ನವದೆಹಲಿ: ಪ್ರಸಕ್ತ ಅತಿಥೇಯ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಎರಡನೇ ಪಂದ್ಯವನ್ನು ಹೀನಾಯವಾಗಿ ಸೋತ ಟೀಮ್ ಇಂಡಿಯಾ, ಲಂಕಾ ಬೌಲರ್ಗಳ ಆರ್ಭಟಕ್ಕೆ ಸಂಪೂರ್ಣ ತತ್ತರಿಸಿತು. 32 ರನ್ಗಳ ಅಂತರದಿಂದ ಶ್ರೀಲಂಕಾ ಎದುರು ಸೋತ ಕ್ಯಾಪ್ಟನ್ ರೋಹಿತ್ ಶರ್ಮ ಪಡೆ, 2ನೇ ಮ್ಯಾಚ್ ಗೆಲ್ಲುವಲ್ಲಿ ವಿಫಲವಾಯಿತು.
ಆದ್ರೆ, ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅದ್ಭುತ ಬ್ಯಾಟಿಂಗ್ ಕೊಡುಗೆ ನೀಡಿರುವ ನಾಯಕ ರೋಹಿತ್ರನ್ನು ಇದೀಗ ಯುಪಿಎಸ್ಸಿ ಶಿಕ್ಷಕ ತಮ್ಮ ಕೋಚಿಂಗ್ ಕ್ಲಾಸ್ನಲ್ಲಿ ಗುಣಗಾನ ಮಾಡಿದ ಸಂಗತಿ ಸದ್ಯ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಯುಪಿಎಸ್ಸಿ ಕೋಚಿಂಗ್ ಕ್ಲಾಸ್ಗೂ ರೋಹಿತ್ ಶರ್ಮಗೂ ಏನು ಸಂಬಂಧ ಎಂಬ ಪ್ರಶ್ನೆ ಸದ್ಯ ಅನೇಕರಲ್ಲಿ ಕಾಡಿದ್ದು, ಇದಕ್ಕೆ ವೈರಲ್ ವಿಡಿಯೋ ಉತ್ತರ ನೀಡಿದೆ. ಯುಪಿಎಸ್ಸಿ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಮಧ್ಯೆ ರೋಹಿತ್ರ ಬ್ಯಾಟಿಂಗ್ ಅನ್ನು ಉದಾಹರಣೆಗೆ ತೆಗೆದುಕೊಂಡ ಶಿಕ್ಷಕ, ತಮಾಷೆಯಿಂದಲೇ ವಿದ್ಯಾರ್ಥಿಗಳ ಗಮನಸೆಳೆದಿದ್ದಾರೆ. ಎರಡು ಪಂದ್ಯಗಳಲ್ಲಿಯೂ ಆಕರ್ಷಕ ಇನ್ನಿಂಗ್ಸ್ ನೀಡಿರುವ ರೋಹಿತ್, ಏಕದಿನ ಸರಣಿಯಲ್ಲಿ ಒಟ್ಟು 122 ರನ್ ಕಲೆಹಾಕಿದ್ದಾರೆ.
‘ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೋಡಿದಾಗ ಪಿಚ್ ರನ್ ಗಳಿಸಲೆಂದೇ ಮಾಡಿರುವಂತೆ ತೋರುತ್ತದೆ. ಆದರೆ ಇತರ ಬ್ಯಾಟರ್ಗಳು ಕ್ರೀಸ್ಗೆ ಬಂದಾಗ ಅದು ಕಠಿಣ ಎಂದು ಅನಿಸುತ್ತದೆ. ಅದು ಏಕೆ ಎಂಬುದು ನಿಜಕ್ಕೂ ಗೊಂದಲಮಯವಾಗಿದೆ’ ಎಂದು ಶಿಕ್ಷಕರು ಹಾಸ್ಯಸ್ಪದವಾಗಿ ಹೇಳಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.