ತಮಿಳುನಾಡು: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ನಡೆದ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ.ಮರ ಕಡಿಯುವ ಕೆಲಸ ಮಾಡುವ ಕೊಲಂಜಿ ಎಂಬಾತ, ತನ್ನ ಪತ್ನಿ ಲಕ್ಷ್ಮಿಗೆ ತಂಗರಸು ಜೊತೆ ಅನೈತಿಕ ಸಂಬಂಧವಿದೆ ಎಂಬ ಅನುಮಾನದಿಂದ ಭೀಕರ ಹೆಜ್ಜೆ ಇಟ್ಟಿದ್ದಾನೆ.
ಪತ್ನಿ ಮನೆಯ ತಾರಸಿಯಲ್ಲಿ ಪ್ರಿಯಕರನೊಂದಿಗೆ ಇರುವುದನ್ನು ಕಂಡ ಕೋಪಗೊಂಡ ಕೊಲಂಜಿ, ಕುಡುಗೋಲಿನಿಂದ ಇಬ್ಬರನ್ನೂ ಹತ್ಯೆ ಮಾಡಿ, ಅವರ ರುಂಡವನ್ನು ದೇಹದಿಂದ ಬೇರ್ಪಡಿಸಿದ್ದಾನೆ.
ಬಳಿಕ ಆ ರುಂಡಗಳನ್ನು ತನ್ನ ಬೈಕ್‌ಗೆ ಕಟ್ಟಿ ನೆರೆಯ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ವಂಜಾರಂ ಪೊಲೀಸರು ತಕ್ಷಣ ಮನೆಯಿಂದ ತಲೆಯಿಲ್ಲದ ಶವಗಳನ್ನು ವಶಪಡಿಸಿಕೊಂಡು ಕೊಲಂಜಿಯನ್ನು ಬಂಧಿಸಿದ್ದಾರೆ. ಈ ದಂಪತಿಗೆ ಮೂವರು ಹೆಣ್ಣುಮಕ್ಕಳಿದ್ದು, ಅವರನ್ನು ಸಂಬಂಧಿಕರ ಆರೈಕೆಗೆ ಒಪ್ಪಿಸಲಾಗಿದೆ.ಇದೇ ತರಹದ ಘಟನೆ ಜೂನ್‌ನಲ್ಲಿ ಬೆಂಗಳೂರಿನ ಸೂರ್ಯನಗರದಲ್ಲಿ ನಡೆದಿತ್ತು. ಪತ್ನಿಯ ದ್ರೋಹಕ್ಕೆ ಕೋಪಗೊಂಡ ಗಂಡ ಶಿರಚ್ಛೇದ ಮಾಡಿ ರುಂಡದೊಂದಿಗೆ ಠಾಣೆಗೆ ಶರಣಾಗಿದ್ದನು.
For More Updates Join our WhatsApp Group :




