ಬೆಂಗಳೂರು :ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಿದ ಅಮೂಲ್ಯ ಸೇವೆಯನ್ನು ಗುರುತಿಸಿ, ತುಮಕೂರು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದಿರುವ ಪ್ರಜಾಪ್ರಗತಿ ಸಂಪಾದಕರಾದ ಎಸ್. ನಾಗಣ್ಣ ಅವರನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ವಿಶೇಷವಾಗಿ ಸನ್ಮಾನಿಸಿದೆ.
ಪತ್ರಿಕೋದ್ಯಮ ಸೇವೆಗೆ ಸನ್ಮಾನ
ಅಭಿನಂದನಾ ಸಮಾರಂಭದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಎಸ್. ನಾಗಣ್ಣ ನೀಡಿದ ದೀರ್ಘಕಾಲದ ಸೇವೆಯನ್ನು ಪ್ರಶಂಸಿಸಲಾಯಿತು. ಸಮಾರಂಭವು ಪತ್ರಕರ್ತರೊಂದಿಗೆ ಜೊತೆಗೆ ಸಾಹಿತ್ಯ-ಸಾಂಸ್ಕೃತಿಕ ವಲಯದವರನ್ನು ಕೂಡ ಒಂದೆಡೆ ಸೇರಿಸಿತು.
ಸಮಾರಂಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಶಿವನಂದ ತಗಡೂರು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ,ಎಚ್. ಬಿ. ಮದನಗೌಡ,ಮಧುಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಎಸ್. ನಾಗಣ್ಣ ಅವರಿಗೆ ಹಾರೈಕೆ ಸಲ್ಲಿಸಿದರು
For More Updates Join our WhatsApp Group :