ಮುಂಬೈ: ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟನೆಯ ‘ರಾಮಾಯಣ’ ಈಗಾಗಲೇ ಭಾರತದ ಅತಿ ದೊಡ್ಡ ಬಜೆಟ್ ಸಿನಿಮಾವಾಗಿ ಖ್ಯಾತಿಯಲ್ಲಿದೆ. ಈ ಚಿತ್ರವನ್ನು ಹಾಲಿವುಡ್ ಮಟ್ಟದ ತಂತ್ರಜ್ಞಾನದಿಂದ ನಿರ್ಮಿಸಲಾಗುತ್ತಿದ್ದು, ಅತ್ಯುತ್ತಮ ವಿಎಫ್ಎಕ್ಸ್ (VFX)ತಂತ್ರಜ್ಞಾನ ಬಳಸಲಾಗುತ್ತಿದೆ.
ಹಾಲಿವುಡ್ ಸ್ಟೈಲ್ ತಂತ್ರಜ್ಞಾನ: ‘ರಾಮಾಯಣ’ ಸಿನಿಮಾಕ್ಕೆ ವಿಎಫ್ಎಕ್ಸ್ ನೀಡುತ್ತಿರುವುದು NEG ಸಂಸ್ಥೆ, ಇದು ‘ಹ್ಯಾರಿ ಪಾಟರ್’, ‘ಡಾರ್ಕ್ ನೈಟ್’, ‘ಜೇಮ್ಸ್ ಬಾಂಡ್’ ಸೇರಿದಂತೆ ಅನೇಕ ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳಿಗೆ ಕೆಲಸ ಮಾಡಿರುವ ವಿಶ್ವಪ್ರಸಿದ್ಧ ಸ್ಟುಡಿಯೋ.
ಸಿನಿಮಾದ ನಿರ್ಮಾಪಕ*ನಮಿತ್ ಮಲ್ಹೋತ್ರಾ ಸ್ವತಃ ಹಾಲಿವುಡ್ ಟಾಪ್ ವಿಎಫ್ಎಕ್ಸ್ ಸ್ಟುಡಿಯೋದ ಸಹಮಾಲೀಕರೂ ಹಾಗೂ ಸಿಇಒ ಆಗಿರುವುದರಿಂದ, ಈ ಸಿನಿಮಾದಲ್ಲಿ ಅತಿ ಉನ್ನತ ಮಟ್ಟದ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
ಕ್ಸೇವಿಯರ್ ಬೆರ್ನಾಶೋನಿ ನೇಮಕ: ಇತ್ತೀಚಿನ ಹಾಲಿವುಡ್ ಹಿಟ್‌ಗಳಾದ ‘ವೆನಮ್, ‘ಗಾಡ್ಜಿಲ್ಲಾ vs ಕಾಂಗ್’ ಸಿನಿಮಾಗಳಲ್ಲಿ ಕೆಲಸ ಮಾಡಿದ ಕ್ಸೇವಿಯರ್ ಬೆರ್ನಾಶೋನಿ ಅವರನ್ನು ‘ರಾಮಾಯಣ ಸಿನಿಮಾದ ವಿಎಫ್ಎಕ್ಸ್ ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿದೆ.ವಿಶೇಷವಾಗಿ ‘ರಾಮಾಯಣ 2’ ಚಿತ್ರದ ಸಂಪೂರ್ಣ ವಿಎಫ್ಎಕ್ಸ್ ಕಾರ್ಯಗಳ ಜವಾಬ್ದಾರಿ ಅವರದ್ದೇ ಆಗಿರಲಿದೆ.
ಅತ್ಯುತ್ತಮ ಗುಣಮಟ್ಟದ ಲೋಕ: ನಟಿ ಇಂದಿರಾ ಕೃಷ್ಣ (ಕೌಸಲ್ಯ ಪಾತ್ರ) ಹೇಳುವಂತೆ, “ರಾಮಾಯಣ ಸಿನಿಮಾದಲ್ಲಿ ಹೊಸ ಲೋಕವನ್ನೇ ಸೃಷ್ಟಿಸಲಾಗಿದೆ. ನಾನು ವಿಎಫ್ಎಕ್ಸ್ ಮೆಷರ್‌ಮೆಂಟ್‌ಗೆ ಹೋದಾಗ, ಕ್ರಿಸ್ಟೊಫರ್ ನೋಲನ್ ನಿರ್ದೇಶನದ ‘ಇಂಟರ್ಸ್ಟೆಲ್ಲರ್ಗೆ ಬಳಸಿದ ಯಂತ್ರವನ್ನೇ ತರಲಾಗಿತ್ತು. ಅದರಲ್ಲಿ 86 ಕ್ಯಾಮೆರಾಗಳಿದ್ದವು. ನಾನು ಹೇಗೆ ನಡೆದೆ, ಮುಖಭಾವ ಬದಲಿಸಿದೆ ಎಲ್ಲವೂ ಅದರಲ್ಲಿ ಸೆರೆ ಹಿಡಿಯಲಾಯಿತು” ಎಂದಿದ್ದಾರೆ.
ಈಗಾಗಲೇ ಕ್ಸೇವಿಯರ್ ತಂಡ ‘ರಾಮಾಯಣ 2’ ವಿಎಫ್ಎಕ್ಸ್‌ಗೆ ಸಂಬಂಧಿಸಿದ ಮಾಡೆಲ್‌ಗಳ ತಯಾರಿಯನ್ನು ಪ್ರಾರಂಭಿಸಿದೆ. ಭಾರಿ ಬಜೆಟ್, ಹಾಲಿವುಡ್ ಮಟ್ಟದ ತಂತ್ರಜ್ಞಾನ, ಪ್ಯಾನ್-ಇಂಡಿಯಾ ತಾರೆಗಳ ಅಭಿನಯ – ಎಲ್ಲವನ್ನೂ ಸೇರಿಸಿಕೊಂಡಿರುವ ಈ ಸಿನಿಮಾ ಈಗಾಗಲೇ ದೇಶಾದ್ಯಂತ ಭಾರಿ ನಿರೀಕ್ಷೆ ಹುಟ್ಟಿಸಿದೆ.
For More Updates Join our WhatsApp Group :