ದಾಖಲೆಯ ಜಿಎಸ್‌ಟಿ ಸಂಗ್ರಹ : ಕರ್ನಾಟಕದಲ್ಲಿ ಎಷ್ಟು?

ನವದೆಹಲಿ: ಈ ಬಾರಿಯ ಏಪ್ರಿಲ್‌ ತಿಂಗಳಿನಲ್ಲಿ ದಾಖಲೆಯ 2.10 ಲಕ್ಷ ಕೋಟಿ ರೂ. ಜಿಎಸ್‌ಟಿ (GST) ಸಂಗ್ರಹವಾಗಿದ್ದು, ದೇಶದಲ್ಲಿ ಜಿಎಸ್‌ಟಿ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಅತಿಹೆಚ್ಚು ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರೀಯ ಹಣಕಾಸು ಸಚಿವಾಲಯ ಸೋಮವಾರ ತಿಳಿಸಿದೆ

ಜಿಎಸ್‌ಟಿ ಜಾರಿಯಾದ ನಂತರ ಪ್ರತಿ ಏಪ್ರಿಲ್‌ ತಿಂಗಳಿನಲ್ಲಿ ಹೆಚ್ಚು ತೆರಿಗೆ ಸಂಗ್ರವಾಗುತ್ತಿದೆ. 2022ರ ಏಪ್ರಿಲ್‌ಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾದರೆ ಕಳೆದ ವರ್ಷದ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು.ಇದೇ ಮೊದಲ ಬಾರಿಗೆ ಜಿಎಸ್‌ಟಿ ಸಂಗ್ರಹ 2 ಲಕ್ಷ ಕೋಟಿ ರೂ. ಗಡಿ ದಾಟಿದೆ

ಕಳೆದ ಏಪ್ರಿಲ್‌ಗೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 12.4% ಏರಿಕೆಯಾಗಿದೆ. ಕರ್ನಾಟಕದಲ್ಲಿ ಈ ಬಾರಿ 15,978 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ. ಕಳೆದ ಏಪ್ರಿಲ್‌ನಲ್ಲಿ 14,593 ಕೋಟಿ ರೂ. ಸಂಗ್ರಹವಾಗಿತ್ತು.

ಯಾವ ರಾಜ್ಯದ್ದು ಎಷ್ಟು?
ಮಹಾರಾಷ್ಟ್ರ 37,671 ಕೋಟಿ ರೂ., ಗುಜರಾತ್‌ 13,301 ಕೋಟಿ ರೂ., ಉತ್ತರ ಪ್ರದೇಶ 12,290 ಕೋಟಿ ರೂ., ಹರ್ಯಾಣ 12,168 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದೆ.

Click here to join Pragathi webportal Whatsapp group : https://chat.whatsapp.com/FgmwH9BYVs9IxV4fA1um2M

Leave a Reply

Your email address will not be published. Required fields are marked *