದು ತೋರುತ್ತದೆ.
ಹೈಕೋರ್ಟ್ ತೀರ್ಪು:
- ₹2 ಲಕ್ಷ ದಂಡ
- ಅದರಲ್ಲಿ ₹1 ಲಕ್ಷ ಕಾನೂನು ಸೇವಾ ಪ್ರಾಧಿಕಾರಕ್ಕೆ
- ಮತ್ತೊಂದು ₹1 ಲಕ್ಷ ಪೊಲೀಸ್ ಕಲ್ಯಾಣ ನಿಧಿಗೆ ಪಾವತಿ
ನ್ಯಾಯಾಂಗ ಎಚ್ಚರಿಕೆ:
“ಸುಳ್ಳು ಅರ್ಜಿಗಳನ್ನು ನ್ಯಾಯಾಲಯ ದುರ್ಬಳಕೆ ಮಾಡಲು ಬಳಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ನ್ಯಾಯಮೂರ್ತಿಗಳು ತೀವ್ರವಾಗಿ ಎಚ್ಚರಿಸಿದ್ದಾರೆ.
For More Updates Join our WhatsApp Group :