ಬೆಂಗಳೂರಿನ ಲಾಡ್ಜ್ನಲ್ಲಿ ನನ್ನ ಮೇಲೆ ಅ*ತ್ಯಚಾರ: BJP ಶಾಸಕನ ಪುತ್ರನ ವಿರುದ್ಧ ಯುವತಿ ಮತ್ತಷ್ಟು ಆರೋಪ.

ಬೆಂಗಳೂರಿನ ಲಾಡ್ಜ್ನಲ್ಲಿ ನನ್ನ ಮೇಲೆ ಅ*ತ್ಯಚಾರ: BJP ಶಾಸಕನ ಪುತ್ರನ ವಿರುದ್ಧ ಯುವತಿ ಮತ್ತಷ್ಟು ಆರೋಪ

ಬೀದರ್: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರ ಪ್ರತೀಕ್ ಪರವಾಗಿ ಸ್ಪಷ್ಟನೆ ನೀಡಿದ್ದ ಬಿಜೆಪಿ ಶಾಸಕ ಪ್ರಭು ಚೌಹಾಣ್ ಗೆ  ಸಂತ್ರಸ್ತ ಯುವತಿ ತಿರುಗೇಟು ನೀಡಿದ್ದಾಳೆ. ಬೀದರ್ ನಲ್ಲಿಂದು ಸುದ್ದಿಗೋಷ್ಟಿ ನಡೆಸಿದ ಯುವತಿ, ಪ್ರತೀಕ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ನನ್ನ ಮಗಳಂತೆ ಎಂದು ಹೇಳಿ ಪ್ರಭು ಚೌಹಾಣ್ ತೇಜೋವಧೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಪ್ರತೀಕ್ ನನಗೆ ಪರಿಚಯವಾಗಿದ್ದು, ಮದುವೆಯಾಗುವುದಾಗಿ ಹೇಳಿದ ಮೇಲೆ ಸಾಕಷ್ಟು ಸಲ ಓಡಾಡಿದ್ದೇವೆ. ಅಲ್ಲದೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಬೆಂಗಳೂರಿನ ಲಾಡ್ಜ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಮತ್ತಷ್ಟು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ಕೇಂದ್ರ ಮಾಜಿ ಸಚಿವ ಭಗವಂತ ಖೂಬಾ ಅವರೇ ಯುವತಿಯನ್ನು ಕರೆದುಕೊಂಡು ಹೋಗಿ ಮಹಿಳಾ ಆಯೊಗಕ್ಕೆ ದೂರು ಕೊಡಿಸಿದ್ದಾರೆ ಎನ್ನುವ ಪ್ರಭು ಚೌಹಾಣ್ ಆರೋಪದ ಬಗ್ಗೆ ಮಾತನಾಡಿದ ಯುವತಿ, ಬೀದರ್ ಯಾವ ರಾಜಕಾರಣಿಗಳು ದೂರು ಕೊಡಿ ಎಂದು ಹೇಳಿಲ್ಲ. ಮಹಿಳಾ ಹಕ್ಕುಗಳ ಆಯೋಗದ ಅಧ್ಯಕ್ಷರು ಸಹಾಯ ಮಾಡಿದ್ದಾರೆ. ಬೀದರ್ ಎಸ್ಪಿ ಪ್ರದೀಪ್ ಗುಂಟೆ ಸಹ ನಮಗೆ ಸಹಾಯ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.

ಪ್ರತೀಕ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ನನ್ನ ಮಗಳಂತೆ ಎಂದು ಹೇಳಿ ಪ್ರಭು ಚೌಹಾಣ್ ಸಹ ತೇಜೋವಧೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಮೂಲಕ ಪ್ರತೀಕ್ ನನಗೆ ಪರಿಚಯವಾಗಿದ್ದು, ಮದುವೆ ಆಗುವುದಾಗಿ ಹೇಳಿದ ಮೇಲೆ ಸಾಕಷ್ಟು ಸಲ ಓಡಾಡಿದ್ದೇವೆ. ಅಲ್ಲದೇ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಬೆಂಗಳೂರಿನ ಲಾಡ್ಜ್ ನಲ್ಲಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಆ ನಂತರ ನಾವಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದೇವೆ. ನಿಶ್ಚಿತಾರ್ಥವಾದ ಬಳಿಕ ಮದುವೆ ತಡ ಮಾಡುತ್ತಲೇ ಬಂದಿದ್ದಾರೆ. ದೊಡ್ಡ-ದೊಡ್ಡವರನ್ನು ಕರೆಯಿಸಿ ಅದ್ಧೂರಿ ಮದುವೆ ಮಾಡೋಣ ಎಂದಿದ್ದರು. ಏನೋ ಒಂದು ನೆಪ ಹೇಳಿ ಮದುವೆ ಮುಂದೂಡುತ್ತಲೇ ಬಂದರು. ಆನಂತರ ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡುವುದಕ್ಕೆ ಶುರುಮಾಡಿದರು ಎಂದು ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *