ವಡೋದರಾ: ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 15 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ ಪದ್ರಾ ಪಟ್ಟಣದ ಸಮೀಪವಿರುವ ಗಂಭೀರಾ ಗ್ರಾಮದ ಬಳಿ 40 ವರ್ಷಗಳಷ್ಟು ಹಳೆಯದಾದ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ ಹಲವಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದವು. ಪರಿಣಾಮ ನದಿಗೆ ವಾಹನ ಸಮೇತ ಬಿದ್ದಿದ್ದರಿಂತ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದರು. ನಂತರ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಅವರು, ‘ಬುಧವಾರ ರಾತ್ರಿ ನದಿಯಿಂದ ಇನ್ನೂ ಎರಡು ಶವಗಳು ಪತ್ತೆಯಾಗಿದೆ. ಹೀಗಾಗಿ ಸೇತುವೆ ಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ತಲುಪಿದೆ. ಈಗಲೂ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಗಾಯಗೊಂಡ ಐದು ಜನರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.ಗುಜರಾತ್ನಲ್ಲಿ ಸೇತುವೆ ಕುಸಿತ ಪ್ರಕರಣ, ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆ..!
ವಡೋದರಾ: ಗುಜರಾತ್ನ ವಡೋದರಾ ಜಿಲ್ಲೆಯಲ್ಲಿ ಮಹಿಸಾಗರ್ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿದ್ದ ಸೇತುವೆ ಕುಸಿದು ಬಿದ್ದ ಘಟನೆಯಲ್ಲಿ ಇನ್ನೂ ಎರಡು ಶವಗಳು ಪತ್ತೆಯಾಗಿದ್ದು, ಸಾವಿನ ಸಂಖ್ಯೆ 15 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಿಗ್ಗೆ ಪದ್ರಾ ಪಟ್ಟಣದ ಸಮೀಪವಿರುವ ಗಂಭೀರಾ ಗ್ರಾಮದ ಬಳಿ 40 ವರ್ಷಗಳಷ್ಟು ಹಳೆಯದಾದ ಸೇತುವೆಯ ಒಂದು ಭಾಗ ಕುಸಿದ ಪರಿಣಾಮ ಹಲವಾರು ವಾಹನಗಳು ಮಹಿಸಾಗರ್ ನದಿಗೆ ಬಿದ್ದವು. ಪರಿಣಾಮ ನದಿಗೆ ವಾಹನ ಸಮೇತ ಬಿದ್ದಿದ್ದರಿಂತ ಕನಿಷ್ಠ 9 ಮಂದಿ ಸಾವನ್ನಪ್ಪಿದ್ದರು. ನಂತರ ಸಾವಿನ ಸಂಖ್ಯೆ ಏರಿಕೆಯಾಗಿದ್ದು, ಈ ವರೆಗೆ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ವಡೋದರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಆನಂದ್ ಅವರು, ‘ಬುಧವಾರ ರಾತ್ರಿ ನದಿಯಿಂದ ಇನ್ನೂ ಎರಡು ಶವಗಳು ಪತ್ತೆಯಾಗಿದೆ. ಹೀಗಾಗಿ ಸೇತುವೆ ಕುಸಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 15 ಕ್ಕೆ ತಲುಪಿದೆ. ಈಗಲೂ ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಘಟನೆಯಲ್ಲಿ ಗಾಯಗೊಂಡ ಐದು ಜನರು ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.
ರಾತ್ರಿ ಪತ್ತೆಯಾಗಿರುವ ಇಬ್ಬರು ಮೃತದೇಹಗಳನ್ನು ಮೆಹ್ರಾಮ್ ಹಥಿಯಾ (51) ಮತ್ತು ವಿಷ್ಣು ರಾವಲ್ (27) ಎಂದು ಗುರುತಿಸಲಾಗಿದೆ. ಮಧ್ಯ ಗುಜರಾತ್ ಅನ್ನು ರಾಜ್ಯದ ಸೌರಾಷ್ಟ್ರ ಪ್ರದೇಶಕ್ಕೆ ಸಂಪರ್ಕಿಸುವ ಗಂಭೀರ-ಮುಜ್ಪುರ ಸೇತುವೆಯ ಸ್ಲ್ಯಾಬ್ ಬುಧವಾರ ಬೆಳಿಗ್ಗೆ 7 ಗಂಟೆ ಸುಮಾರಿಗೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ ಸೇತುವೆಯ ಮೂಲಕ ಹಾದುಹೋಗುತ್ತಿದ್ದ ವಾಹನಗಳು ನದಿಗೆ ಉರುಳಿದವು. ರಕ್ಷಿಸಲಾದ ಒಂಬತ್ತು ಜನರಲ್ಲಿ ಐವರು ಗಾಯಗೊಂಡಿದ್ದು, ವಡೋದರಾದ ಎಸ್ಎಸ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆನಂದ್ ಹೇಳಿದರು, ಗಾಯಗೊಂಡವರಲ್ಲಿ ಯಾರ ಸ್ಥಿತಿಯೂ ಗಂಭೀರವಾಗಿಲ್ಲ ಎಂದು ಹೇಳಿದರು.