ಅಕ್ರಮ ಚಿನ್ನ ಸಾಗಾಣಿಕೆ: ನಟಿ ರನ್ಯಾ ರಾವ್‌ಗೇ ₹102.55 ಕೋಟಿ ದಂಡ!

ಅಕ್ರಮ ಚಿನ್ನ ಸಾಗಾಣಿಕೆ: ನಟಿ ರನ್ಯಾ ರಾವ್‌ಗೇ ₹102.55 ಕೋಟಿ ದಂಡ!

ಬೆಂಗಳೂರು: ಅಕ್ರಮ ಚಿನ್ನ ಸಾಗಣೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಗಂಭೀರ ಸಿಕ್ಕುಬಿದ್ದಿದ್ದಾರೆ. ವಿದೇಶದಿಂದ 127.3 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಪ್ರಕರಣದಲ್ಲಿ ಡೈರೆಕ್ಟರೇಟ್ ಆಫ್ ರೆವಿನ್ಯೂ ಇಂಟೆಲಿಜೆನ್ಸ್ (DRI) ತನಿಖೆ ನಡೆಸಿ ಭಾರೀ ದಂಡ ವಿಧಿಸಿದೆ.

ಡಿಆರ್ಐ ಅಧಿಕಾರಿಗಳು ಮಾರ್ಚ್ 4ರಂದು ಚಿನ್ನವನ್ನು ಸೀಜ್ ಮಾಡಿ ರನ್ಯಾ ರಾವ್ ಅವರನ್ನು ಬಂಧಿಸಿದ್ದರು.ತನಿಖೆಯಲ್ಲಿ ರನ್ಯಾ ಚಿನ್ನ ಸಾಗಣೆ ಮಾಡಿದುದು ದೃಢಪಟ್ಟಿದ್ದು, ₹102.55 ಕೋಟಿ ದಂಡ ಪಾವತಿಸಲು ನೋಟಿಸ್ ನೀಡಲಾಗಿದೆ. ದಂಡ ಪಾವತಿಸದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಸಾಧ್ಯತೆ ಇದೆ.

ಇತರ ಆರೋಪಿಗಳಿಗೂ ಭಾರೀ ದಂಡ: ತರುಣ್ ಕೊಂಡೂರು ರಾಜು – 67.6 ಕೆಜಿ ಚಿನ್ನ ಕಳ್ಳಸಾಗಣೆ, ₹62 ಕೋಟಿ ದಂಡ, ಸಾಹಿಲ್ ಜೈನ್ ಮತ್ತು ಭರತ್ ಜೈನ್ – ತಲಾ 63.61 ಕೆಜಿ ಚಿನ್ನ ಕಳ್ಳಸಾಗಣೆ, ₹53 ಕೋಟಿ ದಂಡ ಒಟ್ಟು 2,500 ಪುಟಗಳ ದಾಖಲೆಗಳೊಂದಿಗೆ ನೋಟಿಸ್ ನೀಡಲಾಗಿದ್ದು, ಕ್ರಿಮಿನಲ್ ಕೇಸ್ ಕೂಡ ಮುಂದುವರಿಯಲಿದೆ.

ಕೋರ್ಟ್ ವಿಚಾರಣೆ: ಇಂದು ಹೈಕೋರ್ಟ್‌ನಲ್ಲಿ ಕಾಫಿಪೋಸಾ ಅರ್ಜಿ ವಿಚಾರಣೆ ನಡೆದಿದ್ದು, ಅದನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ. ಡಿಆರ್ಐ ಅಧಿಕಾರಿಗಳು ತ್ವರಿತಗತಿಯಲ್ಲಿ ತನಿಖೆ ಮುಂದುವರೆಸುತ್ತಿದ್ದಾರೆ.

For More Updates Join our WhatsApp Group :

https://chat.whatsapp.com/JVoHqE476Wn3pVh1gWNAcH

Leave a Reply

Your email address will not be published. Required fields are marked *