ಗೃಹ ಸಚಿವ ಜಿ.ಪರಮೇಶ್ವರ್ ನಿವಾಸದಲ್ಲಿ ತಪ್ಪಿದ ಭಾರೀ ಅನಾಹುತ

ಬೆಂಗಳೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ನಿವಾಸದಲ್ಲಿ ಇಂದು ಅವರ ಬರ್ತ್ ಡೇ ಆಚರಿಸೋದಕ್ಕೆ ಅಪಾರ ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು ಕಾಯುತ್ತಿದ್ದರು. ಈ ವೇಳೆಯಲ್ಲೇ ಬುಡ ಸಹಿತ ತೆಂಗಿನ ಮರವೊಂದು ಮನೆಯ ಬಳಿಯಲ್ಲಿ ಹಾಕಿದ್ದಂತ ಟೆಂಟ್ ಮೇಲೆ ಉರುಳಿ ಬಿದ್ದಿದೆ.

ಈ ಪರಿಣಾಮ, ಯಾವುದೇ ಪ್ರಣಾಪಾಯ ಆಗದೇ ಭಾರೀ ಅನಾಹುತವೊಂದು ತಪ್ಪಿದಂತೆ ಆಗಿದೆ.

ಇಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಹುಟ್ಟು ಹಬ್ಬ. ಈ ಹುಟ್ಟು ಹಬ್ಬ ಆಚರಣೆಗಾಗಿ ಸಕಲ ಸಿದ್ಧತೆಯನ್ನು ಬೆಂಗಳೂರಿನ ಸದಾಶಿವನಗರದಲ್ಲಿರುವಂತ ಸರ್ಕಾರಿ ನಿವಾಸದಲ್ಲಿ ಮಾಡಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಭಾರೀ ಮಳೆ, ಗಾಳಿ ಬೀಸಿದ್ದರಿಂದ ಮನೆಯೊಳಗೆ ಟೆಂಟ್ ನಲ್ಲಿದ್ದಂತ ಕಾರ್ಯಕರ್ತರು, ಅಭಿಮಾನಿಗಳು ತೆರಳಿದ್ದಾರೆ.

ಇದೇ ಸಂದರ್ಭದಲ್ಲಿ ಮನೆಯ ಮುಂದಿದ್ದಂತ ತೆಂಗಿನ ಮರವೊಂದು ಬುಡ ಸಹಿತ ಭಾರೀ ಗಾಳಿ ಮಳೆಗೆ ಟೆಂಟ್ ಮೇಲೆ ಉರುಳಿ ಬಿದ್ದಿದೆ. ಈ ಹಿನ್ನಲೆಯಲ್ಲಿ ಡಾ.ಜಿ ಪರಮೇಶ್ವರ್ ಅವರಿಗೆ ಕಾಯುತ್ತಿದ್ದಂತ ನೂರಾರು ಅಭಿಮಾನಿಗಳು, ಕಾರ್ಯಕರ್ತರಲ್ಲಿ ಕೆಲ ಕಾಲ ಆತಂಕಕ್ಕೂ ಕಾರಣವಾಗಿತ್ತು.

ಬೆಂಗಳೂರಿನ ಸದಾಶಿವನಗರದಲ್ಲಿನ ಸರ್ಕಾರಿ ನಿವಾಸದಲ್ಲಿ ಜರ್ಮನ್ ಟೆಂಟ್ ಮೇಲೆ ತೆಂಗಿನ ಮರ ಬಿದ್ದ ಕಾರಣ ಕೆಲ ಕಾಲ ಸ್ಥಳದಲ್ಲಿ ಆತಂಕವಿತ್ತು. ಈಗ ಪರಿಸ್ಥಿತಿ ತಿಳಿಯಾಗಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *