ಗೃಹ ನಿರ್ಮಾಣ ಸಹಕಾರ ಸಂಘಗಳಿಗೆ ಭೂ ವಿವಾದದ ಗ್ರಹಣ !

ರಾಜ್ಯದ ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ ಬಹುತೇಕ ಸಂಘಗಳು ವಿವಾದದ ಸುಳಿಯಲ್ಲಿ ಸಿಲುಕಿ ಮುಚ್ಚುವ ಭೀತಿ ಎದುರಿಸುತ್ತಿದ್ದು, ಸಂಘಸ್ಥಾಪನೆಯ ಮೂಲ ಉದ್ದೇಶವಾದ ಗೃಹನಿರ್ಮಾಣಕ್ಕೆ ಗ್ರಹಣ ಹಿಡಿದಿದೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಶಾಸಕ ಎನ್.ಎ.ಹ್ಯಾರಿಸ್ ಅವರು ಕೋರಿದ ಮಾಹಿತಿಗೆ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರು ಒದಗಿಸಿರುವ ಲಿಖಿತ ಮಾಹಿತಿ ಹೌಸಿಂಗ್ ಸೊಸೈಟಿಗಳ ವಸ್ತುಸ್ಥಿತಿ ಅನಾವರಣಗೊಂಡಿದ್ದು, ರಾಜ್ಯದಲ್ಲಿ ಈವರೆಗೆ ನೋಂದಣಿಯಾಗಿರುವ 1847 ಗೃಹ ನಿರ್ಮಾಣ ಸಹಕಾರ ಸಂಘಗಳಲ್ಲಿ 111 ಸಂಘಗಳು ಕಾರ್ಯ ನಿಲ್ಲಿಸಿ ಸ್ಥಗಿತಗೊಂಡಿವೆ. 377 ಸಹಕಾರ ಸಹಕಾರ ಸಂಘಗಳು ಮುಚ್ಚುವ ಭೀತಿ ಎದುರಿಸುತ್ತಿವೆ.

ಯುವಕ

ರಾಜ್ಯವಾರು ಗೃಹ ನಿರ್ಮಾಣ ಸಹಕಾರ ಸಂಘಗಳ ಸ್ಥಿತಿಗತಿ ಅವಲೋಕಿಸಿದರೆ ರಾಜಧಾನಿಯಲ್ಲಿ ಅತೀ ಹೆಚ್ಚು ಅಂದರೆ 616 ಸಂಘಗಳು ನೋಂದಾವಣಿಯಾಗಿದ್ದು, 537 ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಉಳಿದಂತೆ 64  ಸಂಘಗಳು ಮುಚ್ಚುವ ಹಂತ ತಲುಪಿದ್ದು, 15 ಸಂಘಗಳು ಸ್ಥಗಿತಗೊಂಡಿವೆ. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿರುವ 20 ಸಂಘಗಳಲ್ಲಿ 8 ಮುಚ್ಚುವ ಹಂತದಲ್ಲಿದ್ದರೆ, ರಾಮನಗರದಲ್ಲಿರುವ 17 ಸಂಘಗಳಲ್ಲಿ 3 ಮುಚ್ಚುಲ್ಪಟ್ಟು 5 ಮುಚ್ಚುವ ಭೀತಿ ಎದುರಿಸುತ್ತಿದೆ. ಇದೇ ರೀತಿ ತುಮಕೂರಲ್ಲಿ 43 ಸಂಘಗಳಿದ್ದು 27 ಕಾರ್ಯನಿರತವಾಗಿದ್ದು 17 ಮುಚ್ಚುವ  ಹಂತ ತಲುಪಿ,1 ಸಂಘ ಈಗಾಗಲೇ ಬಂದ್ ಆಗಿದೆ.

ಇದೇ ರೀತಿ ಚಿತ್ರದುರ್ಗದಲ್ಲಿ 12, ಶಿವಮೊಗ್ಗ 8, ಚಿಕ್ಕಬಳ್ಳಾಪುರ 9, ಕೋಲಾರದಲ್ಲಿ 14 ಸಂಘಗಳು ಮುಚ್ಚುವ ಸ್ಥಿತಿಯಲ್ಲಿವೆ. ಮಧ್ಯ ಕರ್ನಾಟಕದ ಜಿಲ್ಲೆ ದಾವಣಗೆರೆಯಲ್ಲಿ 34 ಸಂಘಗಳಿದ್ದು, 11 ಈಗಾಗಲೇ ಮುಚ್ಚಿದ್ದು, 7 ಮುಚ್ಚುವ ಹಂತ ತಲುಪಿವೆ. ಮೈಸೂರಿನಲ್ಲಿ ಬರೋಬ್ಬರಿ 299 ಸಂಘಗಳು ನೋಂದಾವಣಿಯಾಗಿದ್ದು 17 ಮುಚ್ಚಿದ್ದರೆ 21 ಮುಚ್ಚುವ ಹಂತದಲ್ಲಿವೆ. ಬೆಳಗಾವಿಯಲ್ಲಿರುವ 106 ಸಂಘಗಳ ಪೈಕಿ 18 ಮುಚ್ಚುವ ಹಂತದಲ್ಲಿದ್ದು 10 ಸಂಘಗಳು ಬೀಗ ಹಾಕಿವೆ. ಇದೇ ರೀತಿ ವಿಯಪುರದಲ್ಲಿ 22 ಸಂಘಗಳ ಅಸ್ಥಿತ್ವಕ್ಕೆ ಧಕ್ಕೆ ಬಂದಿದ್ದು, ಬಾಗಲಕೋಟದಲ್ಲಿ 11, ಧಾರವಾಡದಲ್ಲಿ 19 ಮುಚ್ಚುವ ಭೀತಿ ಎದುರಿಸುತ್ತಿವೆ. ಜೊತೆಗೆ 19 ಸಂಘಗಳು ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ ಮುಚ್ಚಲ್ಪಟ್ಟಿವೆ.  ಗದಗದಲ್ಲಿ 3, ಬೀದರದಲ್ಲಿ 13, ಕಲ್ಬುರ್ಗಿಯಲ್ಲಿ 9 ಗೃಹ ನಿರ್ಮಾಣ ಸಹಕಾರಿ ಸಂಘಗಳು ಕಾರ್ಯಚಟುವಟಿಕೆಗಳಿಗೆ ತೆರೆ ಎಳೆದಿದ್ದರೆ ರಾಯಚೂರಿನಲ್ಲಿ 18, ಕೊಪ್ಪಳದಲ್ಲಿ 8 ಸಂಘಗಳು ಮುಚ್ಚುವ ಭೀತಿಗೊಳಗಾಗಿವೆ.

ಈ ಅಂಕಿ-ಅಂಶ  ಅವಲೋಕಿಸಿದರೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಗೃಹ ನಿರ್ಮಾಣ ಸಹಕಾರ ಸಂಘಗಳು ಮುಚ್ಚಲು ಕಾರಣಗಳಾದರೂ ಏನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಭೂವಿವಾದ, ಅಕ್ರಮದ ಸುಳಿಯಲ್ಲಿ ಸಂಘಗಳು ಸಿಲುಕಿರುವುದೇ ಮುಚ್ಚುವ ಹಂತ ತಲುಪುವಂತಾಗಿರುವುದಕ್ಕೆ ಪ್ರಮುಖಕಾರಣವಾಗಿದ್ದು, ಸದಸ್ಯರಿಗೆ ಕಡಿಮೆದರದಲ್ಲಿ ನಿವೇಶನ, ಮನೆಯನ್ನು ಒದಗಿಸಿಕೊಡಲಾಗದೆ, ಅವರು ಪಾವತಿಸದ ಮುಂಗಡ ಹಣವನ್ನು ಪಾವತಿಸಲಾಗದೆ ಆಡಳಿತ ಮಂಡಳಿಯವರು ಒದ್ದಾಡುತ್ತಿದ್ದಾರೆ. ಸಂಘಗಳಿಗೆ ಎದುರಾಗುತ್ತಿರುವ ಭೂ ವಿವಾದಗಳನ್ನು ನಿಭಾಯಿಸಲಾಗದೆ ಸಂಘವನ್ನೆ ಕೊನೆಗಾಣಿಸುವ ಹಂತಕ್ಕೆ ನಿರ್ಣಯ ಮಾಡುತ್ತಿದ್ದಾರೆ.  ಇದರಿಂದ ನಿವೇಶನ, ಮನೆಯನ್ನು ಕಡಿಮೆ ದರದಲ್ಲಿ ಕೊಳ್ಳುವ ಮಹದಾಸೆಯಿಂದ ಹೌಸಿಂಗ್ ಸೊಸೈಟಿ ಸದಸ್ಯತ್ವ ಪಡೆದು ಉಳಿತಾಯ ಹಣವನ್ನು ಸಹಕಾರಿ ಸಂಘದಲ್ಲಿ ಹೂಡಿಕೆ ಮಾಡುವ ಹಾಲಿ, ನಿವೃತ್ತ ನೌಕರರುಗಳು, ಕಾರ್ಮಿಕರು, ಬಡ-ಮಧ್ಯಮದವರಿಗೆ ಭಾರೀ ನಿರಾಶೆಯುಂಟು ಮಾಡಿದೆ.

Pragati TV Social Connect for more latest u

Leave a Reply

Your email address will not be published. Required fields are marked *