ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬರೆದಿರುವ ‘ನೀರಿನ ಹೆಜ್ಜೆ’ ಕೃತಿ ಇಂದು ಲೋಕಾರ್ಪಣೆಗೊಂಡಿದೆ. ಇಂದು (ನವೆಂಬರ್ 14) ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃತಿಯನ್ನು ಬಿಡುಗಡೆ ಮಾಡಿದರು.
ರಾಜ್ಯದ ಜಲ ವಿವಾದಗಳು, ನದಿಗಳ ಒಪ್ಪಂದಗಳು, ನ್ಯಾಯಾಲಯದ ತೀರ್ಪುಗಳು ಮತ್ತು ನೀರಾವರಿ ಯೋಜನೆಗಳ ಕುರಿತು ಆಳವಾದ ಮಾಹಿತಿ ಈ ಪುಸ್ತಕದಲ್ಲಿ ಒಳಗೊಂಡಿವೆ. ಇದೇ ವೇಳೆ ಮಾತನಾಡಿದ ಡಿಕೆ ಶಿವಕುಮಾರ್, ತಮ್ಮ ಕೃತಿಯಲ್ಲಿ ಏನೆಲ್ಲಾ ಇದೆ ಎನ್ನುವುದನ್ನ ಹೇಳಿಕೊಂಡರು. ಅದರಲ್ಲೂ ಮುಖ್ಯವಾಗಿ ಪವರ್ ಮಿನಿಸ್ಟರ್ ಬಯಸಿದ್ದ ಡಿಕೆಶಿಗೆ ನೀರಾವರಿ ಖಾತೆ ಸಿಕ್ಕಿರುವ ಘಟನೆ ಸ್ಮರಿಸಿಕೊಂಡರು.
For More Updates Join our WhatsApp Group :
