ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಗೃಹಿಣಿಯೊಬ್ಬರು ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ ದೇಹದಲ್ಲಿ ಶೇಕಡ 75 ರಷ್ಟು ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಗೃಹಿಣಿಯ ಸಹೋದರಿ ಮತ್ತು ತಾಯಿ ಹೇಳೋದು ಬೇರೆ. ಅವರ ಪ್ರಕಾರ ಸಿಲಿಂಡರ್ ಲೀಕ್ ಆಗಿಲ್ಲ, ಆಕೆಯ ಗಂಡನೇ ಸಿಲಿಂಡರ್ನಿಂದ ಅನಿಲ ಲೀಕ್ ಮಾಡಿ ಕೊಲ್ಲುವ ಪ್ರಯತ್ನ ಮಾಡಿದ್ದಾನೆ ಎಂದು ಅವರು ಹೇಳುತ್ತಾರೆ.

ಮಾಧ್ಯಮಗಳೊಂದಿಗೆ ಮಾತಾಡಿರುವ ಸಹೋದರಿ, ವರದಕ್ಷಿಣಿಗಾಗಿ ತನ್ನಕ್ಕನನ್ನು ದೈಹಿಕ ಮತ್ತು ಮಾನಸಿಕ ಹಿಂಸೆಗೆ ಗುರಿಪಡಿಸಲಾಗುತಿತ್ತು, ಪ್ರತಿಯೊಂದು ವಿಷಯಕ್ಕೆ ಅಕ್ಕನನ್ನು ಆಕೆಯ ಗಂಡ ಹೊಡೆಯುವುದನ್ನು ಮಾಡುತ್ತಿದ್ದ, ಪೊಲೀಸರಿಗೆ ದೂರು ಕೊಡೋಣ ಅಂತ ತಾನು ಹೇಳಿದರೆ ಅಕ್ಕ, ಬೇಡ ಮನೆತನ ಮಾನ ಹರಾಜಾಗುತ್ತದೆ, ಸರಿ ಹೋಗಬಹುದು, ಸ್ವಲ್ಪ ದಿನ ಕಾಯೋಣ ಎನ್ನುತ್ತಿದ್ದಳು ಎಂದು ಹೇಳುತ್ತಾರೆ.