ಯಾದಗಿರಿ : ದಾರಿಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ಮರಳಿಸಿ ಪೊಲೀಸ್ ಕಾನ್ಸ್ಟೇಬಲ್ ಪ್ರಾಮಾಣಿಕತೆ ಮೆರೆದ ಪ್ರಸಂಗ ಯಾದಗಿರಿ ಜಿಲ್ಲೆಯ ಸುರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹತ್ತಿ ಬೆಳೆ ಮಾರಿ ಮನೆಗೆ ಹೋಗುವಾಗ ರೈತ ಗೌಡಪ್ಪ ಪಾಟೀಲ್ ರಸ್ತೆಯಲ್ಲಿ 1 ಲಕ್ಷದ 47 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದರು.
ಅದೇ ದಾರಿಯಲ್ಲಿ ಆಗಮಿಸಿದ ಸುರಪುರ ಪೋಲಿಸ್ ಠಾಣೆಯ ಕಾನ್ಸ್ಟೇಬಲ್ ದಯಾನಂದ ಜಮಾದರ್ ಅವರಿಗೆ ಆ ಹಣ ಸಿಕ್ಕಿದ್ದು, ಠಾಣೆ ಪಿಐ ಉಮೇಶ್ ನಾಯಕ ನೇತೃತ್ವದಲ್ಲಿ ರೈತ ಗೌಡಪ್ಪಗೆ ಹಣ ವಾಪಸ್ ಮಾಡಿದ್ದಾರೆ. ಸುರಪುರ ಪೋಲಿಸರ ಕಾರ್ಯಕ್ಕೆ ರೈತ ಗೌಡಪ್ಪ ಮತ್ತು ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
For More Updates Join our WhatsApp Group :
