ಉಕ್ರೇನ್ ಸೇನೆಗೆ ದಿಢೀರ್ ಇಷ್ಟೊಂದು ಶಕ್ತಿ ಬಂದಿದ್ದು ಹೇಗೆ?

ಉಕ್ರೇನ್ ಸೇನೆಗೆ ದಿಢೀರ್ ಇಷ್ಟೊಂದು ಶಕ್ತಿ ಬಂದಿದ್ದು ಹೇಗೆ?

ರಷ್ಯಾ ಸೇನೆಯಿಂದ ಸರಿಯಾಗಿ ಒದೆ ತಿನ್ನುತ್ತಿದ್ದ ಉಕ್ರೇನ್ ದಿಢೀರ್ ತಿರುಗಿಬಿದ್ದು, ರಷ್ಯಾಗೆ ಬುದ್ಧಿ ಕಲಿಸಲು ಮುಂದಾಗಿದೆ. ಒಂದು ಕಡೆ, ಉಕ್ರೇನ್ ದೇಶದಲ್ಲಿನ ವಿದ್ಯುತ್ ವ್ಯವಸ್ಥೆಯ ಜಾಲವನ್ನೇ ರಷ್ಯಾ ಉಡಾಯಿಸಿದೆ, ಹೀಗಾಗಿಯೇ ಉಕ್ರೇನ್ನ ಕೋಟ್ಯಂತರ ಪ್ರಜೆಗಳು ಕರೆಂಟ್ ಇಲ್ಲದೆ ನರಳುತ್ತಿದ್ದಾರೆ. ಮತ್ತೊಂದು ಕಡೆ ಉಕ್ರೇನ್ನ ಮೂಲಸೌಕರ್ಯ ಕೂಡ ಉಡೀಸ್ ಆಗಿ ಹೋಗಿದೆ. ಇಷ್ಟೆಲ್ಲಾ ಆಗಿದ್ದರೂ, ಉಕ್ರೇನ್ ಇದೀಗ ರಷ್ಯಾ ವಿರುದ್ಧದ ಯುದ್ಧದಲ್ಲಿ ತಿರುಗಿ ಬಿದ್ದಿದ್ದು ಹೇಗೆ ಗೊತ್ತಾ?

ಉಕ್ರೇನ್ಗೆ ಇಷ್ಟು ಶಕ್ತಿ ಬಂದಿದ್ದು ಹೇಗೆ? ಹೌದು, ರಷ್ಯಾ ವಿರುದ್ಧ ಇದೀಗ ಡ್ರೋನ್ & ಮಿಸೈಲ್ ಬಳಸಿ ಉಕ್ರೇನ್ ಈ ರೇಂಜ್ಗೆ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಒಂದು ಬಲವಾದ ಅನುಮಾನ ಕಾಡುತ್ತದೆ. ಉಕ್ರೇನ್ ಸೇನೆಗೆ ದಿಢೀರ್ ಇಷ್ಟು ಶಕ್ತಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಯಾಕಂದ್ರೆ ರಷ್ಯಾ ಕೈಲಿ ಒದೆ ತಿನ್ನುತ್ತಿದ್ದ ಉಕ್ರೇನ್ ದಿಢೀರ್ ಈ ರೀತಿಯಾಗಿ ತಿರುಗೇಟು ನೀಡುತ್ತಿರುವುದನ್ನ ನೋಡಿ ಇಡೀ ಜಗತ್ತೇ ಇದೀಗ ಆಘಾತಕ್ಕೆ ಒಳಗಾಗಿದೆ. ಯಾಕಂದ್ರೆ ಉಕ್ರೇನ್ ಆಡುತ್ತಿರುವ ರೀತಿ ನೋಡಿ ರಷ್ಯಾ ತನ್ನ ಬಳಿ ಇರುವ ಅಪಾಯಕಾರಿ ನ್ಯೂಕ್ಲಿಯರ್ ವೆಪನ್ಸ್ ಬಳಸಿಬಿಟ್ಟರೆ ಕಥೆ ಏನು? ಹೀಗೆ ಒಂದು ಕಡೆ ರಷ್ಯಾ ದಾಳಿಯ ಬಗ್ಗೆ ಆತಂಕ ಕಾಡುವ ಬೆನ್ನಲ್ಲೇ, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ನೀಡುತ್ತಿರುವ ಬೆಂಬಲ ಪಡೆದು ಉಕ್ರೇನ್ ಇದೀಗ ಘೋರ ದಾಳಿಯ ನಡೆಸುತ್ತಿದೆ. ನ್ಯಾಟೋ ಒಕ್ಕೂಟದ ದೇಶಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕ ಸರ್ಕಾರ ಭಾರಿ ದೊಡ್ಡ ಪ್ರಮಾಣದ ನೆರವನ್ನು ಉಕ್ರೇನ್ ಸೇನೆಗೆ ನೀಡುತ್ತಿದೆ. ಹೀಗಾಗಿ ಉಕ್ರೇನ್ ತನ್ನ ಶತ್ರು ರಷ್ಯಾ ವಿರುದ್ಧ ತಿರುಗಿಬಿದ್ದು ದಾಳಿ ಮಾಡುತ್ತಿದೆ!

ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಅಸ್ತ್ರ? ರಷ್ಯಾ ವಿರುದ್ಧ ಉಕ್ರೇನ್ ಸೇನೆ ಡ್ರೋನ್ಗಳ ಮೂಲಕ ಭೀಕರ ಅಟ್ಯಾಕ್ ನಡೆಸಿದ್ದು, 9/11ರ ಅಮೆರಿಕ ಮೇಲಿನ ಭೀಕರ ದಾಳಿ ನೆನಪು ಮಾಡುವಂತೆ ಅಟ್ಯಾಕ್ ಆಗಿತ್ತು. 8 ಡ್ರೋನ್ಗಳ ಬಳಸಿ ಈ ರೀತಿ ಡೆಡ್ಲಿ ಅಟ್ಯಾಕ್ ಮಾಡಿರುವ ಆರೋಪ ಕೇಳಿ ಬಂದಿತ್ತು. ಹಾಗೇ ಈ ದಾಳಿಯ ತೀವ್ರತೆಗೆ ‘ಬ್ರಿಕ್ಸ್’ ಶೃಂಗಸಭೆ ನಡೆದಿದ್ದ ರಷ್ಯಾ ದೇಶದ ನಗರ ಖಜಾನ್ ನಲುಗಿ ಹೋಗಿತ್ತು. ಆದರೆ ಇದೇ ಘಟನೆ ಬಳಿಕ ರೊಚ್ಚಿಗೆದ್ದಿರುವ ರಷ್ಯಾ ಮಿಲಿಟರಿ, ಉಕ್ರೇನ್ ವಿರುದ್ಧ ನ್ಯೂಕ್ಲಿಯರ್ ಅಸ್ತ್ರ ಬಳಕೆ ಮಾಡುತ್ತಾ? ಎಂಬ ಅನುಮಾನ ಮೂಡಿದೆ.

Leave a Reply

Your email address will not be published. Required fields are marked *