ಹಾಸನ: ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಮಂಗಳವಾರ ರಾತ್ರಿ ಹಾಸನದ ಹಾಸನಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟವಾದ ಘಟನೆ ನಡೆದಿದ್ದು, ಪೂಜಾ ವೇಳೆ ಹಾಸನಾಂಬೆ ದೇವಿ ಡಿಕೆ ಶಿವಕುಮಾರ್‌ರ ಮೇಲೆ ಬಲಗಡೆಯಿಂದ ಹೂವನ್ನೆಸೆದಿದ್ದಾಳೆ!
ಇದು ಮೊದಲಬಾರಿಯಲ್ಲ. ಇದೇ ರೀತಿಯಾಗಿ ಹಿಂದೆಯೂ ಇಬ್ಬರು ಬಾರಿಯಂತೆ ಹಾಸನಾಂಬೆಯ ಹೂವು ಡಿಕೆ ಶಿವಕುಮಾರ್ ಅವರ ಮೇಲಿಂದ ಬಲಗಡೆಯಿಂದ ಬಿದ್ದಿತ್ತು. ಈ ಹಿನ್ನೆಲೆ ಇದೀಗ ರಾಜಕೀಯ ವಲಯದಲ್ಲೂ ಹಾಗೂ ಭಕ್ತರಲ್ಲಿ ಕೂಡ ಚರ್ಚೆಗೆ ಗ್ರಾಸವಾಗಿದೆ — “ಡಿಕೆ ಶಿವಕುಮಾರಿಗೆ ಸಿಎಂ ಹುದ್ದೆಗೆ ಹಾಸನಾಂಬೆ ಆಶೀರ್ವಾದವೋ?”
ರಾಜ್ಯ ರಾಜಕೀಯದಲ್ಲಿ ಇಂತಹ ದೃಶ್ಯಗಳು ಭಾವನಾತ್ಮಕ ಮಹತ್ವ ಪಡೆದುಕೊಂಡಿರುವುದರಿಂದ, ಈ ಘಟನೆಗೆ ಈಗ ನಾನಾ ಅರ್ಥಹೊಂದಿಸಲಾಗುತ್ತಿದೆ. ಹಾಸನಾಂಬೆಯ ಈ ‘ಸಂಕೇತ’ ಡಿಕೆಶಿಗೆ ಸಿಎಂ ಪಟ್ಟದತ್ತ ದಾರಿ ತೆರೆಯಬಹುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
For More Updates Join our WhatsApp Group :
