ಲೇಖನ : ಗಂಗಾಧರ ಮೊದಲಿಯಾರ್, ಬೆಂಗಳೂರು
ನಾಗಮಂಗಲದಲ್ಲಿ ಗಣೇಶ ಮೂರ್ತಿಯ ಮೆರವಣಿಗೆ ಸಂದರ್ಭದಲ್ಲಿ ನಡೆದ ಗಲಭೆ, ದರ್ಶನ್ ಬಳ್ಳಾರಿ ಜೈಲಿನಲ್ಲಿ ಮಾಡುತ್ತಿರುವ ಕಿರಿಕಿರಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿರುವ ಮುಡಾ ನಿವೇಶನಗಳ ವಿವಾದ ಹೀಗೆ ದಿನವಿಡೀ ಏಕೆ ವಾರವಿಡೀ ಇಪ್ಪತ್ತನಾಲ್ಕು ಗಂಟೆಗಳ ಕಾಲ ಹೇಳುತ್ತಲೇ ಇರುವ ವಿಷಯಗಳು ಟಿವಿ ಸುದ್ದಿ ಚಾನಲ್ಗಳ ಮುಂದೆ ಸಾಲುಗಟ್ಟಿ ನಿಂತಿವೆ. ಟಿವಿ ಸುದ್ದಿ ಚಾನಲ್ ವೀಕ್ಷಕರಿಗೂ ಈಗ ಟಿವಿ ಚಾನಲ್ಗಳು ಹೇಗೆ ಒಂದೇ ವಿಷಯವನ್ನು ಹೇಳುತ್ತಲೇ ಇರುತ್ತವೆ ಎನ್ನುವುದು ಗೊತ್ತಾಗಿದೆ. ಅದೇನೂ ಗುಟ್ಟಾಗಿ ಉಳಿದಿಲ್ಲ. ಈ ವಿಷಯದಲ್ಲಿ ಟಿವಿ ಸುದ್ದಿ ಚಾನಲ್ಗಳು ಪತ್ರಿಕಾಧರ್ಮವನ್ನು ಮೀರಿ ಮುಂದೆ ಹೋಗಿರುವುದಂತೂ ಸ್ಪಷ್ಟ. ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳು ಪತ್ರಿಕಾ ಧರ್ಮವನ್ನು ಹೇಗೆ ತಮ್ಮದೇ ನಿಲುವಿಗೆ ಒಗ್ಗಿಸಿಕೊಂಡು ಮೂಲತತ್ವವನ್ನು ಗಾಳಿಗೆ ತೂರಿವೆ ಎನ್ನುವುದು ದಿನದಿಂದ ದಿನಕ್ಕೆ ಗೋಚರವಾಗುತ್ತಿದೆ.
ವಾಯುವ್ಯ ದೆಹಲಿಯ ಜಹಾಂಗೀರ್ಪುರಿಯಲ್ಲಿ ಹನುಮ ಜಯಂತಿ ಮೆರವಣಿಗೆಯಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿತ್ತು. ಈ ಘಟನೆಯನ್ನು ಸುದ್ದಿ ಚಾನಲ್ಗಳು ಜನರನ್ನು ಉದ್ರೇಕಗೊಳಿಸಲು ಬಳಸಿಕೊಂಡವು. ಟಿಆರ್ಪಿ ಹೆಚ್ಚಿಸಿಕೊಳ್ಳುವುದೂ ಒಂದು ಕಾರಣವಿರಬಹುದು. ಮಾಧ್ಯಮ ಸ್ವಾತಂತ್ರ÷್ಯ ಸೂಚ್ಯಂಕ ದಾಖಲಿಸಿರುವಂತೆ 2014 ರಿಂದ ಮೋದಿ ಸರ್ಕಾರ ಬಂದAದಿನಿAದ ಭಾರತೀಯ ಮಾಧ್ಯಮವು ಅಘೋಷಿತ ತುರ್ತು ಪರಿಸ್ಥಿತಿಯ ಮಟ್ಟವನ್ನು ತಲುಪಿದೆ. ದೇಶದ ಮಾಧ್ಯಮದ ಹೆಚ್ಚಿನ ಸಂಸ್ಥೆಗಳನ್ನು ನಡೆಸುವ ಉದ್ಯಮಿಗಳು ಹಾಗೂ ಬಿಜೆಪಿಯ ನಡುವೆ ಉತ್ತಮ ಸಂಬAಧ ಕಳೆದ ಹತ್ತು ವರ್ಷಗಳಿಂದ ಗಟ್ಟಿಯಾಗುತ್ತಲೇ ಸಾಗಿದೆ. ಗೋದಿ ಮೀಡಿಯಾಗಳ ಸಂಖ್ಯೆ ಏರಿದೆ. ಸರ್ಕಾರದ ಎಲ್ಲ ನಿಲುವುಗಳನ್ನೂ ಹೊಗಳುವ, ಪ್ರಧಾನಿಯನ್ನು ಪ್ರಶ್ನಾತೀತರನ್ನಾಗಿ ವಿಜೃಂಭಿಸುವ ಪ್ರವೃತ್ತಿ ಟಿವಿ ಸುದ್ದಿ ಚಾನಲ್ಗಳಲ್ಲಿ ಹೆಚ್ಚಾಗಿರುವುದರಿಂದಲೇ ಈ ರೀತಿ ಏಕಪಕ್ಷೀಯ ಗುಣಗಾನದಲ್ಲಿ ಸುದ್ದಿ ಚಾನಲ್ಗಳು ತೊಡಗಿಸಿಕೊಂಡಿವೆ. 135 ದೇಶಗಳಲ್ಲಿ ಮಾಧ್ಯಮಗಳನ್ನು ಸರ್ಕಾರಗಳು ಇಲ್ಲವೇ ಉದ್ಯಮ ಸಂಸ್ಥೆಗಳು ನಿಯಂತ್ರಿಸುತ್ತಿವೆ ಎಂದು ಒಂದು ವರದಿ ಹೇಳುತ್ತದೆ. ಹನುಮ ಜಯಂತಿ ಆಗಿರಬಹುದು, ಗಣೇಶ ಮೂರ್ತಿ ಮೆರವಣಿಗೆ ಆಗಿರಬಹುದು ಎರಡೂ ವಿಷಯಗಳಲ್ಲಿ ಸುದ್ದಿ ವಾಹಿನಿಗಳು ನಡೆದುಕೊಳ್ಳುತ್ತಿರುವ ರೀತಿಗೆ ಮತ್ತು ಸಮಾಜಕ್ಕೆ ರವಾನಿಸುತ್ತಿರುವ ಸಂದೇಶಗಳ ಬಗ್ಗೆ ಸರ್ಕಾರಕ್ಕೆ ತೀವ್ರ ಕಳವಳವಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹೇಳಿದೆ. ವಾಯುವ್ಯ ದೆಹಲಿಯಲ್ಲಿನ ಹಿಂಸಾಚಾರದ್ದು ಎಂದು ಹೇಳಲಾದ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸದೇ ಪ್ರಕಟಿಸಲಾಗಿದೆ, ಈ ಸಂಬAಧ ನಡೆದ ಚರ್ಚೆಗಳು ಅಸಂಸದೀಯ, ಪ್ರಚೋದನಕಾರಿ ಮತ್ತು ಸಾಮಾಜಿಕವಾಗಿ ಸ್ವೀಕೃತವಲ್ಲದ ಭಾಷೆಯನ್ನು ಹೊಂದಿದ್ದವು ಎಂದು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೆ, ಸರ್ಕಾರದ ಪ್ರಸಾರ ಸಂಹಿತೆಯನ್ನು ಪಾಲಿಸಬೇಕು ಎಂದು ಕಠಿಣ ಎಚ್ಚರಿಕೆ ನೀಡಿದೆ. ಆದರೆ ಕೇಂದ್ರ ಸರ್ಕಾರದ ಕೈಗೊಂಬೆಯೇ ಆಗಿರುವ, ಸರ್ಕಾರದ ಜಾಹೀರಾತನ್ನು ಅಂಗಲಾಚಿ ಪಡೆದುಕೊಳ್ಳುವ ಕೃಪಾಕಟಾಕ್ಷಕ್ಕೆ ಒಳಗಾಗಿರುವ ಸುದ್ದಿ ವಾಹಿನಿಗಳು ಪತ್ರಿಕಾಧರ್ಮವನ್ನು ಮೂಲೆಗುಂಪು ಮಾಡಿ ಬಹಳ ವರ್ಷಗಳೇ ಆಗಿವೆ ಎನ್ನುವುದನ್ನೂ ಮರೆಯಬಾರದು.
ಸುದ್ದಿ ಚಾನಲ್ಗಳು ಇನ್ನೂ ಮುಂದೆ ಹೋಗಿ, ಭೂಮಿಗೆ ಕ್ಷುದ್ರ ಗ್ರಹವೊಂದು ಅಪ್ಪಳಿಸುತ್ತದೆ ಎಂದು ಬೊಬ್ಬಿರಿದು, ಹೆದರಿಸುತ್ತವೆ. ಅಣ್ವಸ್ತç ಪ್ರಯೋಗಕ್ಕೆ ಪುಟಿನ್ ಸಿದ್ಧತೆ, ಪರಮಾಣು ದಾಳಿ ಭೀತಿ, ಮೂರನೇ ಮಹಾಯುದ್ಧ ಫಿಕ್ಸ್ ಎಂಬೆಲ್ಲಾ ತಲೆಬರಹಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ಉನ್ನಾದಕ್ಕೆ , ಆತಂಕಕ್ಕೆ ತಳ್ಳುವ ಪ್ರವೃತಿಯನ್ನು ಟಿವಿ ಚಾನಲ್ಗಳು ಬೆಳೆಸಿಕೊಂಡಿವೆ. ಇಂತಹ ಊಹಾಪೋಹದ ಸುದ್ದಿಗಳು ವೀಕ್ಷಕರನ್ನು ದಾರಿ ತಪ್ಪಿಸುತ್ತವಲ್ಲದೆ, ಮಾನಸಿಕವಾಗಿ ಜನ ಕುಗ್ಗುವಂತೆ, ಆತಂಕಕ್ಕೆ ಒಳಗಾಗುವಂತೆ ಮಾಡುತ್ತವೆ ಎನ್ನುವುದನ್ನು ಕೇಂದ್ರ ಸರ್ಕಾರ ಎಚ್ಚರಿಕೆ ರೂಪದಲ್ಲಿ ಹೇಳಿದೆ. ಟಿವಿ ಜಾಲಗಳು ನಿಯಂತ್ರಣ ಕಾಯ್ದೆ 1995 ಮತ್ತು ಅದರ ಅಡಿಯಲ್ಲಿನ ನಿಯಮ ಮತ್ತು ನಿಬಂಧನೆಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಯಾವುದೇ ಸುದ್ದಿ ಪ್ರಕಟಣೆ ಮತ್ತು ಪ್ರಸಾರವನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಕಠಿಣ ಎಚ್ಚರಿಕೆ ನೀಡಿದೆ. ಆದರೂ ಸುದ್ದಿ ಚಾನಲ್ಗಳು ಬ್ರೇಕಿಂಗ್ ನ್ಯೂಸ್ ನೆಪದಲ್ಲಿ ರೋಚಕತೆಗೆ ಆದ್ಯತೆ ನೀಡುತ್ತಿವೆ.
ದರ್ಶನ್ ವಿಷಯವಾಗಿ ಕಳೆದ 89 ದಿನಗಳಿಂದ ಸತತವಾಗಿ ದಿನವಿಡೀ ಪ್ರಸಾರ ಮಾಡುತ್ತಿರುವ ಕನ್ನಡದ ಸುದ್ದಿ ಚಾನಲ್ಗಳ ವಿಷಯವನ್ನೇ ನೋಡೋಣ. ದಿನಕ್ಕೊಂದು ಬ್ರೇಕಿಂಗ್ ನ್ಯೂಸ್ ಕೊಡುವ ಅತ್ಯುತ್ಸಾಹದಲ್ಲಿ ಟಿವಿ ಸುದ್ದಿ ಚಾನಲ್ಗಳ ವರದಿಗಾರರು, ಛಾಯಾಗ್ರಾಹಕರು ಜೈಲಿನ ಗೇಟಿನ ಬಳಿಯೇ ಕಾದು ನಿಂತಿರುವುದು ಸಾಮಾನ್ಯ ದೃಶ್ಯ. ಹೀಗೆ ಜೈಲಿನ ಗೇಟಿನ ಬಳಿ ಕಾಯುವ ವರದಿಗಾರರು ಒಳಗೆ ನಡೆಯುವ ಸುದ್ದಿಗಳನ್ನು ಸಿಬ್ಬಂದಿಯಿAದಲೇ ಕೇಳಿ ತಿಳಿದುಕೊಳ್ಳುತ್ತಾರೆ. ಜೈಲಿನಲ್ಲಿ ದರ್ಶನ್ಗೆ ಊಟ ಸೇರಲಿಲ್ಲ, ಹತ್ತು ಕೇಜಿ ಸಣ್ಣಗಾದ ದರ್ಶನ್, ಖಿನ್ನತೆಗೆ ಜಾರಿದ ದರ್ಶನ್ ಮೊದಲಾದ ಬ್ರೇಕಿಂಗ್ ನ್ಯೂಸ್ಗಳನ್ನು ಪ್ರತಿನಿತ್ಯ ಹಾಕಿ ರೋಚಕತೆ ಹುಟ್ಟುಹಾಕಿದ್ದು ಹಳೆಯ ಸಂಗತಿ. ದಿನವೂ ದರ್ಶನ್ ಸುದ್ದಿಯನ್ನು ಪುಂಖಾನುಪುAಖವಾಗಿ ಪ್ರಸಾರ ಮಾಡಿದ ಟಿವಿ ಚಾನಲ್ಗಳ ಒಬ್ಬನೇ ಒಬ್ಬ ವರದಿಗಾರರ ಜೈಲಿನೊಳಗೆ ತೆರಳಿ ದರ್ಶನ್ ಅವರನ್ನು ಭೇಟಿಯಾಗಿಲ್ಲ. ಪರಪ್ಪನ ಅಗ್ರಹಾರ ಸೆರೆಮನೆಯ ಮುಂದಿರುವ ಸೆಕ್ಯುರಿಟಿಗಳು ಹೇಳಿದ ಸುದ್ದಿಯನ್ನೇ ಎಲ್ಲರೂ ಅವಲಂಭಿಸಿದ್ದರು. ವರದಿಗಾರರು ಪತ್ರಿಕಾಧರ್ಮವನ್ನು ಮರೆತಿದ್ದರು. ಜೈಲು ಸಿಬ್ಬಂದಿ ಸುಳ್ಳು ಹೇಳಿ ಇವರನ್ನು ಸಾಗಹಾಕುವುದನ್ನು ಅಭ್ಯಾಸ ಮಾಡಿಕೊಂಡಿದ್ದರು. ಎಲ್ಲ ಚಾನಲ್ಗಳಿಗೂ ಶಾಕ್ ಆದ ಸಂಗತಿಯೊAದು ವಾಟ್ಸಾಪ್ನ ಚಿತ್ರವೊಂದರಿAದ ಬಹಿರಂಗವಾಯಿತು. ಪರಪ್ಪನ ಅಗ್ರಹಾರ ಜೈಲಿನ ಒಳಗಡೆ ಉದ್ಯಾನದಲ್ಲಿ ದರ್ಶನ್ ಒಂದು ಕೈಯಲ್ಲಿ ಸಿಗರೇಟ್, ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದುಕೊಂಡು ನಗುನಗುತ್ತಾ ಜಾಲಿಯಾಗಿ, ವಿಲ್ಸನ್ ಗಾರ್ಡನ್ ನಾಗ, ಕುಳ್ಳಸೀನ ಹಾಗೂ ದರ್ಶನ್ನ ವ್ಯವಸ್ಥಾಪಕ ನಾಗರಾಜ್ ರೌಂಡ್ ಟೇಬಲ್ ಪಾರ್ಟಿ ಮಾಡುತ್ತಿರುವ ಚಿತ್ರವೊಂದು ವಾಟ್ಸಾಪ್ನಲ್ಲಿ ಹರಿದಾಡಿದಾಗ! ಎಲ್ಲ ಸುದ್ದಿ ಚಾನಲ್ಗಳಲ್ಲಿ ಅದುವರೆಗೆ ಬರುತ್ತಿದ್ದ ವರದಿಗಳು ಎಷ್ಟು ಸುಳ್ಳಾಗಿದ್ದವು ಎನ್ನುವುದನ್ನು ಈ ಚಿತ್ರ ಸಾರಿಸಾರಿ ಹೇಳುತ್ತಿತ್ತು. ಜೈಲಿನೊಳಗೆ ದರ್ಶನ್ಗೆ ಈ ರೀತಿಯ ವಿಶೇಷ ಉಪಚಾರ ನೀಡುತ್ತಿದ್ದುದು, ಸಿಗರೇಟ್, ಚಿಕನ್ ಬಿರಿಯಾನಿ, ಮೊಬೈಲ್ ಇವೆಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದ್ದ ಸಿಬ್ಬಂದಿಯೇ ಸುದ್ದಿಗಾರರಿಗೆ ವ್ಯತಿರಿಕ್ತವಾದ ಸುದ್ದಿಗಳನ್ನು ನೀಡಿ ದಾರಿ ತಪ್ಪಿಸಿದ್ದರು. ಜೈಲಿನೊಳಗೇ ರೌಡಿಗಳ ನಡುವೆ ನಡೆದ ಅಂತಃಕಲಹದಿAದ ಇಂತಹ ಫೋಟೊ ಒಂದು ಬಹಿರಂಗವಾಗಿತ್ತು. ಟಿವಿ ಸುದ್ದಿ ಚಾನಲ್ಗಳಿಗೆ ಶಾಕ್ ನೀಡಿತ್ತು. ಆನಂತರ ಈ ಫೋಟೋ ಇಟ್ಟುಕೊಂಡೇ ಟಿವಿ ಸುದ್ದಿ ಚಾನಲ್ಗಳು ಬೇರೆಯದೇ ಕತೆಯನ್ನು ಹೆಣೆಯಲಾರಂಭಿಸಿದವು. ಸುವರ್ಣ ಏಷ್ಯಾನೆಟ್ ಚಾನಲ್ನಲ್ಲಿ ಆಂಕರ್ ಆಗಿರುವ ಅಜಿತ್ ಹನುಮಕ್ಕನವರ್ ಅವರ ವಿಶ್ಲೇಷಣೆ ಹೀಗಿದೆ: “ಇದುವರೆಗೆ ನಾವು ದರ್ಶನ್ ಜೈಲಿನೊಳಗೆ ಪಶ್ಚಾತಾಪ ಪಡುತ್ತಿದ್ದಾರೆ, ಸೊರಗಿದ್ದಾರೆ, 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದೆಲ್ಲಾ ಭಾವಿಸಿದ್ದೆವು. ಈಗ ಈ ಫೋಟೋ ನೋಡಿದರೆ ದರ್ಶನ್ ಒಳ್ಳೇ ದನಾ ಇದ್ದಂಗೆ ಇದಾನಲ್ರಿ, ಒಳೆ ಐವಾನ ಕಂಡ್ರೀ” ಎಂದು ಅವರು ನೇರವಾಗಿಯೇ ಟೀಕಿಸಿದರು. ಇದು ತಪ್ಪೊಪ್ಪಿಗೆಯೋ, ನಾವು ಎಡವಿದ್ದೇವೆ ಎನ್ನುವುದರ ಸ್ಪಷ್ಟನೆಯೋ, ಅಥವಾ ಜಾಣ ನಡೆಯೋ ಎನ್ನುವುದು ತಿಳಿಯುವುದಿಲ್ಲ.
ಈಗ ಬಳ್ಳಾರಿ ಜೈಲಿನಲ್ಲಿ, ದರ್ಶನ್, ದಿನಕ್ಕೊಂದು ದಮ್ಕಿ ಹಾಕುತ್ತಿರುವ ವರದಿಗಳು ಟಿವಿ ಚಾನಲ್ಗಳಲ್ಲಿ ಹರಿದಾಡುತ್ತಿದೆ. “ಮುಂದೆ ನಂದೇನಿದ್ರೂ ರಾಜಕೀಯನೇ ಆಗ ನಿಮ್ಮನ್ನೆಲ್ಲಾ ನೊಡ್ಕೋತೇನೆ” ಎಂದು ಜೈಲು ಸಿಬ್ಬಂದಿಗೆ ಹೆದರಿಸುತ್ತಿರುವ ಸುದ್ದಿ ಬಂದಿದೆ. ಎಷ್ಟು ನಿಜ? ವರದಿಗಾರರಿಗೂ ಗೊತ್ತಿಲ್ಲ. ದರ್ಶನ್ ಮಧ್ಯದ ಬೆರಳು ತೋರಿಸಿದ್ದೂ ಮೀಡಿಯಾದವರಿಗೇ ಎನ್ನುವುದು ಟಿವಿ ಚಾನಲ್ಗಳಿಗೆ ಮುಖಭಂಗವಾದOತಾಗಿದೆ. ಆದುದರಿಂದಲೇ ಸರ್ಕಾರ ಸುಳ್ಳು ಸುದ್ದಿಗಳನ್ನು ಪ್ರಕಟಿಸಬೇಡಿ ಎಂದು ಎಚ್ಚರಿಸುತ್ತಲೇ ಇದೆ.
ಸುದ್ದಿ ಚಾನಲ್ಗಳ ಈ ರೀತಿಯ ಅತಿರೇಕದಿಂದ ನೋಡುಗರು ಹೇಗೆ ಜಿಗುಪ್ಸೆ ಹೊಂದಿದ್ದಾರೋ ಅದೇ ರೀತಿ ಟಿವಿ ಧಾರಾವಾಹಿಗಳ ಬಗ್ಗೆಯೂ ಬೇಸರ ಹೊಂದಿದ್ದಾರೆ. ಸುದ್ದಿ ಚಾನಲ್ಗಳಂತೆಯೇ ಧಾರಾವಾಹಿಗಳು, ಕಾಮಿಡಿ ಶೋ ಹೆಸರಿನಲ್ಲಿ ಡಬ್ಬಲ್ ಮೀನಿಂಗ್ ಸೀರಿಯಲ್ಗಳು, ಅಸಂಬದ್ಧ ಚರ್ಚೆಗಳ ಮೂಲಕ ಇಪ್ಪತ್ತನಾಲ್ಕು ಗಂಟೆ ಕಾರ್ಯಕ್ರಮ ನೀಡುವ ಹಠಕ್ಕೆ ಬಿದ್ದು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ನಾನಾ ತಂತ್ರಗಳನ್ನು ಬಳಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಪ್ರಸಾರವಾಗುವ ಧಾರಾವಾಹಿಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆಯಲ್ಲಿ, ದಯನೀಯ ಸ್ಥಿತಿಯಲ್ಲಿ ಪ್ರೇಕ್ಷಕನಿದ್ದಾನೆ. ಈ ಬಗ್ಗೆ ಚಾನೆಲ್ ಮಾಲೀಕನಾಗಲಿ, ಧಾರಾವಾಹಿ ನಿರ್ದೇಶಕ, ನಿರ್ಮಾಪಕನಾಗಲಿ ಕಿಂಚಿತ್ತೂ ಗಮನ ಹರಿಸುತ್ತಿಲ್ಲ ಎನ್ನುವುದು ಸ್ಪಷ್ಟ. ತಮಗೆ ಬೇಕಾದವರನ್ನು ವಿಜೃಂಭಿಸಲು ಧಾರಾವಾಹಿಗಳನ್ನು ನಿರ್ಮಿಸುವುದು, ವ್ಯಾಪಕ ಪ್ರಚಾರದ ಮೂಲಕ ಟಿಆರ್ಪಿ ಸೃಷ್ಟಿಸುವುದು, ಅದಕ್ಕಾಗಿ ಲಂಚ ಪಡೆಯುವುದು ಹೊಸ ವಿಷಯಗಳಲ್ಲ. ಬೇಕಾದವರನ್ನೂ, ಬೇಡವಾದವರನ್ನೂ ಕರೆದು ಕೂರಿಸಿಕೊಂಡು ಹರಟೆ ಹೊಡೆಯುವ ನೆಪದಲ್ಲಿ ನಿರೂಪಕರು ತಮಗೆ ತೋಚಿದ್ದನ್ನೇ ಹೇಳಿ, ಎಲ್ಲರ ಮೇಲೆ ತಮ್ಮ ಅಭಿಪ್ರಾಯವನ್ನೇ ಹೇರಿ, ನಾಟಕ ಮಾಡುವ ಸಂಗತಿಯೂ ಈಗ ಹಳತಾಯಿತು. ಬೆಳಿಗ್ಗೆ ಎದ್ದ ಕೂಡಲೇ ಭವಿಷ್ಯ ಹೇಳುವ ಖಯಾಲಿಯನ್ನು ಆರಂಭಿಸಿ, ಜನರನ್ನು ಮತ್ತಷ್ಟು ಮೌಢ್ಯಕ್ಕೆ ತಳ್ಳುತ್ತಿರುವುದೂ ಟಿವಿ ಚಾನಲ್ಗಳೇ. ಈಗಾಗಲೇ ಕಿರುತೆರೆಯಲ್ಲಿ ಭವಿಷ್ಯ ಹೇಳುವ ಪಿಡುಗು ವ್ಯಾಪಿಸಿ ಬಿಟ್ಟಿದೆ. ಬ್ರಹ್ಮಾಂಡದ ಹೆಸರಿನಲ್ಲಿ ಜನರನ್ನು ಬೆಚ್ಚಿ ಬೀಳಿಸುವ ಕಾರ್ಯಕ್ರಮಗಳಿಗೆ ಸರ್ಕಾರ ಇನ್ನೂ ಅಂಕುಶ ಹಾಕಿಲ್ಲ. ಆದರೆ ಲಂಡನ್ನಲ್ಲಿ ಟಿವಿ ಚಾನಲ್ ಒಂದು ಭವಿಷ್ಯ ವಿಭಾಗ ತೆರೆದು, ಅಸಂಬದ್ಧ ಸಂಗತಿಗಳನ್ನಲ್ಲಾ ಹೇಳಲಾರಂಭಿಸುತ್ತಿದ್ದಂತೆಯೇ ಅಲ್ಲಿನ ಸರ್ಕಾರ ಕಿರುತೆರೆಯಲ್ಲಿ ಭವಿಷ್ಯ ಪ್ರಸಾರ ನಿಷೇಧಿಸಿ ಆದೇಶ ಹೊರಡಿಸಿತು. ನಾವಿನ್ನೂ ಸಹಿಸಿಕೊಂಡಿದ್ದೇವೆ.
ನಮ್ಮ ಸುದ್ದಿ ಚಾನಲ್ಗಳಿಗಾಗಲಿ, ಮನರಂಜನಾ ಚಾನಲ್ಗಳಿಗಾಗಲಿ ಬದ್ಧತೆ ಎಂಬುದೇ ಇಲ್ಲ. ಕಾರ್ಯಕ್ರಮದಲ್ಲಿ ಸುಸಂಬದ್ಧತೆ ಇಲ್ಲ. ಒರಿಜನಲ್ ಆದರೂ ಪರವಾಗಿಲ್ಲ. ಡಬ್ಬಿಂಗ್ ಆದರೂ ಪರವಾಗಿಲ್ಲ. ಯಾರು ಹೆಚ್ಚು ಹಣ ಕೊಡುತ್ತಾರೋ ಅವರ ತುತ್ತೂರಿ ಊದುವುದರಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. ಇದೂ ಒಂದು ರೀತಿಯಲ್ಲಿ ಕಾಸಿಗಾಗಿ ಕಾರ್ಯಕ್ರಮ. ಈ ಹಿನ್ನೆಲೆ ಇಟ್ಟುಕೊಂಡಿರುವ, ಕಣ್ಣಿಗೆ ರಾಚುವಂತಹ ಬೌದ್ಧಿಕ ಭ್ರಷ್ಟಾಚಾರದಲ್ಲಿ ತೊಡಗಿರುವ ಚಾನಲ್ಗಳಿಂದ ಸಾಮಾಜಿಕ ಬದ್ಧತೆ ಇರುವ ಕಾರ್ಯಕ್ರಮಗಳನ್ನು ಹೇಗೆ ನಿರೀಕ್ಷಿಸುವುದು? ಪ್ರತಿಯೊಂದು ಕಾರ್ಯಕ್ರಮದಲ್ಲೂ ಒಂದೊಂದು ಗಿಮಿಕ್ ಸೃಷ್ಟಿಸುವುದು ಚಾನೆಲ್ಗಳ ಕೆಲಸ. ಹೀಗಾಗಿ ಪ್ರೇಕ್ಷಕರಿಗೆ ಈಗ ಸಿನಿಮಾಗಳೆಂದರೆ ಅಲರ್ಜಿ. ಟಿವಿ ಕಾರ್ಯಕ್ರಮಗಳೆಂದರೆ ಅಲರ್ಜಿ.