“ನಾನು ಒಂಟಿ ಮಹಿಳೆ… ತಿಂಗಳಿಗೆ ₹15 ಲಕ್ಷ ಸಂಬಳ ಕೊಡಬೇಕು”: ಪ್ರವಾಹ ಸಂತ್ರಸ್ತರ ನಡುವೆ ಕಂಗನಾ Ranautನ ‘ವ್ಯಕ್ತಿ ವ್ಯಥೆ’ ವಾದ ವಿವಾದ.

“ನಾನು ಒಂಟಿ ಮಹಿಳೆ… ತಿಂಗಳಿಗೆ ₹15 ಲಕ್ಷ ಸಂಬಳ ಕೊಡಬೇಕು”: ಪ್ರವಾಹ ಸಂತ್ರಸ್ತರ ನಡುವೆ ಕಂಗನಾ Ranautನ 'ವ್ಯಕ್ತಿ ವ್ಯಥೆ' ವಾದ ವಿವಾದ

ಕುಲುಮನಾಲಿ: ಮಳೆಯಿಂದ ಹೊಡೆತಕ್ಕೆ ಒಳಪಟ್ಟ ಮಂಡಿ ಲೋಕಸಭಾ ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ ಸಂಸದ ಕಂಗನಾ ರನೌತ್, ಈ ಬಾರಿ ಜನರ ಆಕ್ರೋಶಕ್ಕೆ ಗುರಿಯಾದರು. ಸಂತ್ರಸ್ತರು ಮನೆ ಕಳೆದುಕೊಂಡು ಬೀದಿಗೆ ಬಂದಿರುವಾಗ, ಕಂಗನಾ ತಮ್ಮ ವ್ಯಕ್ತಿಗತ ನಷ್ಟದ ಬಗ್ಗೆ ಮಾತನಾಡಿದ್ದು, ಟೀಕೆಗೆ ಗುರಿಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಚರ್ಚೆಯ ವಿಷಯವಾಗಿದೆ.

ಸ್ಥಳದಲ್ಲಿ ಜನರ ಆಕ್ರೋಶ: “ಹೊರಟು ಹೋಗಿ!”

ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಂತೆ ಜನರಿಂದ ಹೋಗಿ ಹೋಗಿ ಎಂಬ ಕೂಗು ಕೇಳಿಬಂತು. ಮಾಧ್ಯಮದವರು ಬಿಟ್ಟು ನಿಂತಿಲ್ಲ – ಕಂಗನಾಳಿಗೆ ಕೆಲವೊಂದು ತೀವ್ರವಾದ ಪ್ರಶ್ನೆಗಳನ್ನೆಳೆದರು. ಈ ವೇಳೆ ಕಂಗನಾ ನೀವು ನನ್ನ ಮೇಲೆ ದಾಳಿ ಮಾಡೋಕೆ ಬಂದಿದ್ದೀರಾ?” ಎಂಬ ಅಚ್ಚರಿಯ ಪ್ರತಿಕ್ರಿಯೆ ನೀಡಿದರೆ, ಬಳಿಕ ತಮ್ಮ ಕಷ್ಟವನ್ನು ಹಂಚಿಕೊಂಡರು.

 “ನನ್ನ ರೆಸ್ಟೋರೆಂಟ್ 50 ರೂ. ಬಿಸ್ನೆಸ್ ಮಾಡಿದ್ರು!”

ನನಗೂ ಇಲ್ಲಿ ಮನೆ ಇದೆ, ರೆಸ್ಟೋರೆಂಟ್ ಇದೆ. ನಿನ್ನೆ ನನ್ನ ರೆಸ್ಟೋರೆಂಟ್ ಕೇವಲ ₹50 ಬಿಸ್ನೆಸ್ ಮಾಡಿದೆ. ನಾನು ತಿಂಗಳಿಗೆ ₹15 ಲಕ್ಷ ಸಿಬ್ಬಂದಿಗೆ ಸಂಬಳ ಕೊಡಬೇಕು. ನಾನು ಒಂಟಿ ಮಹಿಳೆ
ಕಂಗನಾ ರನೌತ್, ಮಾಧ್ಯಮದ ಮುಂದೆ ಹೇಳಿಕೆ

ಇದನ್ನೂ ಅವರು ಸ್ಪಷ್ಟಪಡಿಸಿದರು:
ನಾನು ಇಂಗ್ಲೆಂಡ್ನ ಕ್ವೀನ್ ಅಲ್ಲ. ನಾನು ಸಹ ಇಲ್ಲಿನವಳೇ. ನನ್ನ ಮೇಲೆ ದೋಷಾರೋಪ ಮಾಡಬೇಡಿ.”

ಹಿಂದೆಯೂ ಇದ್ದ ಹೋಲಿಕೆ ಹೇಳಿಕೆ

ಈ ಹಿಂದೆ, ಜುಲೈ 2023 ರಲ್ಲಿಯೂ ಜನರ ಬೇಡಿಕೆಗಳನ್ನು ಎದುರಿಸಿದಾಗ, ಕಂಗನಾ ಹೇಳಿದ್ದರು:

“ನನಗೆ ಹಣ ಬಿಡುಗಡೆ ಮಾಡಲು ಮಂತ್ರಿ ಅಧಿಕಾರವಿಲ್ಲ. ರಾಜಕೀಯ ಎಂದರೆ ನನಗೆ ಅಂದಾಗಿದ್ದೇ ಬೇರೆ. ಇಲ್ಲಾಗುತ್ತಿರುವುದು ಬೇರೆ!”

ಈ ಹೇಳಿಕೆಗಳು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ಜನರ ಕೋಪ ಮತ್ತಷ್ಟು ಹೆಚ್ಚಿಸುತ್ತಿವೆ.

ಜನರ ಪ್ರಶ್ನೆ: “ಇವರು ಜನಪ್ರತಿನಿಧೆಯೇ ಅಥವಾ ಸೆಲೆಬ್ರಿಟಿಯಾ?”

ಸ್ಥಳೀಯರು ಮತ್ತು ನೆಟ್‌ಜನರು ತೀವ್ರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಇಂತಹ ಸಮಯದಲ್ಲಿ ಸ್ವಂತ ನಷ್ಟದ ಬಗ್ಗೆ ಮಾತನಾಡುವ ಬದಲು ಜನರ ನೋವಿಗೆ ಸ್ಪಂದಿಸಬೇಕಿತ್ತು ಎಂಬ ಅಭಿಪ್ರಾಯ ಎದ್ದು ಬಂದಿದೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *