ಹೈದರಾಬಾದ್: ಎಂಥಾ ಕ್ರೂರ ಮನಸ್ಥಿತಿ ಈತನದ್ದು, ಗರ್ಭಿಣಿ ಪತ್ನಿಯನ್ನು ಕೊಂದು ಪತಿಯೊಬ್ಬ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿರುವ ಘಟನೆ ಹೈದರಾಬಾದ್ನ ಮೆಡಿಪಲ್ಲಿಯಲ್ಲಿ ನಡೆದಿದೆ. ಪತ್ನಿಯನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿರಿಸಿದ್ದ ಘಟನೆ ಇದಾಗಿದೆ. ಸ್ವಾತಿ ಅಲಿಯಾಸ್ ಜ್ಯೋತಿ (22) ಎಂಬ ಮಹಿಳೆ ಮಹೇಂದರ್ ರೆಡ್ಡಿ ಅವರನ್ನು ವಿವಾಹವಾಗಿದ್ದರು.
ಇಬ್ಬರೂ ಮೆಡಿಪಲ್ಲಿಯ ಬೋಡುಪ್ಪಲ್‌ನಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ವಿಕಾರಾಬಾದ್ ಜಿಲ್ಲೆಯವರು. ಮನೆಯಲ್ಲಿ ಶಬ್ದ ಕೇಳಿದ ಬಳಿಕ ಅಕ್ಕಪಕ್ಕದ ಮನೆಯವರು ಎಚ್ಚೆತ್ತುಕೊಂಡಿದ್ದರು. ಕೆಲವು ನಿಮಿಷಗಳ ನಂತರ ಒಳಗೆ ಹೋದಾಗ ಸ್ವಾತಿಯ ಶವವನ್ನು ತುಂಡುಗಳಾಗಿ ಕತ್ತರಿಸಿ ಚೀಲದಲ್ಲಿ ಇಡಲಾಗಿತ್ತು.
ಮಾಹಿತಿಯ ಮೇರೆಗೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪಿ ಮಹೇಂದರ್ ನನ್ನು ವಶಕ್ಕೆ ಪಡೆದರು. ಆ ವ್ಯಕ್ತಿ ತನ್ನ ಹೆಂಡತಿಯನ್ನು ಕೊಂದು ಶವವನ್ನು ತುಂಡುಗಳಾಗಿ ಕತ್ತರಿಸಿರಬಹುದೆಂದು ಶಂಕಿಸಲಾಗಿದೆ. ಅವನು ಅವುಗಳನ್ನು ಚೀಲದಲ್ಲಿ ಇಟ್ಟುಕೊಂಡು ವಿಲೇವಾರಿ ಮಾಡಲು ಅವಕಾಶಕ್ಕಾಗಿ ಕಾಯುತ್ತಿದ್ದ ಎನ್ನಲಾಗಿದೆ.
ದಂಪತಿಗಳು ಒಂದು ತಿಂಗಳ ಹಿಂದೆ ಬೋಡುಪ್ಪಲ್‌ಗೆ ಬಂದು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.ಆ ಮಹಿಳೆ ಗರ್ಭಿಣಿಯಾಗಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಮಹಿಳೆಗೆ ಆ್ಯಸಿಡ್ ಸುರಿದು ಕೊಲೆ ಅಮ್ಮನನ್ನು ಅಪ್ಪ ಲೈಟರ್ನಿಂದ ಸುಟ್ಟು ಕೊಲೆ(Murder) ಮಾಡಿದ್ದಾರೆ ಎಂದು ಮಗ ತಂದೆಯ ವಿರುದ್ಧ ಹೇಳಿಕೆ ನೀಡಿದ್ದಾನೆ. ಗ್ರೇಟರ್ ನೋಯ್ಡಾದಲ್ಲಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ವಿಚಾರಣೆ ಸಮಯದಲ್ಲಿ 6 ವರ್ಷದ ಬಾಲಕ ಸಂಪೂರ್ಣ ಸತ್ಯವನ್ನು ಬಿಚ್ಚಿಟ್ಟಿದ್ದಾನೆ. ಅಪ್ಪ ತನ್ನ ತಾಯಿಯನ್ನು ತನ್ನ ಮುಂದೆಯೇ ಕೊಂದಿರುವುದಾಗಿ ತಿಳಿಸಿದ್ದಾನೆ. ಆಕೆಗೆ ನೀಡಿರುವ ಹಿಂಸೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಆ ಭಯಾನಕ ಘಟನೆಯನ್ನು ನೆನಪಿಸಿಕೊಳ್ಳುತ್ತಾ, ತನ್ನ ತಂದೆ ಮತ್ತೆ ಅಜ್ಜಿ ಸೇರಿ ಅಮ್ಮನ ಮೇಲೆ ಏನೋ ಸುರಿದು , ಕಪಾಳಮೋಕ್ಷ ಮಾಡಿ ಲೈಟರ್ನಿಂದ ಬೆಂಕಿ ಹಚ್ಚಿದ್ದರು ಎಂದು ಬಾಲಕ ಹೇಳಿದ್ದಾನೆ.
ಮಹಿಳೆಯೊಬ್ಬರು ಬಾಲಕನ ತಾಯಿ(ನಿಕ್ಕಿ) ಮೇಲೆ ಹಲ್ಲೆ ನಡೆಸಿ ಕೂದಲು ಹಿಡಿದು ಮನೆಯ ಹೊರಗೆ ಎಳೆದುಕೊಂಡು ಹೋಗುವುದನ್ನು ಕಾಣಬಹುದು. ಇನ್ನೊಂದು ವೀಡಿಯೊದಲ್ಲಿ ಮಹಿಳೆ ಬೆಂಕಿ ಹಚ್ಚಿದ ನಂತರ ಮೆಟ್ಟಿಲುಳಿಂದ ಕುಂಟುತ್ತಾ ಇಳಿಯುವುದನ್ನು ಕಾಣಬಹುದು.
ನೋಯ್ಡಾದ ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿರ್ಸಾ ಗ್ರಾಮದಲ್ಲಿ ನಡೆದ ಘಟನೆಯ ವಿಡಿಯೋವನ್ನು ಮೃತರ ಅಕ್ಕ ಕಾಂಚನ್ ಸೆರೆ ಹಿಡಿದಿದ್ದಾರೆ. ಬಳಿಕ ಅವರು ಮಾತನಾಡಿ, ತನ್ನ ತಂಗಿಗೆ ವಿಪಿನ್ ಹಾಗೂ ಆತನ ಮನೆಯವರು 36 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು.
For More Updates Join our WhatsApp Group :




