ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಎಳನೀರನ್ನು ಹೀಗೆ ಕುಡಿದರೆ ಸಾಕು ಹೊಟ್ಟೆಯ ಸುತ್ತ ಸೇರಿಕೊಂಡಿರುವ ಬೊಜ್ಜು ಬೇಗನೆ ಕರಗುತ್ತೆ..!

ಪ್ರತೀ ಊರಿನಲ್ಲಿ ಎಳನೀರು ಸಿಗುತ್ತದೆ. ಇದನ್ನು ನಿಯಮಿತವಾಗಿ ಕುಡಿಯುತ್ತಾ ಬಂದರೆ ತೂಕವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡಬಹುದು.

ಎಳನೀರಿನಿಂದ ತೂಕ ಕಡಿಮೆಯಾಗೋದು ಹೇಗೆ?

ಎಳನೀರು ನೈಸರ್ಗಿಕ ಸಕ್ಕರೆಯನ್ನು ಹೊಂದಿದ್ದು, ಅಲ್ಪ ಪ್ರಮಾಣದ ಕಾರ್ಬೋಹೈಡ್ರೇಟ್ಗಳು ಅದರಲ್ಲಿ ಕಂಡುಬರುತ್ತವೆ.

ಇದು ಚಯಾಪಚಯವನ್ನು ಹೆಚ್ಚಿಸುವುದರೊಂದಿಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.ಇದನ್ನು ಒಮ್ಮೆ ಕುಡಿದರೆ ಬಹಳ ಹೊತ್ತು ಹೊಟ್ಟೆ ತುಂಬಿದ ಅನುಭವವಾಗುತ್ತದೆ.ಹಾಗಾಗಿ ಓವರ್ ಈಟ್ ಮಾಡುವ ಅಪಾಯ ತಪ್ಪುತ್ತದೆ. ಎಳನೀರು ಹೆಚ್ಚು ಖನಿಜಗಳನ್ನು ಹೊಂದಿದ್ದು, ಹಣ್ಣಿನ ರಸಕ್ಕಿಂತ ಹೆಚ್ಚು ಪ್ರಯೋಜನಕಾರಿಯಾಗಿದೆ.

ಹೃದಯಾಘಾತ ಅಪಾಯವನ್ನ ಕಡಿಮೆ ಮಾಡುತ್ತೆ

ತೂಕ ಹೆಚ್ಚಳದಿಂದ ದೇಹ ಸೌಂದರ್ಯ ಹಾಳಾಗುವುದು ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದಲ್ಲ.ತೂಕ ಹೆಚ್ಚಳವಾದ ಹಾಗೆ ಅಧಿಕ ಕೊಲೆಸ್ಟ್ರಾಲ್,ಮಧುಮೇಹ,ಅಧಿಕ ಬಿಪಿ ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

ಎಳನೀರನ್ನು ಯಾವಾಗ ಕುಡಿಯಬೇಕು? :

ಎಳನೀರನ್ನು ಯಾವ ಸಮಯದಲ್ಲಿ ಬೇಕಾದರೂ ಕುಡಿಯಬಹುದು.ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಇದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.ಅಲ್ಲದೆ ಅದರ ಪರಿಣಾಮ ದಿನವಿಡೀ ಗೋಚರಿಸುತ್ತದೆ.

ಎಳನೀರಿನಲ್ಲಿ ಕಂಡುಬರುವ ಪೋಷಕಾಂಶಗಳು :

ಎಳನೀರು ಕುಡಿಯುವ ಅಭ್ಯಾಸವನ್ನು ಮಾಡಿದರೆ,ದೇಹವು ವಿಟಮಿನ್,ಖನಿಜಗಳು ಮತ್ತು ನೈಸರ್ಗಿಕ ಕಿಣ್ವಗಳನ್ನು ಪಡೆಯುತ್ತದೆ.ಇದರಿಂದಾಗಿ ದೇಹವು ತೇವಾಂಶ ಮತ್ತು ತಾಜಾತನವನ್ನು ಅನುಭವಿಸುತ್ತದೆ.

Leave a Reply

Your email address will not be published. Required fields are marked *