ಹೈದರಾಬಾದ್ : ಪ್ರತಿಭೆ ಅನ್ನೋದು ಯಾರ ಸ್ವತ್ತೂ ಅಲ್ಲ. ಈ ಪ್ರತಿಭೆಯ ಮೂಲಕವೇ ತಮ್ಮನ್ನು ತಾವು ಗುರುತಿಸಿಕೊಂಡವರು ಹಲವರಿದ್ದಾರೆ. ಇದೀಗ ಇಲ್ಲೊಬ್ಬ ಬಾಲಕ ಕೂಡಾ ತನ್ನ ಅಸಾಧಾರಣ ಪ್ರತಿಭೆಯಿಂದಲೇ ಎಲ್ಲರ ಗಮನ ಸೆಳೆದಿದ್ದಾನೆ. ಹೌದು ಆರು ವರ್ಷ ವಯಸ್ಸಿನ ಈ ಪೋರ ಕೇವಲ 20 ನಿಮಿಷಗಳಲ್ಲಿ 99 ರೂಬಿಕ್ಸ್ ಕ್ಯೂಬ್ ಬಳಸಿ ಪ್ರಧಾನಿ ಮೋದಿಯವರ ಚಿತ್ರ ಬಿಡಿಸಿದ್ದಾನೆ.

ಪ್ರತಿಭೆ, ಕಲೆ ಅನ್ನೋದು ಯಾರ ಸ್ವತ್ತೂ ಅಲ್ಲ. ಏನಿಲ್ಲದಿದ್ದರೂ ಬರೀ ತಮ್ಮ ಅಗಾಧ ಪ್ರತಿಭೆಯ ಮೂಲಕವೇ ಎತ್ತರಕ್ಕೆ ಬೆಳೆದ ಅದೆಷ್ಟೋ ಜನರಿದ್ದಾರೆ. ಹೀಗೆ ಪ್ರತಿಭೆ ಎನ್ನುವಂತಹದ್ದು ಎಂತಹವರನ್ನೂ ಉತ್ತುಂಗಕ್ಕೆ ತೆಗೆದುಕೊಂಡು ಹೋಗುತ್ತದೆ. ತಮ್ಮ ಟ್ಯಾಲೆಂಟ್ ಮೂಲಕವೇ ಸಾಧನೆಗೈದ ಹಲವಾರು ಮಂದಿಯನ್ನು ನೀವು ನೋಡಿರುತ್ತೀರಿ ಅಲ್ವಾ. ಅದೇ ರೀತಿ ಇಲ್ಲೊಬ್ಬ ಪುಟ್ಟ ಪೋರ ಕೂಡ ತನ್ನ ಅಗಾಧ ಪ್ರತಿಭೆಯ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾನೆ. ತೆಲಂಗಾಣದ ವಿಧತ್ ಎಂಬ 6 ವರ್ಷ ವಯಸ್ಸಿನ ಬಾಲಕ ಕೇವಲ 22 ನಿಮಿಷಗಳಲ್ಲಿ 99 ರೂಬಿಕ್ಸ್ ಕ್ಯೂಬ್ ಬಳಸಿ ಪ್ರಧಾನಿ ಮೋದಿಯವರ ಚಿತ್ರವನ್ನು ಬಿಡಿಸಿದ್ದು, ಈ ಬಾಲಕನ ಅಸಾಧಾರಣ ಪ್ರತಿಭೆಗೆ ಎಲ್ಲರೂ ಫಿದಾ ಆಗಿದ್ದಾರೆ.